Election Rules: ವಿಧಾನಸಭಾ ಚುನಾವಣೆ 2023! ರಾಜ್ಯದಾದ್ಯಂತ ಊಹಿಸಲಾರದ ಬಿಗಿ ಭದ್ರತೆ!

Karnataka Election rules 2023 strict surveillance all over state

Election Rules : ಮೇ.10ರಂದು ರಾಜ್ಯ ವಿಧಾನಸಭಾ ಚುನಾವಣೆ ( Karnataka Assembly Election 2023 ) ಹಿನ್ನೆಲೆ, ಮತದಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವಾರು ನಿಯಮಗಳನ್ನು (Election Rules) ಜಾರಿಗೆ ತರಲಾಗಿದೆ. ಇದೀಗ ರಾಜ್ಯ ವಿಧಾನಸಬಾ ಚುನಾವಣೆ 2023 ರ ಶಾಂತಿಯುತ ಮತದಾನಕ್ಕೆ ಸಲಕ ಸಿದ್ಥದೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಾರಿಯ ಚುನಾವಣೆಗೆ ರಾಜ್ಯದಾದ್ಯಂತ 2.2 ಲಕ್ಷ ಪೊಲೀಸರನ್ನು ಚುನಾವಣಾ ಭದ್ರತೆಗೆ ನಿಯೋಜಿಸಲಾಗಿದ್ದು, ಹಿಂದೆಂದೂ ಕೈಗೊಳ್ಳದಷ್ಟು ಭಾರೀ ಭದ್ರತೆಯನ್ನು ಕೈಗೊಳ್ಳಲಾಗಿದೆ.

ಸದ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ 55,282 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅದರಲ್ಲಿ 11,617 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿ ಅವುಗಳಿಗೆ ಪೊಲೀಸ್ ಸಿಬ್ಬಂದಿಯ ಜತೆಗೆ ಹೆಚ್ಚುವರಿಯಾಗಿ ಸಿಎಪಿಎಫ್ ಕಂಪನಿಗಳನ್ನು ನಿಯೋಜಿಸಲಾಗಿದೆ.

ಚುನಾವಣಾ ಅಕ್ರಮಗಳನ್ನು ತಡೆಯಲು 700ಕ್ಕೂಅಕ್ರಮಗಳನ್ನು ವೀಕ್ಷಣಾ ದಳಗಳನ್ನು ನೇಮಿಸಿ  ಸೂಕ್ಷ್ಮ ಪ್ರದೇಶಗಳನ್ನು ಒಳಗೊಂಡತೆ ಅಂತರಾಜ್ಯ ಅಂತ‌ ಜಿಲ್ಲಾ ಗಡಿ ಭಾಗಗಳಲ್ಲಿ 700 ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ.

ಪ್ರತೀ ಜಿಲ್ಲೆಗಳಲ್ಲಿ ಎಸ್‌ಪಿಗಳು ಚುನಾವಣಾ (Election Rules) ನಿಗಾ ವಹಿಸಲಿದ್ದಾರೆ. ಚುನಾವಣಾ ಭದ್ರತೆಗೆ 304 ಡಿವೈಎಸ್‌ಪಿಗಳು,991 ಇನ್‌ಸ್ಪೆಕ್ಟರ್‌ಗಳು, 2,610 ಮಂದಿ ಸಬ್ ಇನ್‌ಸ್ಪೆಕ್ಟರ್‌ಗಳು, 5,803ಎಎಸ್‌ಐಗಳು, 46,421 ಮುಖ್ಯಪೇದೆಗಳು, 27,990 ಮಂದಿ ಹೋಮ್ಗಾರ್ಡ್‌ಗಳು ಸೇರಿ 84,119 ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಇನ್ನು ಅವಶ್ಯಕತೆಗೆ ಅನುಗುಣವಾಗಿ ಸರಿದೂಗಿಸಲು ಹೊರ ರಾಜ್ಯದಿಂದ ಅಧಿಕಾರಿಗಳ ಸಿಬ್ಬಂದಿ ಕೊರತೆಯನ್ನು 8,500 ಪೊಲೀಸ್ ಅಧಿಕಾರಿ ಸಿಬ್ಬಂದಿ ಹಾಗೂ ಗೃಹ ರಕ್ಷಕರನ್ನ ನೇಮಿಸಲಾಗಿದೆ.

ಇನ್ನು 2930 ಮೊಬೈಲ್‌ಗಳು ಕಾರ್ಯಾಚಾರಣೆಯಲ್ಲಿದ್ದು, ಒಂದೊಂದು ಸೆಕ್ಟರ್‌ಗೆ 20 ಬೂತ್‌ಗಳನ್ನು ನಿಗದಿ ಪಡಿಸಲಾಗಿದೆ. ಪಿಎಸ್‌ಐ, ಎಎಸ್‌ಐ ದರ್ಜೆಯ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿರಂತರ ಗಸ್ತುಗೆ ಮೀಸಲಿರಿಸಲಾಗಿದೆ. ಸೆಕ್ಟರ್ ಮೊಬೈಲ್‌ಗಳ ಮೆಲ್ವಿಚಾರಣೆಗೆ ಮೇಲ್ವಿಚಾರಣಾ 749ಮೊಬೈಲ್‌ಗಳಿದ್ದು,ಅವುಗಳ ಉಸ್ತುವಾರಿಗೆ ಓರ್ವ ಪೊಲೀಸ್ ಇನ್‌ಸ್ಪೆಕ್ಟರ್, 4 ಸೆಕ್ಟರ್ ಮೊಬೈಲ್ ಮೇಲ್ವಿಚಾರಣೆಗೆ ಓರ್ವ ಡಿವೈಎಸ್‌ಪಿ ನೇಮಿಸಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 30,418 ಪ್ರಕರಣಗಳನ್ನು ದಾಖಲಿಸಿ ಅವುಗಳಲ್ಲಿ ಸನ್ನಡತೆಯ ಆಧಾರದ ಮೇಲೆ 53,406 ವ್ಯಕ್ತಿಗಳನ್ನು ಬಾಂಡ್ ಒವ‌ರ್ ಮಾಡಲಾಗಿದೆ.

ಚುನಾವಣೆ ವೇಳೆ ಕಾನೂನು ಸುವ್ಯವಸ್ಥೆಗೆ ತೊಡಕಾಗದಂತೆ 714 ವ್ಯಕ್ತಿಗಳ ವಿರುದ್ಧ ಗಡಿಪಾರು ಕಾಯ್ದೆಯಡಿ ಕ್ರಮ ಕೈಗೊಂಡು 68 ಹ್ಯವಾಸಿ ಅಪರಾಧಿಗಳ ವಿರುದ್ಧ ಕ್ರಮ ಜಾರಿಗೊಳಿಸಲಾಗಿದೆ.

ಚುನಾವಣಾ ಕರ್ತವ್ಯಕ್ಕೆ ನೇಮಿಸಲಾದ ಒಟ್ಟು 650 ಸಿಎಪಿಎಫ್ ಕಂಪನಿಗಳಲ್ಲಿ 101 ಸಿಆರ್‌ಪಿಎಫ್, 108 ಬಿಎಸ್‌ಎಫ್, 75 ಸಿಐಎಸ್‌ಎಫ್, 70 ಐಟಿಬಿಪಿ, 75 ಎಸ್‌ಎಸ್ಎಬಿ, 35 ಆರ್‌ಪಿವ್ ಹಾಗೂ 186 ಎಸ್‌ಪಿ ಕಂಪನಿಗಳಿವೆ ಎಂದು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಅವರು ಮಾಹಿತಿ ನೀಡಿದಾರೆ.

ಮುಖ್ಯವಾಗಿ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ ವಿಶೇಷ ಮತಗಟ್ಟೆಗಳನ್ನು ಮಾಡಲಾಗಿದೆ. ಪಿಂಕ್ ಮತಗಟ್ಟೆ ಅಂದರೆ ಮಹಿಳೆಯರಿಗಾಗಿ ರೂಪಿಸಲದ ಮತಗಟ್ಟೆ ಆಗಿದೆ , ಇನ್ನು ಇತರೆ ಯುವ ಮತದಾರರ ಮತಗಟ್ಟೆ, ಸಿರಿಧಾನ್ಯ ಮತಗಟ್ಟೆ, ವಿಶೇಷ ಚೇತನ ಮತಗಟ್ಟೆ, ಸಂಸ್ಕೃತಿ ಮತಗಟ್ಟೆ, ಪರಿಸರ ಮತಗಟ್ಟೆ, ವಿಜ್ಞಾನ ಮತ್ತು ತಂತ್ರಜ್ಞಾನ ಮತಗಟ್ಟೆ, ಮಾಜಿ ಸೈನಿಕ ಮತಗಟ್ಟೆ, ತೃತೀಯ ಲಿಂಗಿ ಮತಗಟ್ಟೆ, ಕ್ರೀಡಾ ಮತಗಟ್ಟೆಗಳೆಂಬ ವಿಶೇಷ ವಿನ್ಯಾಸದ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ: Red Ink Pen: ನಿಮಗಿದು ಗೊತ್ತೇ? ಶಿಕ್ಷಕರು ಕೆಂಪು ಮಸಿ ಪೆನ್ನನ್ನು ಬಳಸಲು ನಿಜವಾದ ಕಾರಣವೇನೆಂದು? ಇಲ್ಲಿದೆ ಉತ್ತರ

Leave A Reply

Your email address will not be published.