Mangalore: ಮಂಗಳೂರಲ್ಲಿ ಕೈ-ಕಮಲ ಕಾರ್ಯಕರ್ತರ ನಡುವೆ ಘರ್ಷಣೆ, ಕಲ್ಲುತೂರಾಟ! ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರು ಸಂಪೂರ್ಣ ಧ್ವಂಸ

Mangaluru BJP Congress workers collision Mithun Rai Car Damaged

BJP Congress workers collision : ವಿಧಾನಸಭಾ ಚುನಾವಣೆಯ(Assembly Election) ದಿನವೇ ಮಂಗಳೂರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ (BJP Congress workers collision) ನಡೆದಿದ್ದು, ಮಂಗಳೂರು(Mangalore) ಹೊರವಲಯದ ಮುಡುಶೆಡ್ಡೆ(Madushedde) ಎಂಬಲ್ಲಿ ಗಲಾಟೆ ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಈ ಗಲಾಟೆಯಲ್ಲಿ ಮೂಡಬಿದರೆ(Moodbidre) ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ(Mithun Rai) ಕಾರು ದ್ವಂಸವಾಗಿದೆ.

ಹೌದು, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ (clash) ಉಂಟಾಗಿದ್ದು, ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಮಿಥುನ್​ ರೈ ಕಾರಿನ ಮೇಲೆ ಕಲ್ಲು ತೂರಾಟ ಮಾಡಿರುವಂತಹ ಘಟನೆ ಮಂಗಳೂರು ಹೊರವಲಯದ ಮುಡುಶೆಡ್ಡೆಯಲ್ಲಿ ನಡೆದಿದೆ. ಚುನಾವಣಾ ಪಕ್ಷದ ಬೂತ್​ಗೆ ಅಭ್ಯರ್ಥಿ ಮಿಥುನ್ ರೈ ಬಂದಾ ಕಾಂಗ್ರೆಸ್(Congress) ಕಾರ್ಯಕರ್ತರು ಜೈಕಾರ ಕೂಗಿದ್ದಾರೆ. ಈ ವೇಳೆ ಎರಡು ಪಕ್ಷದ ಕಾರ್ಯಕರ್ತರ ಮಧ್ಯೆ ಘರ್ಷಣೆಗೆ ಕಾರಣವಾಗಿದೆ. ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೈ – ಕಮಲ ಕಾರ್ಯಕರ್ತರ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಳಿದುಬಂದಿದೆ. ಇನ್ನು, ಈ ಕಲ್ಲು ತೂರಾಟದ ವೇಳೆ ಪೊಲೀಸ್ ಸಿಬ್ಬಂದಿ ತಲೆಗೆ ಸಹ ಗಾಯವಾಗಿದೆ. ಸ್ಥಳದಲ್ಲಿ ಬಿಜೆಪಿ – ಕಾಂಗ್ರೆಸ್‌ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ಕಾವೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್​ 144 ಜಾರಿ ಮಾಡಲಾಗಿದೆ.

ಈ ಕುರಿತು ಮಾತನಾಡಿದ ದ.ಕ ಪೊಲೀಸ್​ ಆಯುಕ್ತ ಕುಲದೀಪ್​ ಜೈನ್​(Kuladeep Jain) ಅವರು “ಮತದಾನ ಮುಗಿದ ಬಳಿಕ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ ನಡೆದಿದೆ. ಪರಸ್ಪರ ಘೋಷಣೆ ಕೂಗಿದ ವೇಳೆ ಗಲಾಟೆ ಆಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಿಸಿ ಹೆಚ್ಚುವರಿ ಭದ್ರತೆ ಹಾಕಲಾಗಿದೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮೂಡುಶೆಡ್ಡೆಯಲ್ಲಿ ಚೆಕ್ ಪೋಸ್ಟ್ ಹಾಕಿ ವಾಹನ ತಪಾಸಣೆ ನಡೆಸುತ್ತೇವೆ. ಬರುವ ಮತ್ತು ಹೊರಗಿನ ವಾಹನಗಳ ಮೇಲೆ ನಿಗಾ ಇಡಲಾಗುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:Karnataka Assembly election 2023 – ನಿನ್ನೆಯ ಚುನಾವಣೆಯಲ್ಲಿ ಏನೆಲ್ಲಾ ಅವಾಂತರ, ಎಡವಟ್ಟುಗಳಾದ್ವು? ಏನೇನು ಗಮನಸೆಳೆದ್ವು ಗೊತ್ತಾ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ

Leave A Reply

Your email address will not be published.