BSF seized snake venom: ಅಬ್ಬಾಬ್ಬಾ! 13 ಕೋಟಿ ಬೆಲೆ ಬಾಳೋ ಹಾವಿನ ವಿಷ ವಶಕ್ಕೆ ಪಡೆದ ಬಿಎಸ್‌ಎಫ್! ಭಾರತ-ಬಾಂಗ್ಲ ಗಡಿಯಲ್ಲಿ ಇದು ಸಿಕ್ಕಿದ್ದಾದ್ರೂ ಹೇಗೆ?
BSF seized snake venom: ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಸೋಮವಾರ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) 137 ಬೆಟಾಲಿಯನ್ ಯೋಧರ ತಂಡವು ಹಾವಿನ ವಿಷ(BSF seized snake venom) ತುಂಬಿದ ಗಾಜಿನ ಜಾರ್ಅನ್ನು ವಶಪಡಿಸಿಕೊಂಡಿದೆ.
ಹೌದು, ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಹಿಲ್ಲಿಯ ಗೋಶ್‌ಪುರ ಬಿಒಪಿಯ ಪಹಾನ್ ಪಾರಾ ಗಡಿಯಲ್ಲಿ ಹಾವಿನ ವಿಷ ತುಂಬಿದ ಜಾರ್ ಅನ್ನು ಬಿಎಸ್‌ಎಫ್ ಪತ್ತೆ ಹಚ್ಚಿದೆ. ಈ ವಿಷಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯ 13 ಕೋಟಿ ರೂಪಾಯಿ ಆಗಿದೆಯಂತೆ. ಅಲ್ಲದೆ ಈ ಜಾರ್ ಮೇಲೆ ಮೇಡ್ ಇನ್ ಫ್ರಾನ್ಸ್ ಎಂದು ಬರೆಯಲಾಗಿದೆ.
ಅಂದಹಾಗೆ BSF ಪಡೆಗಳು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಗಸ್ತು ತಿರುಗುತ್ತಿವೆ. ಒಂದು ಸಣ್ಣ ಅನುಮಾನ ಬಂದರೂ ಭದ್ರತಾ ಪಡೆಗಳು ಜಾಗೃತಗೊಳ್ಳುತ್ತವೆ. ಇಂತಹ ಗಡಿಯಲ್ಲಿ ಇಬ್ಬರು ಕಳ್ಳಸಾಗಣೆದಾರರು ಹಾವಿನ ವಿಷವಿರುವ ಗಾಜಿನ ಜಾರ್ ಅನ್ನು ಗಡಿಯ ಮೂಲಕ ಬಾಂಗ್ಲಾದೇಶಕ್ಕೆ ಸಾಗಿಸುವ ಬಗ್ಗೆ ಗುಪ್ತಚರ ಇಲಾಖೆಯ ರಹಸ್ಯ ಮೂಲಗಳಿಂದ ಮಾಹಿತಿ ಬಂದಿದೆ. ಕಳ್ಳಸಾಗಾಣಿಕೆ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕ ಬಳಿಕ ಸೇನೆ ಎಚ್ಚೆತ್ತುಕೊಂಡಿತ್ತು. ಮಧ್ಯರಾತ್ರಿ ಇಬ್ಬರು ವ್ಯಕ್ತಿಗಳು ಭಾರತಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದ ವೇಳೆ ಬಿಎಸ್‌ಎಫ್ ಪಡೆ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಸ್ಥಳದಿಂದ ಇಬ್ಬರೂ ಕಾಲ್ಕಿತ್ತಿದ್ದು, ಈ ಕ್ರಮದಲ್ಲಿ ಅವರು ಬೀಳಿಸಿದ ಜಾರ್ ತರಹದ ಬಾಟಲಿಯನ್ನು ವಶಪಡಿಸಿಕೊಂಡರು.
ನಂತರ ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಹಿಲಿ ಪೊಲೀಸ್ ಠಾಣೆ ವ್ಯಾಪ್ತಿಯ ಘೋಷ್‌ಪುರ ಬಿಒಪಿ ಪ್ರದೇಶದಲ್ಲಿ ಬಾಟಲಿಯನ್ನು ತೆರೆದಾಗ ಒಳಗಡೆ ವಿಷ ಇರೋದು ಬೆಳಕಿಗೆ ಬಂದಿದೆ. ಅದರ ಬೆಲೆ ಬರೋಬ್ಬರಿ 13 ಕೋಟಿ ರೂಪಾಯಿ ಎಂದು ಬಿಎಸ್‌ಎಫ್ ಪಡೆ ಬಹಿರಂಗಪಡಿಸಿವೆ. ಇನ್ನು ಈ ಬಾಟಲಿಯಲ್ಲಿ ರೆಡ್ ಡ್ರ್ಯಾಗನ್ ಕಂಪನಿ ಮೇಡ್ ಇನ್ ಫ್ರಾನ್ಸ್ ಎಂದು ಬರೆಯಲಾಗಿದೆ. ಬಾಟಲ್ ನಲ್ಲಿರುವ ಹಾವಿನ ವಿಷ ನಾಗರ ಹಾವಿನದ್ದು. ಬಿಎಸ್‌ಎಫ್ 137ನೇ ಬೆಟಾಲಿಯನ್ ವಶಪಡಿಸಿಕೊಂಡ ಹಾವಿನ ವಿಷವನ್ನು ಬಲುಘಾಟ್ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.
ಬಿಎಸ್‌ಎಫ್ ಹೇಳಿದ್ದೇನು?:ಇಬ್ಬರು ಕಳ್ಳಸಾಗಣೆದಾರರನ್ನು ಹಿಡಿಯಲು ಸಾಧ್ಯವಾಗಿಲ್ಲ. ಅದರ ನಂತರ, ಗಡಿ ಕಾವಲುಗಾರರು ಕಳ್ಳಸಾಗಣೆದಾರರು ಬಿಟ್ಟುಹೋದ ಸರಕುಗಳನ್ನು ಹುಡುಕಲು ಪ್ರಾರಂಭಿಸಿದ ವೇಳೆ, ಹಾವಿನ ವಿಷವಿರುವ ಗಾಜಿನ ಜಾರ್ ಪತ್ತೆಯಾಗಿದೆ, ಬಳಿಕ ಅದನ್ನು ವಶಪಡಿಸಿಕೊಂಡೆವು. ಅದರ ಮೇಲೆ “ಮೇಡ್ ಇನ್ ಫ್ರಾನ್ಸ್” ಎಂದು ಬರೆಯಲಾಗಿದೆ. ಅದರಲ್ಲಿ ಸ್ವಲ್ಪ ದ್ರವ ರೂಪದವಿದೆ. ಪತ್ತೆಯಾದ ದ್ರವವು ನಾಗರ ಹಾವಿನ ವಿಷವಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಬಿಎಸ್ಎಫ್ನ 137ನೇ ಬೆಟಾಲಿಯನ್ ಯೋಧರು ನಡೆಸಿದ ಗುಂಡಿನ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಪತ್ತೆಯಾದ ಹಾವಿನ ವಿಷದ ಜಾರ್ಅನ್ನು ಸೋಮವಾರ ಮಧ್ಯಾಹ್ನ ಬಾಳೂರುಘಟ್ಟ ವ್ಯಾಪ್ತಿಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಜಾರ್‌ನಲ್ಲಿರುವ ದ್ರವವು ಪ್ರಾಥಮಿಕ ತನಿಖೆಯಲ್ಲಿ ವಿಷ ಎಂದು ಕಂಡುಬಂದರೂ ಕೂಡ, ಅದನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.