Karnataka Assembly election 2023: ಚುನಾವಣೆಗೆ ಖರ್ಚು ಮಾಡೋದ್ರಲ್ಲಿ ಕರ್ನಾಟಕವೇ ನಂ.1 ! ಹಾಗಾದ್ರೆ ರಾಜ್ಯದಲ್ಲಿ ಆಗೋ ಎಲೆಕ್ಷನ್ ವೆಚ್ಚವೆಷ್ಟು? ಎಲ್ಲಿಂದ ಬರುತ್ತೆ ಈ ಹಣ?
Karnataka assembly election Karnataka Top in polll expenditure
Poll Expenditure: ನಿನ್ನೆ ದಿನ (May 10) ಕರ್ನಾಟಕ ವಿಧಾನಸಭೆಗೆ (Karnataka Assembly) ಏಕ ಹಂತದ ಮತದಾನ(Election) ಅತ್ಯಂತ ಯಶಸ್ವಿಯಾಗಿ ನಡೆದಿದೆ. ನಾವು ನೋಡಿದ ಹಾಗೆ ಒಂದೇ ದಿನದಲ್ಲಿ ಚುನಾವಣೆ ಮುಗಿದು, ಎಲ್ಲವೂ ಸುಸೂತ್ರವಾಗಿ ನೆರವೇರಿದೆ. ಆದರೆ ಈ ಚುನಾವಣೆಗೆ ಏನೆಲ್ಲಾ, ಎಷ್ಟೆಲ್ಲಾ ತಯಾರಿ ಮಾಡಬೇಕು? ಇದಕ್ಕೆ ತಗಲುವ ವೆಚ್ಚ (Poll Expenditure) ಎಷ್ಟು? ಕೋಟಿ ಕೋಟಿ ರೂಪಾಯಿ ಎಲ್ಲಿಂದ ಹರಿದು ಬರುತ್ತದೆ ಗೊತ್ತಾ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಹೌದು, ನಮ್ಮ ರಾಜ್ಯದ ವಿಧಾನಸಭೆಗೆ ಶಾಸಕರನ್ನು ಆಯ್ಕೆ ಮಾಡಲು 224 ಕ್ಷೇತ್ರಗಳಲ್ಲಿ ಯಶಸ್ಸಿಯಾಗಿ ಚುನಾವಣೆ (Karnataka Assembly Elections 2023) ನಡೆದಿದೆ. ಆದರೆ ಇದರ ಹಿಂದಿರೋ ಶ್ರಮ, ಜವಾಬ್ದಾರಿಯ ಬಗ್ಗೆ, ಖರ್ಚು ವೆಚ್ಚಗಳ ಬಗ್ಗೆ ನೀವೇನಾದರೂ ಕೇಳಿದ್ರೆ ಸುಸ್ತುಹೊಡಿಯೋದಂತೂ ಗ್ಯಾರಂಟಿ!
ಅಂದಹಾಗೆ ಒಂದು ಚುನಾವಣೆ(election) ನಡೆಸಲು ಎಷ್ಟು ಖರ್ಚಾಗಬಹುದು ಎಂದು ಯಾರಿಗಾದರೂ ಕುತೂಹಲ ಉದ್ಭವಿಸಬಹುದು? ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮನೆಗಿಷ್ಟು ಹಣ ಹಂಚುತ್ತಿದ್ದಾರೆಂಬ ಮಾತುಗಳನ್ನು ಕೇಳಿರಬಹುದು. ಅವನ್ನು ಹೊರತುಪಡಿಸಿ ಚುನಾವಣೆ ಆಯೋಜಿಸಲು ಎಷ್ಟು ಖರ್ಚಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿಗೆ ಚುನಾವಣಾ ಆಯೋಗವು ಗರಿಷ್ಠ 40 ಲಕ್ಷ ರೂವರೆಗೂ ಖರ್ಚು ಮಾಡುವ ಮಿತಿ ಇದೆ. ಆದರೆ ಲೋಕಸಭಾ(Parliament) ಕ್ಷೇತ್ರಕ್ಕೆ ಈ ಮಿತಿ 95 ಲಕ್ಷ ರೂ ಇದೆ. ಅಂದಹಾಗೆ 2019ರ ಲೋಕಸಭಾ ಚುನಾವಣೆಯಲ್ಲಿ ಅಂದಾಜು 50,000-60,000 ಕೋಟಿ ರೂನಷ್ಟು ವೆಚ್ಚವಾಗಿತ್ತು ಎನ್ನಲಾಗಿದೆ.
ಚುನಾವಣೆ ಆಯೋಜನೆ ವೇಳೆ ಎಲೆಕ್ಷನ್ ಕಮಿಷನ್ನಿಂದ ಯಾವ್ಯಾವುದಕ್ಕೆ ವೆಚ್ಚ?
ಮತಪತ್ರಗಳ ಮುದ್ರಣ, ಮತದಾರ ಗುರುತಿನ ಚೀಟಿ ಮುದ್ರಣ, ಮತದಾನ ಜಾಗೃತಿ ಅಭಿಯಾನ, ಮತಗಟ್ಟೆ ಸಿಬ್ಬಂದಿ ಸಂಭಾವನೆ, ಚುನಾವಣಾ ವೀಕ್ಷಕರ ಸಂಭಾವನೆ
ಕಾರು, ಬಸ್ಸು ಇತ್ಯಾದಿ ಬಾಡಿಗೆ ಪಡೆದು ಆಗುವ ಸಾರಿಗೆ ವೆಚ್ಚ. ಇನ್ನು ಚುನಾವಣೆ ಆಯೋಜನೆಯಲ್ಲಿ ಅತಿಹೆಚ್ಚು ವೆಚ್ಚವಾಗುವುದು ಮತದಾನದ ದಿನವೇ. ಒಟ್ಟಾರೆ ವೆಚ್ಚದಲ್ಲಿ ಶೇ. 45ರಷ್ಟು ಭಾಗವು ಮತದಾನದ ದಿನದಂದೇ ಆಗುತ್ತದೆ.
ಚುನಾವಣಾ ಆಯೋಗಕ್ಕೆ(Election Commission) ತಗಲುವ ವೆಚ್ಚ ಎಷ್ಟು? ಪ್ರತೀ ಚುನಾವಣೆಯಲ್ಲಿ ಆಯೋಗವು ತನ್ನ ಬಜೆಟ್ನಿಂದಲೇ ಖರ್ಚು, ವೆಚ್ಚಗಳನ್ನು ಬರಿಸುತ್ತದೆ. ಹಾಗಾದರೆ ಚುನಾವಣೆ ಆಯೋಜಿಸುವ ಚುನಾವಣಾ ಆಯೋಗಕ್ಕೆ ಎಷ್ಟು ಖರ್ಚಾಗುತ್ತದೆ? 2013ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ 160 ಕೋಟಿ ರೂ ಖರ್ಚಾಗಿತ್ತು. ಒಂದು ಕ್ಷೇತ್ರಕ್ಕೆ ಸರಾಸರಿ 65 ಲಕ್ಷ ರೂ ವೆಚ್ಚವಾಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ಮಾಡಿದ ವೆಚ್ಚ 394 ಕೋಟಿ ರೂಗೆ ಏರಿತ್ತು. ಒಂದು ಕ್ಷೇತ್ರಕ್ಕೆ ಸರಾಸರಿ ತೆಗೆದುಕೊಂಡರೆ 1.75 ಕೋಟಿ ರೂ ಆಗುತ್ತದೆ. ಇನ್ನು ಈ ಬಾರಿಯ ಚುನಾವಣೆ ಇನ್ನೂ ಪೂರ್ಣಗೊಂಡಿಲ್ಲ. ಆದರೆ, ಫೆಬ್ರುವರಿ ತಿಂಗಳಲ್ಲಿ ಚುನಾವಣಾ ಆಯೋಗ ಮಾಡಿದ ಅಂದಾಜು ಪ್ರಕಾರ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ(Karnataka Assembly Election) 511 ಕೋಟಿ ರೂ ಖರ್ಚಾಗಬಹುದು ಎಂದಿದೆ. ಅಂದರೆ ಪ್ರತೀ ಕ್ಷೇತ್ರಕ್ಕೆ ಸರಾಸರಿಯಅಗಿ 2.2 ಕೋಟಿ ರೂನಂತೆ ಆಯೋಗವು ಖರ್ಚು ಮಾಡುತ್ತದೆ.
ಚುನಾವಣಾ ಆಯೋಗಕ್ಕೆ ಹಣ ಕೊಡುವವರು ಯಾರು?
ರಾಜ್ಯ ವಿಧಾನಸಭಾ ಚುನಾವಣೆಯನ್ನು ಆಯೋಜಿಸುವ ಚುನಾವಣಾ ಆಯೋಗಕ್ಕೆ ಹಣ ನೀಡುವುದು ಕರ್ನಾಟಕ ಸರ್ಕಾರವೇ. ಪೂರ್ವಭಾವಿಯಾಗಿ ರಾಜ್ಯ ಸರ್ಕಾರ 2022 ಡಿಸೆಂಬರ್ ತಿಂಗಳಲ್ಲಿ ಚುನಾವಣಾ ತಯಾರಿಗೆಂದು 300 ಕೋಟಿ ರೂ ಎತ್ತಿ ಇಟ್ಟಿತ್ತು. ಫೆಬ್ರುವರಿ ತಿಂಗಳಲ್ಲಿ ಚುನಾವಣೆ ಘೋಷಣೆ ಆದಾಗ ಆಯೋಗವು ಚುನಾವಣಾ ವೆಚ್ಚ 511 ಕೋಟಿ ರೂ ಎಂದು ಅಂದಾಜು ಸಲ್ಲಿಕೆ ಮಾಡಿತ್ತು. ಬಳಿಕ ಉಳಿದ 211 ಕೋಟಿ ರೂ ಅನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿತ್ತು.
ಭದ್ರತಾ ವ್ಯವಸ್ಥೆಯ ವೆಚ್ಚ ರಾಜ್ಯ ಸರ್ಕಾರದ್ದು
ಎಲ್ಲಾ ಕ್ಷೇತ್ರಗಳಲ್ಲೂ ವಿಶೇಷ ಭದ್ರತೆಗಾಗಿ ಅರೆಸೇನಾ ಪಡೆ, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಸಿಟಿವಿಗಳಿರುವ ಚೆಕ್ಪೋಸ್ಟ್ಗಳನ್ನು ವಿವಿಧೆಡೆ ಸ್ಥಾಪಿಸಲಾಗಿದೆ. ಅಭ್ಯರ್ಥಿಗಳ ಚುನಾವಣಾ ಖರ್ಚಿನ ಮೇಲೆ ಕಣ್ಣಿಡಲು ಮೊಬೈಲ್ ಸ್ಕ್ವಾಡ್ಗಳನ್ನು ಮಾಡಲಾಗಿದೆ. ಮತದಾನ ಕೇಂದ್ರ, ಮತ ಎಣಿಕೆ ಕೇಂದ್ರ ಇತ್ಯಾದಿ ಕಡೆ ಬಿಗಿಭದ್ರತೆಯ ವ್ಯವಸ್ಥೆ ಮಾಡಲಾಗಿದೆ. ಇವೆಲ್ಲಾ ವೆಚ್ಚವೂ ರಾಜ್ಯ ಸರ್ಕಾರದಿಂದ ಆಗುತ್ತದೆ.
ಕರ್ನಾಟಕದಲ್ಲೇ ಅತಿಹೆಚ್ಚು ಚುನಾವಣಾ ವೆಚ್ಚ
2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 10,000 ಕೋಟಿ ರೂನಷ್ಟು ಖರ್ಚಾಗಿತ್ತು. ಇದು ಹೊಸ ದಾಖಲೆ. ಸಾಮಾನ್ಯವಾಗಿ ಭಾರತದ ಇತರ ಭಾಗಗಳಿಗೆ ಹೋಲಿಸಿದರೆ ದಕ್ಷಿಣ ರಾಜ್ಯಗಳಲ್ಲಿ ಚುನಾವಣಾ ವೆಚ್ಚ ಹೆಚ್ಚು. ಇಲ್ಲಿ ಅಭ್ಯರ್ಥಿಗಳು ಗರಿಷ್ಠ ಹಣ ಖರ್ಚು ಮಾಡುತ್ತಾರೆ. ಅದರಲ್ಲೂ ಕರ್ನಾಟಕ ಚುನಾವಣಾ ವೆಚ್ಚದಲ್ಲಿ ನಂಬರ್ ಒನ್. ಆಂಧ್ರ ಪ್ರದೇಶ ಮತ್ತು ತಮಿಳುನಾಡು ನಂತರದ ಸ್ಥಾನಕ್ಕೆ ಬರುತ್ತವೆ.
ಇಷ್ಟಲ್ಲದೆ ಒಂದು ಚುನಾವಣೆ ನಡೆಸುವುದು ಸಾಧಾರಣ ಜವಾಬ್ದಾರಿ ಅಲ್ಲ. ಎಲ್ಲಿಯೂ ಅವಘಡಗಳು ಆಗದ ಹಾಗೆ ಎಚ್ಚರದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ. ರಾಜ್ಯದ 224 ಕ್ಷೇತ್ರಗಳಲ್ಲಿರುವ 58 ಸಾವಿರಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಭದ್ರತಾ ವ್ಯವಸ್ಥೆ ಮಾಡಬೇಕಾಗುತ್ತದೆ. ಎಲ್ಲಾ ಮತಗಟ್ಟೆಗೂ ಅವಶ್ಯ ಸಿಬ್ಬಂದಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕಾಗುತ್ತದೆ. ಪ್ರತಿಯೊಂದು ಮತಯಂತ್ರವೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಚುನಾವಣೆ ಘೋಷಣೆ ಆದ ದಿನದಿಂದ ಹಿಡಿದು ಮತದಾನವಾಗಿ ಮತ ಎಣಿಕೆ ಆಗುವವರೆಗೂ ಪ್ರತೀ ದಿನವೂ ಮಹತ್ವದ ಜವಾಬ್ದಾರಿಗಳೇ ಇರುತ್ತವೆ.