Bajarang Dal ban issue: ನಮ್ಮದು ಬಜರಂಗದಳ ಮನೆ, ಕಾಂಗ್ರೆಸ್‌ನವರು ಓಟ್ ಕೇಳೋಕೆ ಬಂದ್ರೆ ನಾಯಿ ಬಿಡ್ತೀವಿ – ಕಾಂಗ್ರೆಸ್ ವಿರುದ್ಧ ಮಲೆನಾಡಿಗರ ಆಕ್ರೋಶ!

Bajarang Dal ban issue: ಕಾಂಗ್ರೆಸ್‌ ಪಕ್ಷ (Karnataka Congress) ಇಂದು ತನ್ನ ಪ್ರಣಾಳಿಕೆ (Congress Manifesto) ಬಿಡುಗಡೆ ಮಾಡಿ ಅಧಿಕಾರಕ್ಕೆ ಬಂದ್ರೆ ಭಜರಂಗದಳ ನಿಷೇಧ (Bajrang Dal Karnataka Ban) ಮಾಡ್ತೇವೆ ಎಂದಿರುವುದು ಇಡೀ ನಾಡಿನ ಹನುಮ ಭಕ್ತರ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರನ್ನು ಕೆಂಡವಾಗಿಸಿದೆ. ಈ ಬೆನ್ನಲ್ಲೇ ಮಲೆನಾಡ ಮನೆಗಳ ಮುಂದೆ ಕಾಂಗ್ರೆಸ್ಸಿಗರು ಮತ ಕೇಳಲು ಬಂದರೆ ನಾಯಿ ಬಿಡಲಾಗುವುದು ಎಚ್ಚರ ಎಂಬ ಬೋರ್ಡ್ ಹಾಕಿ ಕಾಂಗ್ರೆಸ್ಸಿನ ಪ್ರಣಾಳಿಕೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ (Bajarang Dal ban issue) ಹೊರಹಾಕಿದ್ದಾರೆ.

 

ಹೌದು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಗುಡ್ಡಟ್ಟಿ ಎಂಬ ಗ್ರಾಮದಲ್ಲಿ ಅರುಣ್ ಎಂಬ ಭಜರಂಗದಳ ಕಾರ್ಯಕರ್ತ ತಮ್ಮ ಮನೆ ಮುಂದೆ ಬೋರ್ಡ್ ಹಾಕಿ ಮತ ಕೇಳಲು ಬರುವ ಕಾಂಗ್ರೆಸ್ಸಿಗರಿಗೆ ಎಚ್ಚರಿಕೆ ನೀಡಿದ್ದಾರೆ. ಇದು ಬಜರಂಗದಳದವರ ಮನೆ. ಕಾಂಗ್ರೆಸಿಗರು ಮತ ಕೇಳಲು ಅವಕಾಶವಿಲ್ಲ. ಕಾಂಗ್ರೆಸ್ಸಿಗರು ಮತ ಕೇಳಲು ಬಂದರೆ ನಾಯಿ ಬಿಡಲಾಗುವುದು ಎಚ್ಚರ ಎಂದು ಬೋರ್ಡ್ ಹಾಕಿದ್ದಾರೆ.

ಅಂದಹಾಗೆ ಕಾಫಿನಾಡ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಬಲಿಷ್ಠವಾಗಿದೆ. ದತ್ತಪೀಠದ ಹೋರಾಟ ಆರಂಭಗೊಂಡ ಮೇಲೆ ಮಲೆನಾಡು ಭಾಗದಲ್ಲಿ ಹಿಂದೂ ಸಂಘಟನೆ ಮತ್ತಷ್ಟು ಗಟ್ಟಿಯಾಗಿತ್ತು. ಇದೀಗ, ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಕೆಂಡವಾಗಿರೋ ಬಜರಂಗದಳ ನಾನಾ ರೀತಿ ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿದೆ. ಕಾಂಗ್ರೆಸ್ಸಿನ ಈ ಪ್ರಣಾಳಿಕೆ ಕಾಫಿನಾಡ ಮಲೆನಾಡು ಭಾಗದಲ್ಲಿ ಕಾಂಗ್ರೆಸ್ಸಿಗೆ ಮುಳ್ಳಾಗೋದು ಗ್ಯಾರಂಟಿ ಆಗಿದೆ.

ಮಂಗಳೂರು ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಛೇರಿ ಬಳಿ ಭಜರಂಗದಳ ಕಾರ್ಯಕರ್ತರು ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದ್ದಾರೆ. ಕಾಂಗ್ರೆಸ್ ವಿರುದ್ಧ ಚುನಾವಣೆ ಯಲ್ಲಿ‌ನೇರ ಹೋರಾಟಕ್ಕಿಳಿಯುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಮನೆ ಮನೆ ಪ್ರಚಾರ ಮಾಡುತ್ತೇವೆ. ಕಾಂಗ್ರೆಸ್ ಧಮ್ ಇದ್ದರೆ ಭಜರಂಗದಳ ವನ್ನು ನಿಷೇಧ ಮಾಡಲಿ. ಭಜರಂಗದಳ ದ ಕಾರ್ಯ ಚಟುವಟಿಕೆಯನ್ನು ನಿಷೇಧದ ಅಂಕುಶ ಹಾಕಿ ನಿಲ್ಲಿಸೋಕೆ ಸಾಧ್ಯವಿಲ್ಲ. ಪ್ರತಿಭಟನೆಯಲ್ಲಿ ಭಜರಂಗದಳ ಮುಖಂಡರಿಂದ ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:PM Modi’s security force helicopter stuck in mud field: ಅಯ್ಯಯ್ಯೋ! ಕೆಸರಿನ ಗದ್ದೆಯಲ್ಲಿ ಸಿಲುಕಿದ ಪ್ರಧಾನಿ ಮೋದಿ ಭದ್ರತಾ ಪಡೆಯ ಹೆಲಿಕಾಪ್ಟರ್: ಮುಂದಾದದ್ದೆಲ್ಲಾ ವಿಚಿತ್ರ!

Leave A Reply

Your email address will not be published.