Anushka Sharma: ಅಯ್ಯಯ್ಯೋ.. ಅನುಷ್ಕಾ ಶರ್ಮಾ ಚಡ್ಡಿ ಹಾಕಲ್ವಾ ? ವಿರಾಟ್ ಕೊಹ್ಲಿ, ಹೆಂಡ್ತಿಗೊಂದು ಚಡ್ಡಿ ಕೊಡಿಸಿ ಎಂದ ನೆಟ್ಟಿಗರು !

Anushka Sharma forget to wear the pant

Anushka Sharma: ಮೇ 1ರಂದು ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟಿ ಅನುಷ್ಕಾ ಶರ್ಮಾ(Anushka Sharma) ಅವರ ಕೆಲವೊಂದು ಫೋಟೋಗಳನ್ನು, ಅವರ ಪತಿರಾಯ ವಿರಾಟ್​ ಕೊಹ್ಲಿ(Virat Kohli) ಸೋಷಿಯಲ್ ಮೀಡಿಯಾಗಳಲ್ಲಿ ಶೇರ್​ ಮಾಡಿದ್ದಾರೆ. ಈ ಫೋಟೋಗಳಿಗೆ ಮೆಚ್ಚುಗೆ ಕೂಡ ಬಂದಿತ್ತು. ಆದರೀಗ ಅದರಲ್ಲಿ ಒಂದು ಫೋಟೋ ಮಾತ್ರ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ. ಇದಕ್ಕೆ ಕಾರಣವೇನು?

 

ಹೌದು, ಬಾಲಿವುಡ್(Bollywood) ನಟಿ ಅನುಷ್ಕಾ ಶರ್ಮಾ ಇಂದು 35 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟಿಯ ಜನುಮ ದಿನಕ್ಕೆ ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಹಲವರು ಭಿನ್ನವಾಗಿ ಜನ್ಮದಿನದ ಶುಭಾಶಯ ಕೋರಿದ್ದಾರೆ. ಈ ವೇಳೆ ಅನುಷ್ಕಾ ಹುಟ್ಟುಹಬ್ಬದಂದು ಅವರ ಒಟ್ಟು 7 ಫೋಟೋಗಳನ್ನು ಇನ್ಸ್​​ಗ್ರಾಂನಲ್ಲಿ ಹಂಚಿಕೊಂಡಿರುವ ವಿರಾಟ್, ನಿನ್ನೆಲ್ಲ ಹುಚ್ಚುತನವನ್ನು ಪ್ರೀತಿಸುತ್ತೇನೆ. ನೀನು ನನ್ನ ಸರ್ವಸ್ವ. ಹುಟ್ಟುಹಬ್ಬ ಶುಭಾಶಯಗಳು ಎಂದು ಬರೆದುಕೊಂಡಿದ್ದರು. ಅದರಲ್ಲಿ ಒಂದು ಫೋಟೋ ಮಾತ್ರ ನೆಟ್ಟಿಗರ ತಲೆ ಕೆಡಿಸಿದ್ದು ಸಾಕಷ್ಟು ಟ್ರೋಲ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಯಾಕಂದರೆ ಈ ಫೋಟೋದಲ್ಲಿ ಅನುಷ್ಕಾ ಕೆಂಪು ಬಣ್ಣದ ಬಟ್ಟೆ ತೊಟ್ಟು ಫೋಟೋಗೆ ಪೋಸ್​ ಕೊಟ್ಟಿದ್ದು ಕೆಳಗಡೆ ಚಡ್ಡಿಯನ್ನೇ ಹಾಕಿಲ್ಲ! ಅಂದರೆ ಹಾಕೇ ಇಲ್ಲ ಎಂದಲ್ಲ, ಒಳ ಉಡುಪು ಹಾಕಿರುತ್ತಾರೆ, ಆದರೆ ಈ ಫೋಟೋದಲ್ಲಿ ಅವರ ಒಳ ಉಡುಪು ಕಾಣಿಸುತ್ತಿಲ್ಲ ಎನ್ನುವುದು ನೆಟ್ಟಿಗರ ಕಣ್ಣುಕುಕ್ಕಿದೆ. ದೀಪಿಕಾ ಪಡುಕೋಣೆಯ ಬೇಷರಂ ರಂಗ್​ ಹಾಡಿನಲ್ಲಿ ಆಕೆ ಬಿಕಿನಿ ಧರಿಸಿದ್ದ ಫೋಟೋ ವೈರಲ್​ ಆಗಿತ್ತು. ಇಲ್ಲಿ ಅದನ್ನೂ ಅನುಷ್ಕಾ ಅವರ ಈ ಫೋಟೋಗೆ ಕಂಪೇರ್​ ಮಾಡಲಾಗಿದೆ.

ಈ ಫೋಟೋ ನೋಡಿದ ನೆಟ್ಟಿಗಂರತೂ ತರಹೆವಾರಿ ಕಮೆಂಟ್ ಮಾಡಿದ್ದು, ವಿರುಷ್ಕಾ ಜೋಡಿಯನ್ನು ಕ್ಲಾಸ್ ತೆಗೆದುಕೊಂಡಿವೆ. ಹಣಕ್ಕಾಗಿ ಹೀಗೆಲ್ಲಾ ಮಾಡ್ತಾರೆ, ಆದರೆ ನೀವು ಕೂಡ ಹೀಗೆ ಮಾಡುವುದು ಸರಿಯಲ್ಲ, ಇಂಥ ಡ್ರೆಸ್​ ಹಾಕಿಕೊಂಡು ಫೋಟೋಗೆ ಪೋಸ್​ ಕೊಡುವುದು ಎಷ್ಟು ಸರಿ, ನಿಮ್ಮ ಅಭಿಮಾನಿಗಳಿಗೆ ಇದೆಂಥ ಸಂದೇಶ ಕೊಡುತ್ತಿದ್ದೀರಿ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಷೇ ಅಲ್ಲದೆ ನಿಮ್ಮ ಪತ್ನಿಯ ಫೋಟೋಶೂಟ್​ (Photoshoot) ಮಾಡುವ ಮೊದಲು ಅವರಿಗೆ ಒಂದು ಚಡ್ಡಿ ಕೊಡಿಸಬಾರದಿತ್ತೆ ಎಂದು ಕೆಲವರು ವಿರಾಟ್​ ಕೊಹ್ಲಿಯವರ ಕಾಲೆಳೆಯುತ್ತಿದ್ದಾರೆ. ಅನುಷ್ಕಾ ಚಡ್ಡಿ ಹಾಕದೆ ಫೋಟೋಗೆ ಪೋಟ್​ ಕೊಟ್ಟಿದ್ದನ್ನು ನೀವು ನೋಡೇ ಇಲ್ವಾ ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಛೇ ಛೇ ಇಂಥ ಕೆಟ್ಟ ಫೋಟೋ ಅದೂ ನಿಮ್ಮದೇ ಪತ್ನಿಯ ಅಂಗ ಸಾರ್ವಜನಿಕಗೊಳಿಸಲು ನಿಮಗೆ ಹೇಗೆ ಮನಸ್ಸು ಬರುತ್ತಿದೆ ಎಂದು ಇನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ.

ಅಂದಹಾಗೆ 2013 ರಲ್ಲಿ ಶಾಂಪೂ ಒಂದರ ಜಾಹೀರಾತಿನ ಸಂದರ್ಭದಲ್ಲಿ ಅನುಷ್ಕಾ ಮತ್ತು ವಿರಾಟ್ ಭೇಟಿಯಾದರು. ಭೇಟಿ ಸ್ನೇಹವಾಗಿ, ಪ್ರೇಮವಾಯಿತು. ನಂತರ ವಿರಾಟ್ ಮತ್ತು ಅನುಷ್ಕಾ ಡಿಸೆಂಬರ್ 11, 2017 ರಂದು ಇಟಲಿಯಲ್ಲಿ ವಿವಾಹವಾದರು. 2021 ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಅವರಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ! ಒಂದಲ್ಲ, ಎರಡಲ್ಲ…ಹೆಲಿಕಾಪ್ಟರ್​ಗೆ ಗುದ್ದಲು ಬಂದ ಹದ್ದುಗಳೆಷ್ಟು ಗೊತ್ತಾ? ಭಯಾನಕ ಸತ್ಯ ಬಿಚ್ಚಿಟ್ಟ ಡಿಕೆಶಿ!

Leave A Reply

Your email address will not be published.