Gajaraja Balarama Funeral: ಸರಕಾರಿ ಗೌರವಗಳೊಂದಿಗೆ ಬಲರಾಮನ ಅಂತ್ಯಕ್ರಿಯೆ! ಬಲರಾಮ ಇನ್ನು ನೆನಪು ಮಾತ್ರ
Mysore Dasara Gajaraja Balarama Funeral With Govt Honors
Gajaraja Balarama Funeral : ಮೈಸೂರಿನ ಹುಣಸೂರು ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಬಲರಾಮನಿಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಿ, 13 ಬಾರಿ ಅಂಬಾರಿ ಹೊತ್ತಿದ್ದ ದಸರಾ ಆನೆ ಬಲರಾಮನ ಅಂತ್ಯ ಸಂಸ್ಕಾರ (Gajaraja Balarama Funeral) ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗನ್ ಸಲ್ಯೂಟ್ ಮಾಡಿ ನೆರವೇರಿಸಲಾಯ್ತು. ವಯೋಸಹಜ ಕಾಯಿಲೆಯಿಂದ ಬಲರಾಮ ಅಸುನೀಗಿದ್ದ. ಬಲರಾಮನಿಗೆ 67ವರ್ಷ ವಯಸ್ಸಾಗಿತ್ತು.
1999ರಿಂದ 2011ರವರೆಗೆ ಸತತ 14 ಬಾರಿ ಚಿನ್ನದ ಅಂಬಾರಿಯನ್ನು ಅರಮನೆ ಆವರಣದಿಂದ ಬನ್ನಿಮಂಟಪದವರೆಗೂ ಹೊತ್ತು ತಂದಿದ್ದ ಕೀರ್ತಿ ಈ ಬಲರಾಮನಿಗೆ ಇದೆ. ಅತ್ಯಂತ ಸೌಮ್ಯ ಸ್ವಭಾವದ ಬಲರಾಮ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ಬಲರಾಮನಿಗೆ 60ವರ್ಷ ಆಗಿದ್ದರಿಂದ 2012ರಿಂದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ಹೊಂದಿದ್ದ. ವಯೋ ಸಹಜ ಸಮಸ್ಯೆ ಕಾರಣದಿಂದ 2020ರಿಂದ ಬಲರಾಮನನ್ನು ದಸರಾ ಮಹೋತ್ಸವದಿಂದ ಪಾಲ್ಗೊಳ್ಳುತ್ತಿರಲಿಲ್ಲ.
ಬಲರಾಮ ಸಿಕ್ಕಿದ್ದು ಕೊಡಗು ಜಿಲ್ಲೆ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ. ಈತನನ್ನು ಸೆರೆ ಹಿಡಿದದ್ದು1978. ನಂತರ ಮತ್ತಿಗೋಡು ಆನೆ ಶಿಬಿರದಲ್ಲಿ ಇರಿಸಲಾಗಿತ್ತು. ಅಲ್ಲಿಂದ ಇತ್ತೀಚೆಗೆ ಅಂದರೆ ಐದಾರು ವರ್ಷದಿಂದ ಮತ್ತಿಗೋಡು ಆನೆ ಕ್ಯಾಂಪ್ ಸಮೀಪವಿರುವ ಹುಣಸೂರು ತಾಲುಕಿಗೆ ಒಳಪಡುವ ಭೀಮನಕಟ್ಟೆ ಆನೆ ಕ್ಯಾಂಪ್ನಲ್ಲಿ ಇರಿಸಲಾಗಿತ್ತು.
ಬಲರಾಮ ತನ್ನ ಕ್ಯಾಂಪ್ನಲ್ಲಿದ್ದ ಚಿಕ್ಕ ಚಿಕ್ಕ ಆನೆಗಳಿಗೆ ತರಬೇತುದಾರನಾಗಿದ್ದ. ತನ್ನ ಜೀವಿತಾವಧಿಯಲ್ಲಿ ಯಾರಿಗೂ ತೊಂದರೆ ಕೊಡದ ಪ್ರಾಣಿ ಎಂದೇ ಹೇಳಬಹುದು. ಶಕ್ತಿಶಾಲಿ ಆನೆ ಎಂದೇ ಪ್ರಖ್ಯಾತಿಯನ್ನು ಗಳಿಸಿದ್ದ ಈ ಬಲರಾಮ. ದಸರಾ ಸಂದರ್ಭದಲ್ಲಿ ಲಕ್ಷಾಂತರ ಮಂದಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದ ಬಲರಾಮ. ಈತನ ನಿಧನ ನಿಜಕ್ಕೂ ತುಂಬಲಾರದ್ದು. ಮೈಸೂರಿಗೆ ಸಂಬಂಧಿಸಿದಂತೆ ಬಲರಾಮನ ಸ್ಥಾನ ಯಾರಿಂದಲೂ ತುಂಬಲು ಸಾಧ್ಯವಿಲ್ಲ.
ಇದನ್ನೂ ಓದಿ: ಸಾಂಬಾರು ಮಾತ್ರ ಮಾಡಿ ಅನ್ನ ಮಾಡಿಲ್ಲವೆಂಬ ಕಾರಣಕ್ಕೆ ಹೆಂಡತಿಯನ್ನೇ ಕೊಲೆಗೈದ ಪಾಪಿ ಪತಿ!