Population: ವಿಚಿತ್ರ ಆದರೂ ಸತ್ಯ!ಇಲ್ಲೊಂದು ದೇಶದಲ್ಲಿ ಈ ದಿನ ಮಕ್ಕಳು ಜನಿಸಿದರೆ, ಲಕ್ಷಗಟ್ಟಲೇ ಹಣದ ಜೊತೆ ಇವೆಲ್ಲಾ ಸೌಕರ್ಯಗಳು ಲಭ್ಯ!

To get higher population the country decide to give some offers

Population: ಭಾರತ ಜನಸಂಖ್ಯೆ (Population) ಹೆಚ್ಚಿಸುವಲ್ಲಿ ಸ್ಪರ್ಧೆಗೆ ಇಳಿದಿದೆ ಎಂದರೆ ತಪ್ಪಾಗಲಾರದು. ಹೌದು, ಚೀನಾವನ್ನು ಹಿಂದಿಕ್ಕಿ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿ ಇದೆ. ಆದರೆ ಹೆಚ್ಚು ಜನಸಂಖ್ಯೆ ಕಾರಣದಿಂದ ನಮ್ಮ ದೇಶ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ.

ವಿಶೇಷ ಎಂದರೆ ಕೆಲವು ರಾಷ್ಟ್ರಗಳಲ್ಲಿ ಸರ್ಕಾರಗಳೇ ಹೆಚ್ಚು ಮಕ್ಕಳನ್ನು ಪಡೆದುಕೊಳ್ಳಲು ಪ್ರೋತ್ಸಾಹಿಸುತ್ತಿವೆ. ಅದಕ್ಕಾಗಿ ಹಣ ಸೇರಿದಂತೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತಿದೆ ಅಂತೆ. ಹೌದು,  ಅಂತಹ ರಾಷ್ಟ್ರ ಯಾವುದೆಂದು ನೋಡೋಣ ಬನ್ನಿ.

ವರದಿ ಪ್ರಕಾರ ಜಪಾನ್‌ನಲ್ಲಿ ವಯೋವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ, ಅಲ್ಲದೆ ಜಪಾನ್ ವೇಗವಾಗಿ ಕುಸಿಯುತ್ತಿರುವ ಜನನ ಪ್ರಮಾಣಕ್ಕೆ ಸಾಕ್ಷಿಯಾಗಿದೆ. ಮುಖ್ಯವಾಗಿ ದೇಶದ 28.7% ದಷ್ಟು ಜನಸಂಖ್ಯೆಯಲ್ಲಿ ಹೆಚ್ಚಿನವರು 65 ಅಥವಾ ಅದಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಅದರಲ್ಲೂ ಮಹಿಳೆಯರದು ಈ ವಿಷಯದಲ್ಲಿ ಬಹುಮತವಾಗಿದೆ.

ಅಧಿಕೃತ ಮಾಹಿತಿ ಪ್ರಕಾರ, ಚೀನಾದ ಜನಸಂಖ್ಯೆಯು 2022 ರಲ್ಲಿ ಕುಗ್ಗಿದೆ ಎಂದು ತೋರಿಸಿದ್ದು, ಆರು ದಶಕಗಳ ಸಮಯದಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ.

ಜಪಾನ್ ಕೆಲವು ಮಾಹಿತಿ ಪ್ರಕಾರ, ಜಪಾನಿನ ಜನರ ಮದುವೆ ಮತ್ತು ಮಕ್ಕಳ ಬಗ್ಗೆ ಆಸಕ್ತಿ ಇಲ್ಲ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಕ್ಕೆ ತೆರಳಲು ಮತ್ತು ಅಧ್ಯಯನ ನಡೆಸಲು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಗರ್ಭನಿರೋಧಕದ ಅಧಿಕ ಪ್ರಮಾಣದ ಬಳಕೆ ಕೂಡ ಜನಸಂಖ್ಯೆ ಕುಸಿಯಲು ಕಾರಣವಾಗಿದೆ ಎಂಬುದು ತಿಳಿದು ಬಂದಿದೆ. ಆದ್ದರಿಂದ ಈ ಜಪಾನ್ ಸರ್ಕಾರ ಪ್ರೋತ್ಸಾಹಿಸಲು ನಗದು ಬಹುಮಾನ ನೀಡುತ್ತಿದೆ. ಮಗು ಜನಿಸಿದಾಗ ಪೋಷಕರಿಗೆ 6 ಲಕ್ಷ ರೂಪಾಯಿ ನೀಡುತ್ತಿದೆ ಎನ್ನಲಾಗಿದೆ.

ಹಾಗೆಯೇ ರೊಮೇನಿಯಾದಲ್ಲಿ ಮಕ್ಕಳಿಲ್ಲದ ದಂಪತಿಗಳಿಗೆ ಹೆಚ್ಚು ತೆರಿಗೆ ವಿಧಿಸಿಲ್ಲ. ಮಕ್ಕಳಿರುವವರಿಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಮಕ್ಕಳು ಬೇಡ ಎನ್ನುವವರಿಗೆ ಶೇ.20ರಷ್ಟು ಹೆಚ್ಚುವರಿ ತೆರಿಗೆ ವಿಧಿಸದಿದ್ದರೆ. ಮತ್ತೊಂದೆಡೆ, ಹಾಂಗ್ ಕಾಂಗ್‌ನಲ್ಲಿ 2013 ರ ನಂತರ ವಿವಾಹವಾದ ದಂಪತಿಗಳು ಅವರಿಗೆ ಬಹುಮಾನ ನೀಡಲಾಗುತ್ತಿದೆ.

ಇನ್ನು ರಷ್ಯಾ ಕೂಡ ಇದೆ ರೀತಿಯ ಯೋಜನೆ ಹೊಂದಿದೆ. ರಷ್ಯಾದಲ್ಲಿ ಜನಸಂಖ್ಯೆ ಕುಸಿಯುತ್ತಲೇ ಇದೆ. ವಿಶ್ವದ ಅತಿದೊಡ್ಡ ದೇಶವಾಗಿರುವ ರಷ್ಯಾ ಜನಸಂಖ್ಯೆಯಲ್ಲಿ ಮಾತ್ರ ಹಿಂದಿದೆ. ಹೀಗಾಗಿ ವಿವಿಧ ಸಮಸ್ಯೆಗಳನ್ನೂ ಸಹ ರಷ್ಯಾ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಸೆಪ್ಟೆಂಬರ್ 12 ರಂದು ಸಾರ್ವಜನಿಕ ರಜೆಯನ್ನು ಪಡೆಯಲು. ಆ ದಿನಾಂಕಕ್ಕೆ ಸರಿಯಾಗಿ 9 ತಿಂಗಳ ನಂತರ ಮಗು ಜನಿಸಿದರೆ ಪೋಷಕರಿಗೆ ಮನೆ, ಕಾರು, ವಸ್ತುಗಳನ್ನು ಉಡುಗೊರೆಯಾಗಿ ಘೋಷಣೆ ಮಾಡಲಾಗುತ್ತದೆ . ಅಲ್ಲಿ ಎರಡನೇ ಅಥವಾ ಮೂರನೇ ಮಗುವಿಗೆ ಜನ್ಮ ನೀಡಿದರೆ, ಸುಮಾರು 7 ಲಕ್ಷ ಬಹುಮಾನ ಸಿಗುತ್ತದೆ.

ಫಿನ್‌ಲ್ಯಾಂಡ್‌ನಲ್ಲಿ 2013 ರಿಂದ, ಲೆಸ್ಟಿಜಾರ್ವಿ ಪಾಲಿಕೆಯಲ್ಲಿ ಬೇಬಿ ಬೋನಸ್ ಅನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಮಗು ಜನಿಸಿದ ತಕ್ಷಣ ಸುಮಾರು 7 ಲಕ್ಷ 86 ಸಾವಿರ ರೂಪಾಯಿ. ಭೂ ವಿಸ್ತೀರ್ಣಕ್ಕೆ ಈ ದೇಶಗಳಲ್ಲಿ ಜನಸಂಖ್ಯೆ ಕಡಿಮೆ ಜನಸಂಖ್ಯೆಗೆ ಇಂತಹ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

ಇನ್ನು ಇಟಲಿಯಲ್ಲಿಯೂ ಸಹ, ಕ್ಷೀಣಿಸುತ್ತಿರುವ ಜನಸಂಖ್ಯೆಯನ್ನು ನಿಭಾಯಿಸಲು ಸರ್ಕಾರವು ಆರ್ಥಿಕ ನೆರವು ನೀಡಿದೆ. ಅಗತ್ಯ ಬಿದ್ದರೆ ಮಗುವಿನ ಸಂಪೂರ್ಣ ವೆಚ್ಚವನ್ನೂ ಸರ್ಕಾರವೇ ನೋಡಿಕೊಳ್ಳುತ್ತದೆ. ಹೆಚ್ಚು ಮಕ್ಕಳನ್ನು ಹೊಂದುವ ಸಲುವಾಗಿ ಇಲ್ಲಿ ಕಾಲಕಾಲಕ್ಕೆ ಜನರಲ್ಲಿ ಅರಿವು ಮತ್ತು ಕೆಲವು ಯೋಜನೆ ರೂಪಿಸಲಾಗುತ್ತದೆ .

ಬೆಲಾರಸ್‌ನಲ್ಲಿ ಮಕ್ಕಳು ಜನಿಸಿದ ನಂತರ ಮೂರು ವರ್ಷಗಳವರೆಗೆ ಸರ್ಕಾರವೇ ಹಣಕಾಸಿನ ನೆರವು ನೀಡಲಾಗುತ್ತದೆ. ಮಗು ಹುಟ್ಟಿದ ತಕ್ಷಣ 1 ಲಕ್ಷ 28 ಸಾವಿರ. ಆ ನಂತರ ಪ್ರತಿ ತಿಂಗಳು 18 ಸಾವಿರ ರೂಪಾಯಿಯಂತೆ ಮೂರು ವರ್ಷಗಳ ಕಾಲ ಪೋಷಕರ ಖಾತೆಗೆ ಹಣ ಜಮೆ ಆಗಲಿದೆ. ಆ ಹಣದಲ್ಲಿ ಮಕ್ಕಳಿಗೆ ಬೇಕಾದ ಹಾಲು, ಡೈಪರ್, ಬಟ್ಟೆ ವಸ್ತುಗಳನ್ನು ಖರೀದಿಸಲು ಬಳಸುತ್ತಾರೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: ಬೊಜ್ಜು ಇರುವವರಿಗೆ ಪಾರ್ಶ್ವವಾಯು ಬರಬಹುದು, ಎಚ್ಚರ!

Leave A Reply

Your email address will not be published.