Pramoda Devi Wodeyar: ಅಯ್ಯಯ್ಯೋ.. ವೋಟ್ ಮಾಡಲು ವೋಟರ್ ಐಡಿ ಮರೆತು ಬಂದ ಪ್ರಮೋದಾ ದೇವಿ ಒಡೆಯರ್! ಮುಂದೇನಾಯ್ತು ನೋಡಿ?
Pramodadevi wodeyar forgets to bring Voter ID
PramodaDevi Wodeyar: ಮೈಸೂರು ಒಡೆಯರ್(Mysore Wodeyar) ರಾಜಮನೆತನದ ರಾಜಮಾತೆ ಪ್ರಮೋದಾದೇವಿ(PramodaDevi Wodeyar) ವೋಟರ್ ಐಡಿ (Voter ID)ಮರೆತು ಮತಗಟ್ಟೆಗೆ ತೆರಳಿ, ಮತ ಗಟ್ಟೆ ಅಧಿಕಾರಿಗಳು ಮತ ಚಲಾಯಿಸದ ಘಟನೆ ಮೈಸೂರಿನ(Mysore)ಲ್ಲಿ ನಡೆದಿದೆ.
ಹೌದು, ವೋಟರ್ ಐಡಿ ಮರೆತ ಪ್ರಮೋದಾ ದೇವಿ ಒಡೆಯರ್ ಮೈಸೂರಿನ ಕೃಷ್ಣರಾಜ ಕ್ಷೇತ್ರದ(Krishnaraja) ಮತಗಟ್ಟೆಯ ಬಳಿ ಬಂದಿದ್ದು ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು(Election Officer’s) ಅವರಿಗೆ ಮತ ಚಲಾಯಿಸಲು ಅವಕಾಶ ನೀಡಿಲ್ಲ. ಕೊಂಚ ಕಸಿವಿಸಿಗೊಂಡ ಪ್ರಮೋದಾ ದೇವಿ ಅವರು ಕೂಡಲೇ ತಮ್ಮ ಮೊಬೈಲ್‌ನಲ್ಲಿದ್ದ ಸಾಫ್ಟ್ ಕಾಪಿ(Soft Copy)ಯನ್ನು ತೋರಿಸಿದ್ದಾರೆ. ಆದರೆ ಇದಕ್ಕೆ ಮತಗಟ್ಟೆ ಅಧಿಕಾರಿಗಳು ಒಪ್ಪಿಗೆ ನೀಡಿಲ್ಲ.
ಹೀಗಾಗಿ ವೋಟರ್ ಐಡಿ ತರಲು ಮತಗಟ್ಟೆಯಿಂದ ಪ್ರಮೋದಾದೇವಿ ಒಡೆಯರ್ ವಾಪಸ್ ತೆರಳಿದರು.ಈ ಮೂಲಕ ಯಾರು ಎಷ್ಟೇ ದೊಡ್ಡವರಾದರೂ ಕಾನೂನು ಎಲ್ಲರಿಗೂ ಒಂದೇ, ಕಾನೂನಿಗೆ ತಲೆ ಬಾಗಲೇಬೇಕು ಎಂದು ಮತಗಟ್ಟೆ ಅಧಿಕಾರಿಗಳು ಸಾರಿದ್ದಾರೆ. ಮತಗಟ್ಟೆಯ ಮುಂಭಾಗದಲ್ಲಿದ್ದ ಕಾರಿನಲ್ಲಿ ಕುಳಿತ ಪ್ರಮೋದಾ ದೇವಿ ವಾಪಸ್ ತೆರಳಿದರು.
ವೋಟರ್ ಐಡಿ ತಂದು ಮತ ಚಲಾಯಿಸಿ ನಂತರ ಮಾತನಾಡಿದ ಪ್ರಮೋದಾದೇವಿ ಒಡೆಯರ್(Pramodadevi Wodeyar) ಅವರು ‘ಮೊದಲೆಲ್ಲ ಪಾರ್ಟಿಯಿಂದ ಚೀಟಿ ಕೊಡುತ್ತಿದ್ದರು. ಈ ಬಾರಿ ಆಫಿಸ್‌ನಿಂದ ಚೀಟಿ ಕೊಟ್ಟಿದ್ದಾರೆ. ಅದರಲ್ಲಿ ಎಲ್ಲಾ ಮಾಹಿತಿ ಇದೆ. ಅದರ ಭರವಸೆ ಮೇಲೆ ಬೇರೆ ಚೀಟಿ ಕೊಡಲ್ಲ ಅಂತ ಬಂದಿದ್ದೆ. ಸಾಫ್ಟ್ ಕಾಪಿಯಲ್ಲಿ ಹಾಕಿದ್ದಾರೆ. ಡಿಜಿಟಲ್ ಕಾಪಿ ಅಲೋ ಮಾಡಲ್ಲ ಅಂತ ಗೊತ್ತಿರಲಿಲ್ಲ. ಅದು ಸಾಲಲ್ಲ, ಬೇರೆ ದಾಖಲೆ ಬೇಕು ಅಂತ ಹೇಳಿದ್ರು. ಆಫಿಸ್‌ನಿಂದ ಬಂದ ಚೀಟಿಯಿಂದಾಗಿ ಬೇರೆ ದಾಖಲೆ ತಂದಿರಲಿಲ್ಲ. ಹಾಗಾಗಿ ಮತದಾನ ತಡ ಆಯ್ತು” ಎಂದಿದ್ದಾರೆ.