Indian Air Force: ತಾಂತ್ರಿಕ ದೋಷ ಕಾರಣ, ಮಿಗ್ -21 ಯುದ್ಧ ವಿಮಾನ ಮನೆ ಮೇಲೆ ಬಿದ್ದು ಮೂವರು ಸಾವು!
Indian Air Force MIG-21 Crashes in Rajasthan
![Indian Air Force](https://hosakannada.com/wp-content/uploads/2023/05/IMG-20230508-WA0017.jpg)
Indian Air Force : ಭಾರತೀಯ ವಾಯುಪಡೆಯ (Indian Air Force) MiG-21 ಯುದ್ಧ ವಿಮಾನ ರಾಜಸ್ಥಾನದ ಹನುಮಾನ್‌ಗಢ ಬಳಿ ಪತನಗೊಂಡಿರುವ ಮಾಹಿತಿ ದೊರೆತಿದೆ.
ವಿಮಾನವು ಹನುಮಾನ್‌ಗಡ್ ಜಿಲ್ಲೆಯ ಪಿಲಿಬಂಗಾ ಬಳಿ ತಾಂತ್ರಿಕ ದೋಷದಿಂದಾಗಿ ಸೂರತ್ ಗಢ ವಾಯುನೆಲೆಯಿಂದ ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ಪತನಗೊಂಡಿದೆ.
ಸದ್ಯ ವಿಮಾನವು ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಇನ್ನೂ, ವಿಮಾನ ಪೈಲೆಟ್‌ಗಳು ಸುರಕ್ಷಿತವಾಗಿದ್ದಾರೆ.
ಅಪಘಾತ ಸಂದರ್ಭದಲ್ಲಿ ಪೈಲಟ್ ಮತ್ತು ಸಹ ಪೈಲಟ್ ವಿಮಾನದಿಂದ ಜಿಗಿದು, ಪ್ಯಾರಾಚೂಟ್ ಸಹಾಯದಿಂದ ಡ್ರೈನ್ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿದಿದ್ದಾರೆ. ಆದರೆ, ವಿಮಾನ ಮನೆಯ ಮೇಲೆ ಬಿದ್ದಿದ್ದು, ಮಹಿಳೆ ಮತ್ತು ಪುರುಷ ಸೇರಿ ಮೂವರು ಮೃತಪಟ್ಟಿದ್ದು, ಮನೆ ಸಂಪೂರ್ಣ ನಾಶವಾಗಿದೆ.
ಇದನ್ನೂ ಓದಿ:Wifi router : ರಾತ್ರಿ ಮಲಗುವಾಗ ವೈಫೈ ರೂಟರ್ ಆನ್ ಇರಿಸುತ್ತೀರಾ! ಈ ವಿಚಾರ ತಿಳಿದುಕೊಳ್ಳಿ!