Mangalore : ಸ್ಕೂಟರ್ – ಕಾರು ಅಪಘಾತ! ಚರ್ಚ್ ಗೆ ತೆರಳುತ್ತಿದ್ದ ವ್ಯಕ್ತಿ ಗಂಭೀರ

Mangalore: ಸ್ಕೂಟರ್ – ಕಾರು ನಡುವೆ ಅಪಘಾತ (Scooter-car accident) ಸಂಭವಿಸಿರುವ ಘಟನೆ ಇಲ್ಲಿನ (Mangalore) ಜಪ್ಪಿನ ಮೊಗರುವಿನಲ್ಲಿ ನಡೆದಿದೆ. ಘಟನೆ ಪರಿಣಾಮ ಸ್ಕೂಟರ್ ಸವಾರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನನ್ನು ಬಜಾಲ್ ಬೊಲ್ಲ ನಿವಾಸಿ ರೊನಾಲ್ಡ್ ಡಿ ಸೋಜ (60) ಎಂದು ಗುರುತಿಸಲಾಗಿದೆ.

 

ರೊನಾಲ್ಡ್ ಅವರು ಇಂದು ಬೆಳಗ್ಗೆ ತಮ್ಮ ಸ್ಕೂಟರ್ ನಲ್ಲಿ ತನ್ನ ಮನೆಯಿಂದ ಚರ್ಚ್ ಹೊರಟಿದ್ದರು. ಇವರು ಜಪ್ಪಿನಮೊಗರಿನ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಮಂಗಳೂರಿನಿಂದ ಬರುತ್ತಿದ್ದ ಕಾರು ಏಕಾಏಕಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ಸಮೇತ ರೊನಾಲ್ಡ್ ಹಾಗೂ ಕಾರು ಕೂಡ ಡಿವೈಡರ್ ಮೇಲೆ ಎಸೆಯಲ್ಪಟ್ಟಿದೆ.

ತಕ್ಷಣವೇ ಗಂಭೀರ ಗಾಯಗೊಂಡಿದ್ದ ರೊನಾಲ್ಡ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಮಂಗಳೂರು ದಕ್ಷಿಣ ಸಂಚಾರಿ ರಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: Chennai: ಇತರರನ್ನು ನಗ್ನವಾಗಿ ಕಾಣುವ ನಕಲಿ ಕನ್ನಡಕ ಮಾರಾಟ ; ಬೆಂಗಳೂರಿನ ನಾಲ್ವರ ಬಂಧನ!!

Leave A Reply

Your email address will not be published.