Red Ink Pen: ನಿಮಗಿದು ಗೊತ್ತೇ? ಶಿಕ್ಷಕರು ಕೆಂಪು ಮಸಿ ಪೆನ್ನನ್ನು ಬಳಸಲು ನಿಜವಾದ ಕಾರಣವೇನೆಂದು? ಇಲ್ಲಿದೆ ಉತ್ತರ
Interesting Facts about teachers use red ink pen
Red Ink Pen Use: ಶಿಕ್ಷಕರು ಕೆಂಪು ಬಣ್ಣದ ಪೆನ್ನುಗಳನ್ನು (Red Ink Pen Use) ಮತ್ತು ವಿದ್ಯಾರ್ಥಿಗಳು ನೀಲಿ ಬಣ್ಣದ ಪೆನ್ನುಗಳನ್ನು ಬಳಸುವುದು ರೂಢಿ ಆಗಿದೆ. ಆದರೆ ಮಕ್ಕಳಿಗೆ ಶಿಕ್ಷಕರಂತೆ ಕೆಂಪು ಬಣ್ಣದ ಪೆನ್ನಿನಲ್ಲಿ ಬರೆಯುವ ಹಂಬಲ ಮತ್ತು ಅನುಕರಣೆ ಮಾಡುವ ಹವ್ಯಾಸ ಇರುತ್ತದೆ. ಮುಖ್ಯವಾಗಿ ಶಿಕ್ಷಕರು ಯಾಕೆ ಕೆಂಪು ಬಣ್ಣದ ಪೆನ್ನು ಬಳಸುತ್ತಾರೆ ಎಂಬ ಪ್ರಶ್ನೆ ಮಕ್ಕಳಲ್ಲಿ ಸದಾ ಕಾಡುವುದು ಸಹಜ.
ಹೌದು, ವಿದ್ಯಾರ್ಥಿಗಳು ಬಿಳಿ ಕಾಗದಗಳಿಂದ ಮಾಡಿದ ನೋಟ್‌ಬುಕ್‌ಗಳಲ್ಲಿ ಬರೆಯುತ್ತಾರೆ, ಇದಕ್ಕಾಗಿ ನಿರ್ದಿಷ್ಟ ವಯಸ್ಸಿನ ವಿದ್ಯಾರ್ಥಿಗಳು ನೀಲಿ ಅಥವಾ ಕಪ್ಪು ಪೆನ್ನುಗಳನ್ನು ಮಾತ್ರ ಬಳಸಲು ಅನುಮತಿಸಲಾಗಿದೆ.
ಆದರೆ ಶಿಕ್ಷಕರು ಕೆಂಪು ಪೆನ್‌ನಿಂದ ಬರೆಯಲು ಅಥವಾ ವಿದ್ಯಾರ್ಥಿಗಳು ನೀಲಿ-ಕಪ್ಪು ಬಣ್ಣದ ಪೆನ್ನಿನಿಂದ ಬರೆಯಲು ಯಾವುದೇ ಸ್ಥಿರ ಮತ್ತು ಲಿಖಿತ ಕಾರಣಗಳಿಲ್ಲ.
ವಾಸ್ತವವಾಗಿ, ನೀಲಿ ಮತ್ತು ಕಪ್ಪು ಬಣ್ಣಗಳು ವ್ಯತಿರಿಕ್ತವಾಗಿದೆ ಮತ್ತು ಪದಗಳ ನಡುವಿನ ವ್ಯತ್ಯಾಸವು ದೂರದಿಂದ ಸ್ಪಷ್ಟವಾಗಿ ಗೋಚರಿಸುತ್ತದೆ.
ಇನ್ನು ವಿದ್ಯಾರ್ಥಿಗಳ ಬರವಣಿಗೆಯನ್ನು ಪರಿಶೀಲಿಸಬೇಕಾಗಿರುವುದರಿಂದ ಶಿಕ್ಷಕರು ಕೆಂಪು ಪೆನ್ನುಗಳಿಂದ ಬರೆಯುತ್ತಾರೆ. ಒಂದು ವೇಳೆ ಶಿಕ್ಷಕರು ಸಹ ಇದೇ ಬಣ್ಣದ ಪೆನ್ನುಗಳನ್ನು ಬಳಸಿದ್ರೆ ಶಿಕ್ಷಕರು ಮಾಡೋ ಬದಲಾವಣೆಗಳಿಗೂ, ವಿದ್ಯಾರ್ಥಿಗಳು ಬರೆದ ವಿಷಯ ಯಾವುದೆಂದು ತಿಳಿಯಲು ಸ್ವಲ್ಪ ಕಷ್ಟವಾಗುತ್ತದೆ. ಇದಕ್ಕಾಗಿಯೇ ಶಿಕ್ಷಕರು ಕೆಂಪು ಬಣ್ಣದ ಪೆನ್ನನ್ನು ಬಳಸ್ತಾರೆ.
ಅದರಲ್ಲೂ ಶಿಕ್ಷಕರೂ ನೀಲಿ ಅಥವಾ ಕಪ್ಪು ಪೆನ್ನು ಬಳಸಿದರೆ ಮಕ್ಕಳ ಬರವಣಿಗೆಯಲ್ಲಿ ಏನು ತಪ್ಪಾಗಿದೆ ಎಂಬುದನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದು ಕಷ್ಟಕರವಾಗಿರುತ್ತದೆ. ಇದರ ಹೊರತಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ವ್ಯತ್ಯಾಸವು ತಿಳಿಯುವುದಿಲ್ಲ. ಹೀಗಾಗಿ ಶಿಕ್ಷಕರು ಕೆಂಪು ಪೆನ್ನನ್ನು ಬಳಸುತ್ತಾರೆ ಎನ್ನಲಾಗುತ್ತದೆ.
ಒಟ್ಟಿನಲ್ಲಿ ಕೆಂಪು ಬಣ್ಣವನ್ನು ಹೊರತುಪಡಿಸಿ ಯಾವುದೇ ಬಣ್ಣವನ್ನು ಆಯ್ಕೆ ಮಾಡಲಾಗಿಲ್ಲ ಏಕೆಂದರೆ ಕೆಂಪು ಅಧಿಕಾರದ ಬಣ್ಣವಾಗಿದೆ, ಆದ್ದರಿಂದ ಈ ಬಣ್ಣದಲ್ಲಿ ಬರೆಯಲಾದ ವಿಷಯಗಳು ಏನೋ ಉದ್ದೇಶಪೂರ್ವಕವಾಗಿರುತ್ತದೆ. ಇದರಿಂದ ಮಕ್ಕಳು ಮತ್ತು ಅವರ ಕುಟುಂಬದ ಸದಸ್ಯರು ಸಹ ಶಿಕ್ಷಕರು ಬರೆದದ್ದನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎನ್ನಲಾಗುತ್ತದೆ.