Home News Assam: ಇಬ್ಬರು ದತ್ತು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನಡೆಸಿ, 3 ವರ್ಷದ ಬಾಲಕಿಯ ಗುಪ್ತಾಂಗವನ್ನು ಸಿಗರೇಟ್‌ನಿಂದ...

Assam: ಇಬ್ಬರು ದತ್ತು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನಡೆಸಿ, 3 ವರ್ಷದ ಬಾಲಕಿಯ ಗುಪ್ತಾಂಗವನ್ನು ಸಿಗರೇಟ್‌ನಿಂದ ಸುಟ್ಟ ಪಾಪಿಗಳು! ಅಸ್ಸಾಂನಲ್ಲಿ ವೈದ್ಯ ದಂಪತಿಯ ಬಂಧನ!

Sexual harassment

Hindu neighbor gifts plot of land

Hindu neighbour gifts land to Muslim journalist

Sexual harassment: ಮಕ್ಕಳಿಲ್ಲ ಎಂದು ಕೊರಗುವ ಅನೇಕ ಶ್ರೀಮಂತ ದಂಪತಿಗಳು ಮಕ್ಕಳನ್ನು ಪಡೆದೇ ತೀರಬೇಕೆಂದು ಅನಾಥಾಶ್ರಮ ಅಥವಾ ಇನ್ನಾವುದೇ ಸಂಸ್ಥೆಗಳಿಂದ ಮಕ್ಕಳನ್ನು ದತ್ತು ಪಡೆದು ತಮ್ಮ ಸ್ವಂತ ಮಕ್ಕಳೆಂದೇ ಪ್ರೀತಿಯಿಂದ, ಸಾಕಿ, ಸಲಹಿ ಬೆಳೆಸುತ್ತಾರೆ. ಆದರೆ ಇಲ್ಲೊಂದೆಡೆ ಪಾಪಿ ದಂಪತಿಗಳಿಬ್ಬರು ಸೇರಿ ತಾವು ದತ್ತು ಪಡೆದ ಅವಳಿ ಕಂದಮ್ಮಗಳಿಗೆ ಏನು ಮಾಡಿದ್ದಾರೆ ಗೊತ್ತಾ?

ಹೌದು, ಅಸ್ಸಾಂನ(Assam) ಗುಹಾವಟಿ(Guhavati)ಯಲ್ಲಿ ಮೂರು ವರ್ಷದ ಅವಳಿ ಮಕ್ಕಳನ್ನು ದತ್ತು ತೆಗೆದುಕೊಂಡಿದ್ದ ಅಸ್ಸಾಂ ವೈದ್ಯ ದಂಪತಿಗಳು ಈ ಮಕ್ಕಳಿಗೆ ಪೈಶಾಚಿಕವಾಗಿ ಹಿಂಸೆ ನೀಡಿ ವಿಕೃತಿ ಮೆರೆದಿದ್ದಾರೆ. 3 ವರ್ಷದ ಮಗುವಿನ (Sexual harassment)  ಗುಪ್ತಾಂಗವನ್ನು ಸಿಗರೇಟ್‌(cigarette) ಮೂಲಕ ಸುಟ್ಟಿದ್ದಲ್ಲದೆ, ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಕಾರಣಕ್ಕೆ ಡಾ.ಸಂಗೀತಾ ದತ್ತಾ (Dr. Sangeeta Datta) ಹಾಗೂ ಡಾ. ವಲಿಯುಲ್‌ ಇಸ್ಲಾಂ(Dr. Valiyul islam) ಅವರ ಮೇಲೆ ಪೊಲೀಸರು ಪೋಕ್ಸೋ ಕೇಸ್‌ ದಾಖಲಿಸಿ ಬಂಧನ ಮಾಡಿದ್ದಾರೆ.

ವೈದ್ಯ ದಂಪತಿಗಳು ವಾಸವಿದ್ದ ರೋಮಾ ಎನ್‌ಕ್ಲೇವ್‌ನ (Roma Enckleven) ನಾಲ್ಕನೇ ಮಹಡಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಸೆರೆಯಲ್ಲಿ ಇರಿಸಲಾಗಿತ್ತು. 3 ವರ್ಷದ ಹೆಣ್ಣು ಮಗುವಿನ ಖಾಸಗಿ ಭಾಗಗಳಲ್ಲಿ ಗಾಯ ಮತ್ತು ಸುಟ್ಟ ಗುರುತುಗಳು ಮತ್ತು ಆಕೆಯ ದೇಹದ ಹಲವು ಭಾಗಗಳಲ್ಲಿ ಮೂಗೇಟುಗಳು ಕಾಣಿಸಿಕೊಂಡಿದೆ. ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ, ಸರಿಯಾಗಿ ನಡೆಯಲೂ ಬಾರದ ಮಗುವಿನ ಖಾಸಗಿ ಭಾಗಗಳನ್ನು ಸಿಗರೇಟಿನಿಂದ ಸುಟ್ಟಿರುವುದು ಕಂಡುಬಂದಿದೆ. ಈ ಪುಟ್ಟ ಮಕ್ಕಳದ ಅಗತ್ಯ ವೈದ್ಯಕೀಯ ಪರಿಕ್ಷೆಯನ್ನು ನಡೆಸಿದ ಬಳಿಕ ಇವರ ಮೇಲೆ ಪೈಶಾಚಿಕವಾಗಿ ಹಿಂಸೆಯಾಗಿರುವುದು ಖಚಿತವಾಗಿದೆ ಎಂದು ಅಸ್ಸಾಂ ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಗುವಾಹಟಿ ಪೊಲೀಸ್ ಕಮಿಷನರ್(Guhavati Police Commissioner) ದಿಗಂತ ಬರಾಹ್(Diganth Barah) ಅವರು, ವೈದ್ಯ ದಂಪತಿಗಳು ಯಾಕಾಗಿ ಈ ಮಕ್ಕಳಿಗೆ ಈ ರೀತಿಯ ಪೈಶಾಚಿಕ ಹಿಂಸೆ ನೀಡುತ್ತಿದ್ದರು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಸತ್ಯವನ್ನು ತಿಳಿಯುವ ನಿಟ್ಟಿನಲ್ಲಿ ನಮ್ಮ ತನಿಖೆ ಮುಂದುವರಿಸಲಿದೆ. ಅಲ್ಲದೆ ಮ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ(Assam CM Himanta Bisva Sharma) ಹಾಗೂ ಡಿಜಿಪಿ ಜಿಪಿ ಸಿಂಗ್‌(DGP GP Singh) ಈ ಕೇಸ್‌ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ವೈದ್ಯಕೀಯ ವರದಿಯ ಬಳಿಕ ಇಬ್ಬರೂ ವೈದ್ಯರನ್ನು ಪೋಕ್ಸೋ ಕಾಯ್ದೆ ದಾಖಲು ಮಾಡಲಾಗಿದೆ ತಿಳಿಸಿದರು.

ಪ್ರಮುಖವಾಗಿ, ಅಪ್ರಾಪ್ತ ಬಾಲಕಿಗೆ ದೈಹಿಕವಾಗಿ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಡಾ.ಸಂಗೀತಾ ದತ್ತಾ ಅವರನ್ನು ಮೇಘಾಲಯದ ರಿ ಭೋಯ್ ಜಿಲ್ಲೆಯ ಉಮ್ಸ್ನಿಂಗ್‌ನಲ್ಲಿರುವ ಮನೆಯೊಂದರಿಂದ ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ, ಇದೇ ಪ್ರಕರಣದಲ್ಲಿ ಡಾ ಸಂಗೀತಾ ದತ್ತ ಅವರ ಪತಿ – ಡಾ ವಲಿಯುಲ್ ಇಸ್ಲಾಂ ಮತ್ತು ಮನೆಕೆಲಸದಾಕೆ ಲಕ್ಷ್ಮಿ ರೈ ಅವರನ್ನು ಸಹ ಬಂಧಿಸಲಾಗಿದೆ.

ಇನ್ನು ವೈದ್ಯ ದಂಪತಿಗಳು ಇದಕ್ಕೂ ಮುನ್ನ ಇಬ್ಬರೂ ಮಕ್ಕಳ ಸ್ವಂತ ಪೋಷಕರು ಎಂದು ಹೇಳಿದ್ದರು. ಆದರೆ, ತನಿಖೆಯ ಬಳಿಕ ಇದು ಸುಳ್ಳೆಂದು ಸಾಬೀತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಗುವಾಹಟಿ ಮೂಲದ ಪ್ರಖ್ಯಾತ ಮನೋವೈದ್ಯೆಯಾಗಿರುವ ಡಾ. ಸಂಗೀತಾ ದತ್ತಾ ಅವರನ್ನು ಶನಿವಾರ ಬಂಧಿಸಲಾಗಿದ್ದು ಐದು ದಿನಗಳ ಪೊಲೀಸ್‌ ಕಸ್ಟಡಿಗೆ ಕಳುಹಿಸಲಾಗಿದೆ.

ಇದನ್ನು ಓದಿ: Acne removal tips: ಮೊಡವೆಗಳನ್ನು ಈಸಿಯಾಗಿ ರಿಮೂವ್​ ಮಾಡ್ಬೋದು ಹೀಗೆ!