Karnataka Assembly Election 2023: ಮೇ 10 ತಪ್ಪದೇ ವೋಟ್‌ ಮಾಡಿದ್ರೆ ಈ ಕ್ಷೇತ್ರದ ಜನರಿಗೆ ಸಿಗುತ್ತೆ ಬಂಪರ್ ಗಿಫ್ಟ್‌..! ಮತ ಚಲಾಯಿಸಿ, ಬಹುಮಾನ ಪಡೆದು ಆನಂದಿಸಿ

Karnataka assembly election on may 10 2023

Karnataka assembly election 2023: ಮತದಾನವು ಭಾರತೀಯರಾದ(Karnataka assembly election 2023) ನಮ್ಮೆಲ್ಲರ ಹಕ್ಕು. ಇತರ ಹಕ್ಕುಗಳನ್ನು ನಾವು ಹೇಗೆ ಕೇಳಿ ಪಡೆಯುತ್ತೇವೆಯೋ ಅಂತೆಯೇ ಮತವನ್ನು ತಪ್ಪದೇ ಚಲಾಯಿಸಬೇಕು. ಆದರಿಂದು ವರ್ಷದಿಂದ ವರ್ಷಕ್ಕೆ ಮತ ಚಾಲಾವಣೆ ಕಡಿಮೆಯಾಗುತ್ತಿದೆ. ವಿದ್ಯಾವಂತರೂ ಕೂಡ ಓಟು ಹಾಕದೆ ಸುಮ್ಮನಿರುತ್ತಾರೆ. ಆದರೆ ಇಲ್ಲೊಂದು ಕ್ಷೇತ್ರದಲ್ಲಿ ಮತದಾರರು ತಪ್ಪದೆ ಮತ ಚಲಾಯಿಸುವಂತೆ ಮಾಡಲು ಮೇ 10ರಂದು ಓಟು ಹಾಕಿದವರಿಗೆ ಬಂಪರ್ ಬಹುಮಾನವನ್ನು ಕೊಡಲಾಗುತ್ತದೆ ಅಂತೆ.

ಹೌದು, ಹುಬ್ಬಳ್ಳಿ ಧಾರವಾಡ (Hubballi Dharwad) ಸ್ಮಾರ್ಟ್ ಸಿಟಿ (Smart City) ವತಿಯಿಂದ ಮೇ 10 ರಂದು ತಪ್ಪದೇ ಮತ ಚಲಾಯಿಸುವವರಿಗೆ 100 ರೂ. ಉಚಿತ ಬೈಸಿಕಲ್ ರಿಚಾರ್ಜ್ (Smart Bicycle Recharge)ಪಡೆಯುವ ಸುವರ್ಣಾವಕಾಶ ನೀಡಿದೆ. ಮತ ಚಲಾಯಿಸುವ ಮೂಲಕ ಸವಾರಿ ಸವಾರರ ಖಾತೆಗೆ 100 ರೂ. ಗಳ ಉಚಿತ ರಿಚಾರ್ಜ್ ಕೊಡುಗೆ ಪಡೆಯಬಹುದು ಎಂದು ಹೇಳಿದೆ.

ಅಸ್ತಿತ್ವದಲ್ಲಿರುವ ಸೈಕಲ್‌ ಬಳಕೆದಾರರು ಮೇ 10 ರಂದು ಮತ ಚಲಾಯಿಸಿದ ನಂತರ ನಿಮ್ಮ ತೋರುಬೆರಳನ್ನು ಶಾಯಿಯಿಂದ ತೋರಿಸುವ ಸೆಲ್ಫಿ ತೆಗೆದು, ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 6363803942 ಸಂಖ್ಯೆಗೆ ವಾಟ್ಸಪ್ ಮಾಡಬೇಕು. ಹೊಸ ಬಳಕೆದಾರರು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಮೇ 10 ರೊಳಗೆ ಸವಾರಿ ಸ್ಮಾರ್ಟ್ ಕಾರ್ಡ್ ಪಡೆದು, ಅಸ್ತಿತ್ವದಲ್ಲಿರುವ ಸವಾರಿ ಬಳಕೆದಾರರ ಕಾರ್ಯವಿಧಾನ ಅನುಸರಿಸಬೇಕು.

ಅಂದಹಾಗೆ ಈ ಕೊಡುಗೆ ಮೇ 10ರ ಮಧ್ಯರಾತ್ರಿಯವರೆಗೆ ಮಾತ್ರ ಚಾಲ್ತಿಯಲ್ಲಿರಲಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 6363902155 ಸಂಪರ್ಕಿಸುವಂತೆ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಮತದಾರರೇ, ತಪ್ಪದೇ ಮೇ 10ರಂದು ಓಟ್ ಮಾಡಿ. ಮತಚಲಾಯಿಸಿ, ಬಹುಮಾನ ನಿಮ್ಮದಾಗಿಸಿ, ಆನಂದಿಸಿ.

ಇದನ್ನೂ ಓದಿ: ಮೋದಿ ಸರ್ಕಾರದ ಈ ಯೋಜನೆಯಡಿ ಮಹಿಳೆಯರಿಗೆ ದೊರಕುತ್ತೆ ರೂ.5000! 

Leave A Reply

Your email address will not be published.