Hair Care: ಕೂದಲು ಉದುರೋದು, ಬಿಳಿ ಆಗೋದು ಕಡಿಮೆ ಆಗಲು ಈ ಟಿಪ್ಸ್ ಫಾಲೋ ಮಾಡಿ!

Hair care tips to reduce hair loss, white hair

Hair Care: ಚಿಕ್ಕ ವಯಸ್ಸಿನಲ್ಲಿಯೇ ಯುವಕ-ಯುವತಿಯರ ತಲೆಯಲ್ಲಿರುವ ಕೂದಲು ನಿಧಾನವಾಗಿ ಉದುರುವುದಕ್ಕೆ ಶುರುವಾಗಿದೆ ಮತ್ತು ಕೆಲವರಿಗೆ ತಲೆ ತುಂಬಾ ಕೂದಲು ಇದ್ದರೂ ಸಹ ಅದು ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗುತ್ತಿವೆ. ಈ ಬಿಳಿ ಕೂದಲ ಕಾಟ, ಕೂದಲು ಉದುರುವುದು ಈ ಸಮಸ್ಯೆ ಕೆಲವರಿಗೆ ಪರಿಹಾರ ಆಗದ ಸಮಸ್ಯೆ ಎಂಬ ಕಲ್ಪನೆ ಇರಬಹುದು. ಆದರೆ ಅದು ಸುಳ್ಳು ಕಲ್ಪನೆ. ಈ ಕೆಳಗಿನ ಸಲಹೆಗಳನ್ನು ಪಾಲಿಸುವ ಮೂಲಕ ಕೂದಲಿನ ಉದುರುವಿಕೆ, ಕೂದಲು ಬಿಳಿಯಾಗುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

 

ನಮ್ಮ ಪ್ರಕೃತಿಯ ಮೂಲಕ ನೈಸರ್ಗಿಕ ಪರಿಹಾರವನ್ನು ಪಡೆಯಲು ಸಾವಿರಾರು ಗಿಡಮೂಲಿಕೆಗಳು ಲಭ್ಯವಿರುವುದರಿಂದ, ಪ್ರಾಚೀನ ಭಾರತೀಯ ವೈದ್ಯಕೀಯ ವ್ಯವಸ್ಥೆ ಆಯುರ್ವೇದದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರಗಳಿವೆ.

ತಲೆ ಕೂದಲು (Hair Care) ಉದುರುವಿಕೆಯನ್ನು ತಡೆಯುವುದರಿಂದ ಹಿಡಿದು ಕೂದಲಿಗೆ ಉತ್ತಮ ಹೊಳಪು ನೀಡುವಲ್ಲಿ ದಾಸವಾಳ ಪಾತ್ರ ತುಂಬಾ ಮಹತ್ವ ಆಗಿದೆ. ಮುಖ್ಯವಾಗಿ ತಲೆ ಕೂದಲಿನ ಭಾಗದಲ್ಲಿ ಕಲ್ಮಶಗಳನ್ನು ದೂರ ಮಾಡಿ ತಲೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ. ಇದಕ್ಕಾಗಿ ನೀವು ನೀರಿನಲ್ಲಿ 20 ನಿಮಿಷಗಳ ಕಾಲ ಕೆಲವು ದಾಸವಾಳ ಹೂಗಳನ್ನು ಚೆನ್ನಾಗಿ ಕುದಿಸಿ, ತಣ್ಣಗಾಗಿಸಿ ಅದೇ ನೀರಿನ ಜೊತೆ ದಾಸವಾಳ ಹೂಗಳ ಪೇಸ್ಟ್ ತಯಾರಿಸಿ ಅದನ್ನು ನಿಮ್ಮ ತಲೆ ಕೂದಲಿಗೆ ಹಚ್ಚಿ ಹತ್ತರಿಂದ ಹದಿನೈದು ನಿಮಿಷಗಳು ಹಾಗೆ ಬಿಡಬೇಕು. ಆನಂತರದಲ್ಲಿ ಶಾಂಪೂ ಹಾಕಿ ಸ್ನಾನ ಮಾಡಿಕೊಳ್ಳಬಹುದು.

ಕರಿಬೇವಿನ ಎಲೆಗಳು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಬಿಳಿ ಕೂದಲನ್ನು ತಡೆಯುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಕರಿಬೇವಿನ ಎಲೆಗಳನ್ನು ಯಾವಾಗಲೂ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

ಲೋಳೆಸರ ಹಚ್ಚುವುದು ಕೂಡ ತಲೆಹೊಟ್ಟು ಸಮಸ್ಯೆ ನಿವಾರಿಸುವಲ್ಲಿ ಸಹಕಾರಿ. ತಾಜಾ ಲೋಳೆಸರವನ್ನು ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ. ಈ ರೀತಿ ವಾರದಲ್ಲಿ 2-3 ಬಾರಿ ಮಾಡಿದರೆ ತಲೆಹೊಟ್ಟಿನ ಸಮಸ್ಯೆ ಕಡಿಮೆಯಾಗುವುದು.

ನೆಲ್ಲಿಕಾಯಿ ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಅಂತ ತಜ್ಞರು ಹೇಳುತ್ತಾರೆ. ಇದು ನಿಮ್ಮ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದನ್ನು ನಿಧಾನಗೊಳಿಸುತ್ತದೆ ಮತ್ತು ತಲೆಹೊಟ್ಟನ್ನು ಸಹ ತಡೆಯುತ್ತದೆ. ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ನೆತ್ತಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ಆ ಮೂಲಕ ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.

ನುಗ್ಗೆ ಎಲೆಗಳಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣ, ವಿಟಮಿನ್ ಎ, ಸಿ ಮತ್ತು ಮೆಗ್ನೀಸಿಯಮ್ ಇದ್ದು, ಇದು ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಈ ಎಲೆಗಳನ್ನು ಪುಡಿ ಮಾಡಿಕೊಂಡು ಸೇವಿಸುವುದು ಅಥವಾ ಪಲ್ಯಾ ಮಾಡಿಕೊಂಡು ರೊಟ್ಟಿ ಜೊತೆಗೆ ಹಚ್ಚಿಕೊಂಡು ತಿನ್ನಬಹುದು ಅಥವಾ ಜ್ಯೂಸ್ ಸಹ ಮಾಡಿಕೊಂಡು ಕುಡಿಯಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಕೂದಲಿನ ಆರೋಗ್ಯಕ್ಕೆ ತೆಂಗಿನಕಾಯಿ ಎಣ್ಣೆ ಹಚ್ಚುವುದು ತುಂಬಾನೇ ಒಳ್ಳೆಯದು. ಅಷ್ಟೇ ಅಲ್ಲದೆ ಎಳನೀರನ್ನು ಕುಡಿಯುವುದರಿಂದ ನಮ್ಮ ದೇಹವು ಸದಾ ಹೈಡ್ರೇಟ್ ಆಗಿರುತ್ತದೆ. ತೆಂಗಿನ ಎಣ್ಣೆಯನ್ನು ಅಡುಗೆಯಲ್ಲಿ ಬಳಸಬಹುದು. ಒಣ ತೆಂಗಿನಕಾಯಿಯನ್ನು ತಿಂಡಿಯಲ್ಲಿ ಸೇರಿಸಿಕೊಂಡು ತಿನ್ನಬಹುದು. ತೆಂಗಿನಕಾಯಿಯನ್ನು ತುರಿದು ಲಡ್ಡುಗಳಾಗಿ ಸಹ ಮಾಡಿಕೊಂಡು ತಿನ್ನಬಹುದು.

ಭೃಂಗರಾಜ್ ನನ್ನು ಕೇಶರಾಜ್ ಎಂದು ಸಹ ಕರೆಯಲಾಗುತ್ತದೆ. ಎಂದರೆ ಕೂದಲಿನ ಆರೋಗ್ಯಕ್ಕೆ ಬಳಸುವ ಗಿಡಮೂಲಿಕೆಗಳಲ್ಲಿ ಇದನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ.ಇದು ಆರೋಗ್ಯಕರ ಕೂದಲಿನ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ ಮತ್ತು ನಿಮ್ಮ ಕೂದಲನ್ನು ಬಲವಾಗಿ ಮತ್ತು ನಯವಾಗಿಸುತ್ತದೆ. ಇದನ್ನು ನೀವು ಹಚ್ಚಿಕೊಳ್ಳುವ ಹೇರ್ ಆಯಿಲ್ ನಲ್ಲಿ ಸೇರಿಸಿಕೊಳ್ಳಬಹುದು ಅಥವಾ ಮೌಖಿಕವಾಗಿ ಸಹ ಸೇವಿಸಬಹುದು.

ಕಡಲೆ ಹಿಟ್ಟಿನಿಂದ ಕೂಡ ತಲೆಹೊಟ್ಟಿನ ಸಮಸ್ಯೆಗೆ ಪರಿಹಾರವಿದೆ. ಒಂದು ಗ್ಲಾಸ್ ಲೋಟಕ್ಕೆ 4 ಚಮಚ ಕಡಲೆ ಹಿಟ್ಟಿ ಮಿಶ್ರಣ ಮಾಡಿ ನಂತರ ಕೂದಲಿಗೆ ಹಚ್ಚಬೇಕು. ಒಂದು ಗಂಟೆ ನಂತರ ಕೂದಲನ್ನು ಸರಿಯಾಗಿ ತೊಳೆಯಬೇಕು.

 

ಇದನ್ನೂ ಓದಿ: Goddess Annapurna photo: ಈ ಸ್ಥಳದಲ್ಲಿ ದೇವತೆ ಅನ್ನಪೂರ್ಣೆಯ ಫೋಟೋ ಇಟ್ಟರೆ ಸಾಕು, ನಿಮ್ಮ ಮನೆಯಲ್ಲಿ ಸಂತೋಷ, ಸಮೃದ್ಧೆ ಉಕ್ಕಿ ಹರಿಯುತ್ತೆ! 

Leave A Reply

Your email address will not be published.