Trending news: 27 ವರ್ಷಗಳಲ್ಲಿ ಒಂದೂ ರಜೆ ತೆಗೆದುಕೊಳ್ಳದೆ ನಿವೃತ್ತನಾದ ಉದ್ಯೋಗಿಗೆ ಸಿಕ್ತು 3 ಕೋಟಿ ರೂ! ಆ ಹಣ ಬಂದದ್ದು ಕಂಪೆನಿಯಿಂದಲ್ಲ, ಮತ್ತೆಲ್ಲಿಂದ ಗೊತ್ತಾ?

Employee Kevin Pord retired without taking leave in 27 years got Rs 3 crore

Kevin Pord: ಯಾವುದೇ ಒಂದು ಕೆಲಸವನ್ನು ಶಿಸ್ತು, ಬದ್ಧತೆ ಹಾಗೂ ನಿಷ್ಠೆಯಿಂದ ಮಾಡಿದರೂ ಕೂಡ ವೀಕೆಂಡ್ ಅಲ್ಲೋ(Weekend), ಮಂತೆಂಡಲ್ಲೋ(Monthend) ಒಂದು ರಜೆ ಸಿಕ್ರೆ ಸಾಕಪ್ಪ, ನೆಮ್ಮದಿಯಿಂದ ರೆಸ್ಟ್ ಮಾಡ್ಬೋದು, ಎಲ್ಲಾದ್ರೂ ಟ್ರಿಪ್ ಹೋಗ್ಬೋದು ಎಂದು ಯೋಚಿಸ್ತೇವೆ. ಅಂತೆಯೇ ರಜೆ ಹಾಕುತ್ತೇವೆ. ಆದರೆ ಇಲ್ಲೊಂದೆಡೆ ಕಂಪೆನಿಯೊಂದರ ಉದ್ಯೋಗಿಯೊಬ್ಬನಿಗೆ ತನ್ನ ಕೆಲಸದ ಬಗ್ಗೆ ಇರೋ ನಿಷ್ಠೆ ಹಾಗೂ ಅದಕ್ಕೆ ಸಿಕ್ಕ ಬಂಪರ್ ಬಹುಮಾನದ ಬಗ್ಗೆ ಕೇಳಿದ್ರೆ ನೀವೇ ಹೌಹಾರುತ್ತೀರ.

 

ಹೌದು, ಕೆವಿನ್ ಫೋರ್ಡ್(Kevin Pord) ಎಂಬ 54 ವರ್ಷದ ವ್ಯಕ್ತಿ, ಕಳೆದ 27 ವರ್ಷಗಳಿಂದ ಬರ್ಗರ್‌ಕಿಂಗ್ ಫುಡ್​ ಚೈನ್ ರೆಸ್ಟೋರೆಂಟ್‌(Burger King Food Chain Restorent)ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈತ ಅಗತ್ಯತೆಗಾಗಿ, ಹಣಕ್ಕಾಗಿ ಮಾತ್ರ ಕೆಲಸ ಮಾಡುವುದಲ್ಲ, ಅದರೊಂದಿಗೆ ಶಿಸ್ತನ್ನು ಕಾಪಾಡುವುದು ಒಂದು ಜವಾಬ್ದಾರಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಯಾಕೆಂದ್ರೆ ಕೆವಿನ್ ಅವರು ತಮ್ಮ 27 ವರ್ಷಗಳ ಕೆಲಸದ ಜೀವನದಲ್ಲಿ ಒಂದು ದಿನವೂ ಕೆಲಸಕ್ಕೆ ಗೈರಾಗಿಲ್ಲ! ಅದೇನೆಂದರೆ 27 ವರ್ಷಗಳ ಕಾಲ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿ ನಿವೃತ್ತರಾದರು.

ಇಷೇ ಏಕೆ, ವಿಶೇಷ ಎಂಬಂತೆ ಇವರು ತಮ್ಮ 25ನೇ ವರ್ಷದ ವಿವಾಹ ವಾರ್ಷಿಕೋತ್ಸವದ ದಿನದಂದೂ ಕೂಡ ರಜೆ ಹಾಕದೆ ಕೆಲಸ ಮಾಡಿದ್ದರು. ಆದರೆ ವಿಚಿತ್ರವೆಂದರೆ ಫೋರ್ಡ್​ 27 ವರ್ಷ ರಜೆ ತೆಗೆದುಕೊಳ್ಳದೆ ಕೆಲಸ ಮಾಡಿದ ಇವರು ನಿವೃತ್ತರಾದಾಗ ಕಂಪೆನಿಯಿಂದ ಅವರಿಗೆ ಸಿಕ್ಕಂತಹ ಬಹುಮಾನ ಎಲ್ಲರಿಗೂ ಶಾಕ್ ನೀಡಿದ್ದಲ್ಲದೆ, ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡಿತ್ತು.

ಯಾಕೆಂದ್ರೆ ವಿಡಿಯೋದ ಪ್ರಕಾರ ಒಂದೂ ರಜೆ ಇಲ್ಲದೆ ಕೆಲಸ ಮಾಡಿದ ಈ ನಿಷ್ಠಾವಂತ ಕೆಲಸಗಾರನಿಗೆ ಸಿಕ್ಕ ಗಿಫ್ಟ್​ ಬಾಕ್ಸ್​ನಲ್ಲಿ ಫಿಲ್ಮ್​ ಟಿಕೆಟ್​(Film Ticket), ಒಂದಷ್ಟು ತಿಂಡಿಗಳನ್ನು ಹೊರತುಪಡಿಸಿ ಏನನ್ನೂ ನೀಡಿರಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ವೀಕ್ಷಿಸಿದ ನೆಟ್ಟಿಗರು ಫೋರ್ಡ್​ ನಿಯತ್ತಿನ ಕೆಲಸಕ್ಕೆ ಇದು ಸರಿಯಾದ ಉಡುಗೊರೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ವಿಡಿಯೋ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ(Instagram) ಶೇರ್ ಮಾಡಿಕೊಂಡಿದ್ದ ಫೋರ್ಡ್ ಮಗಳು, GoFundMe ಅಭಿಯಾನ ಶುರು ಮಾಡಿದ್ದರು. ಇದರಲ್ಲಿ ಫೋರ್ಡ್​ ಬದ್ಧತೆಯನ್ನು ಶ್ಲಾಘಿಸಿದ್ದ ವಿಶ್ವದಾದ್ಯಂತ ಜನರು ಫೋರ್ಡ್​ ಕೆಲಸವನ್ನು ಮೆಚ್ಚಿ ತಮ್ಮ ಕೈಲಾದಷ್ಟು ಹಣವನ್ನು ದೇಣಿಗೆಯಾಗಿ ನೀಡಿದ್ದರು. ಇದೀಗ ಒಂದು ವರ್ಷದ ಅವಧಿಯಲ್ಲಿ ಬರೋಬ್ಬರಿ 400,000 ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಬರೋಬ್ಬರಿ 3.26 ಕೋಟಿ ಫೋರ್ಡ್​ ಖಾತೆ ಸೇರಿದೆ.

ಕೆವಿನ್ ಫೋರ್ಡ್ ಅವರ ಕೆಲಸದ ಮೇಲಿನ ನಿಷ್ಠೆಯ ಹೃದಯಸ್ಪರ್ಶಿ ಕಥೆಯು ಡೇವಿಡ್ ಸ್ಪೇಡ್(David Sped) ಅವರಂತಹ ಪ್ರಸಿದ್ಧ ವ್ಯಕ್ತಿಗಳು ಸೇರಿದಂತೆ ಅನೇಕರ ಗಮನವನ್ನು ಸೆಳೆದಿತ್ತು. ಅವರೂ ಕೂಡ ದೇಣಿಗೆಯಲ್ಲಿ ಕೈ ಜೋಡಿಸಿದ್ದಾರೆ. ಟೆಕ್ಸಾಸ್‌(Texas) ನಲ್ಲಿರುವ ಫೋರ್ಡ್​ ಅವರು ತಮ್ಮ ಮೊಮ್ಮಕ್ಕಳನ್ನು ಭೇಟಿ ಮಾಡಲು ಅಗತ್ಯವಿದ್ದ ಹಣವನ್ನು ಸಂಗ್ರಹಿಸುವ ಗುರಿಯೊಂದಿಗೆ ಫೋರ್ಡ್ ಮಗಳು ನಿಧಿಸಂಗ್ರಹ ಅಭಿಯಾನವನ್ನು ಪ್ರಾರಂಭಿಸಿದರು ಎಂದು ವರದಿಯಾಗಿದೆ.

ಅಂದಹಾಗೆ ಫೋರ್ಡ್​ ಅವರ ಶ್ರಮ, ಬದ್ಧತೆ ಹಾಗೂ ನಿಯತ್ತನ್ನು ಅವರ ಕಂಪನಿ ಗುರುತಿಸಿ ಸೂಕ್ತ ಗೌರವ ನೀಡದಿದ್ದರೂ ಪ್ರಪಂಚದಾದ್ಯಂತ ಜನರು ಅವರಿಗೆ GoFundMe ಅಭಿಯಾನದಲ್ಲಿ ದಾರಾಳತನ ತೋರಿರುವುದಕ್ಕೆ ಫೋರ್ಡ್​ ಧನ್ಯವಾದ ಅರ್ಪಿಸಿದ್ದಾರೆ.

 

ಇದನ್ನು ಓದಿ: 2nd puc supplementary Exam 2023 Schedule: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಪರಿಷ್ಕೃತ ದಿನಾಂಕ ಪ್ರಕಟ!

Leave A Reply

Your email address will not be published.