8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ; ಶೀಘ್ರವೇ 8ನೇ ಆಯೋಗ ರಚನೆ ; ಫಿಟ್ಮೆಂಟ್ ಅಂಶ ಹೆಚ್ಚಳ!

8th Pay Commission latest updates

8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ (government employees) ಹಾಗೂ ಪಿಂಚಣಿದಾರರಿಗೆ ಸಿಹಿಸುದ್ದಿ ಇಲ್ಲಿದೆ. ಕೇಂದ್ರ ಸರ್ಕಾರವು ಶೀಘ್ರದಲ್ಲೇ 8ನೇ ವೇತನ ಆಯೋಗವನ್ನು (8th Pay Commission) ರಚಿಸಲಿದೆ. ಇದರಿಂದ ನೌಕರರ ವೇತನ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.

ಸರ್ಕಾರವು 2024ರಲ್ಲಿ 8ನೇ ವೇತನ ಆಯೋಗವನ್ನು ಪರಿಚಯಿಸಬಹುದು ಮತ್ತು ಅದನ್ನು 2026ರಲ್ಲಿ ಜಾರಿಗೆ ತರಬಹುದು ಎಂದು ಮೂಲಗಳು ತಿಳಿಸಿವೆ. ಇದನ್ನು ಕಾರ್ಯಗತಗೊಳಿಸಲು 2024ರಲ್ಲಿ ವೇತನ ಆಯೋಗವನ್ನು ಸಹ ರಚಿಸಬಹುದು ಎನ್ನಲಾಗಿದೆ.

8ನೇ ವೇತನ ಆಯೋಗದಡಿ ಈ ಬಾರಿ ಫಿಟ್ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದರಿಂದ ನೌಕರರ ವೇತನವು ಶೇ.44.44ರಷ್ಟು ಹೆಚ್ಚಾಗಬಹುದು. ಉದ್ಯೋಗಿಗಳ ಕನಿಷ್ಠ ವೇತನವನ್ನು ನೇರವಾಗಿ 18 ಸಾವಿರ ರೂ.ನಿಂದ 26 ಸಾವಿರ ರೂ.ಗೆ ಏರಿಕೆ ಮಾಡಬಹುದು.

7ನೇ ವೇತನ ಆಯೋಗದಲ್ಲಿ (7th pay commission) ಫಿಟ್‌ಮೆಂಟ್ ಅಂಶವು 2.57 ಪಟ್ಟು ಇತ್ತು, ನಂತರ ನೌಕರರ ವೇತನವು ಶೇ.14.29ರಷ್ಟು ಹೆಚ್ಚಾಗಿದೆ. ಈ ಹೆಚ್ಚಳದಿಂದ ನೌಕರರ ಕನಿಷ್ಠ ವೇತನ 18 ಸಾವಿರ ರೂ. ಆಗಿದೆ. ಅದೇ ರೀತಿ 8ನೇ ವೇತನ ಆಯೋಗದಲ್ಲಿಯೂ ಫಿಟ್ಮೆಂಟ್ ಅಂಶವು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ, ಪ್ರಸ್ತುತ 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ರೀತಿಯ ಪ್ರಸ್ತಾವನೆಯನ್ನು ಮಂಡಿಸಿಲ್ಲ. ಈ ಬಗ್ಗೆ ಮಾಹಿತಿ ಹೊರಬೀಳಬಹುದು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Puducherry: ಪ್ರೇಯಸಿ ಜೊತೆಗಿರುವಾಗಲೇ ಮತ್ತೊಂದು ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಯುವಕ ; ಪ್ಯಾಂಟ್​ ಜಿಪ್​ ಓಪನ್ ; ಸಹಪ್ರಯಾಣಿಕರಿಂದ ಧರ್ಮದೇಟು!!

Leave A Reply

Your email address will not be published.