D K Shivkumar: ಅಬ್ಬಬ್ಬಾ! ಒಂದಲ್ಲ, ಎರಡಲ್ಲ…ಹೆಲಿಕಾಪ್ಟರ್​ಗೆ ಗುದ್ದಲು ಬಂದ ಹದ್ದುಗಳೆಷ್ಟು ಗೊತ್ತಾ? ಭಯಾನಕ ಸತ್ಯ ಬಿಚ್ಚಿಟ್ಟ ಡಿಕೆಶಿ!

eagles came to punch the helicopter of Dk shivakumar

Share the Article

D K Shivakumar: ಕೆಪಿಸಿಸಿ(KPCC) ಅಧ್ಯಕ್ಷ ಡಿಕೆ ಶಿವಕುಮಾರ್​(D K Shivakumar) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ಗೆ ಹದ್ದು ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್​ ಯಾವುದೇ ಅನಾಹುತ ಸಂಭವಿಸದೆ ಅವರು ಕೂದಲೆಳೆಯಲ್ಲಿ ಪಾರಾಗಿರೋ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಸದ್ಯ ಗಂಡಾಂತರದಿಂದ ಪಾರಾಗಿರುವ ಡಿಕೆ ಶಿವಕುಮಾರ್ ಅವರು ಅಜ್ಜಯ್ಯನ ಮೊರೆ ಹೋಗಿದ್ದು ಬಳಿಕ ಅಂದು ನಡೆದ ಘಟನೆತ ಬಗ್ಗೆ ಭಯಾನಕ ಸತ್ಯವೊಂದನ್ನು ಹೊರಹಾಕಿದ್ದಾರೆ.

ಹೌದು, ಹೆಲಿಕಾಪ್ಟರ್ ಪ್ರಯಾಣದಲ್ಲಾದ ಅವಗಡದ ಕುರಿತು ಮಾತನಾಡಿದ ಡಿಕೆಶಿ, “ನಾವು ಪ್ರಯಾಣಿಸುವಾಗ ಹೆಲಿಕಾಪ್ಟರ್​ನತ್ತ ಮೂರು ಹದ್ದುಗಳು ಬಂದವು. ಆದರೆ ಎರಡು ಹದ್ದುಗಳು ಹೆಲಿಕಾಪ್ಟರ್​​ಗೆ ಡಿಕ್ಕಿಯಾಗೋದನ್ನು ನಮ್ಮ ಪೈಲಟ್​​ ತಪ್ಪಿಸಿದರು. ಏನೋ ದೇವರ ಕೃಪೆಯಿಂದ ನಾನು ಸುರಕ್ಷಿತವಾಗಿ ಮರಳಿದೆ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಅಲ್ಲದೆ “ಹೆಲಿಕಾಪ್ಟರ್​​ ಟೇಕಾಫ್​ ಆಗಿ 10 ನಿಮಿಷ ಆಗಿತ್ತು. ಹೊಸಕೋಟೆ ಬಳಿ ಹೆಲಿಕಾಪ್ಟರ್​ ಹಾರಾಟದ ವೇಳೆ ಹದ್ದು ಡಿಕ್ಕಿ ಹೊಡೆಯಿತು. ಅದೃಷ್ಟವತಾಶ್ ಯಾವುದೇ ಅವಘಡ ಸಂಭವಿಸಿಲ್ಲ. ಹೆಲಿಕಾಫ್ಟರ್ ನಲ್ಲಿದ್ದ ಎಲ್ಲರೂ ಸುರಕ್ಷಿತರಾಗಿದ್ದಾರೆ. ರಾಜ್ಯದ ಜನತೆ ಹಾಗೂ ದೇವರ ಅನುಗ್ರಹದಿಂದ ನಾನು ಪಾರಾಗಿದ್ದೇನೆ” ಎಂದರು.

ಅಂದಹಾಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಹೆಚ್‌ಎಎಲ್‌ನಿಂದ ಮುಳಬಾಗಿಲಿಗೆ ತೆರಳುತ್ತಿತ್ತು. ಈ ವೇಳೆ ರಣಹದ್ದು ಬಡಿದಿದ್ದು, ಕಾಪ್ಟರ್‌ನ ವಿಂಡೋ ಗಾಜು ಪುಡಿಪುಡಿಯಾಗಿದೆ. ಆದ್ದರಿಂದ ಕಾಪ್ಟರ್ ಅನ್ನು ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಅವರು ಇಂದು ತುಮಕೂರು ಜಿಲ್ಲೆಯ ತುರುವೇಕೆರೆ ಬಳಿ ಇರುವ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದು, ಅಲ್ಲಿನ ಜ್ಯೋತಿಷಿಗಳ ಬಳಿ ಇದರ ಪರಿಣಾಮ ಹಾಗೂ ಪರಿಹಾರದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಅಲ್ಲದೆ ಈ ವಿಚಾರವನ್ನೀಗ ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯಲ್ಲಿ ವಿಮರ್ಶೆ ಮಾಡಲಾಗುತ್ತಿದೆ. ಅನೇಕರು ಟೀಕೆ ಮಾಡುತ್ತಿದ್ದಾರೆ. ಬಜರಂಗದಳ ನಿಷೇಧಿಸುವುದಾಗಿ ಹೇಳಿದ ಒಂದೇ ಗಂಟೆಯಲ್ಲಿ ಜಟಾಯು ತಕ್ಕ ಪಾಠ ಕಲಿಸಿದ್ದಾನೆ. ಇದು ರಾಮ-ಹನುಮನ ಕೋಪ!, ಮತ್ತೆ ಕೆಲವೆಡೆ ಮುಂದಿನ ಚುನಾವಣೆಯಲ್ಲಿ ಸರ್ಕಾರ ಸೋಲುವುದಕ್ಕೆ ಇದು ಸಂಕೇತ ಎನ್ನುವ ಮಾತುಗಳು ಹರಿದಾಡುತ್ತಿವೆ.

ಇದನ್ನೂ ಓದಿ: ಡ್ರೋನ್ ಬಳಸಿ ಪುಟಿನ್ ಹತ್ಯೆಗೆ ಉಕ್ರೇನ್ ಸ್ಕೆಚ್! ಕೂದಲೆಳೆ ಅಂತರದಲ್ಲಿ ಪಾರಾದ ರಷ್ಯಾ ಅಧ್ಯಕ್ಷ! ವಿಡಿಯೋ ವೈರಲ್

Leave A Reply