M.B. Patil: ದೆಹಲಿಯ ಹೋಟೆಲಲ್ಲಿ ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಭೇಟಿ: ಎಂ ಬಿ. ಪಾಟೀಲ್ ಹೊಸ ಬಾಂಬ್ !
M.B. Patil: ಚುನಾವಣಾ (Karnataka election) ಹಿನ್ನೆಲೆ ಪ್ರಚಾರದ ಗಾಳಿ ಜೋರಾಗಿ ಬೀಸುತ್ತಿದೆ. ಜೊತೆಗೆ ಕೆಲವು ಬಿಸಿ ಬಿಸಿ ಸುದ್ದಿಗಳು ಹೊರಬೀಳುತ್ತಿದೆ. ಇದೀಗ ಎಂ ಬಿ. ಪಾಟೀಲ್ ( M.B. Patil ) ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (B. S. Yediyurappa) ಮತ್ತು ಶೋಭಾ ಕರಂದ್ಲಾಜೆ (Shobha Karandlaje) ವ್ಯಕ್ತಿಯೊಬ್ಬರನ್ನು ಭೇಟಿಯಾಗಿದ್ದರು ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
2013 ರಲ್ಲಿ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಕ್ತಿಯೊಬ್ಬರನ್ನು ಭೇಟಿಯಾಗಿದ್ದರು ಎಂದು
ಎಂ ಬಿ. ಪಾಟೀಲ್ (M.B. Patil) ಹೇಳಿದ್ದಾರೆ. ಅಲ್ಲದೆ, ಆ ವ್ಯಕ್ತಿ ಯಾರು? ಅವರು ಆ ವ್ಯಕ್ತಿಯನ್ನು ಯಾಕೆ ಭೇಟಿಯಾದರು? ಎಂಬುದನ್ನು ತಿಳಿಸುತ್ತೇನೆ ಎಂದಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagdish Shetter) ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ (Laxman Savadi) ಕಾಂಗ್ರೆಸ್ ಸೇರಿ ಬಿಜೆಪಿಯ ಬೆನ್ನಿಗೆ ಚೂರಿ ಹಾಕಿದ್ದೀರಿ ಎಂದು ಯಡಿಯೂರಪ್ಪನವರು ಆರೋಪಿಸಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು 2013ರಲ್ಲಿ ಕೆಜೆಪಿ ಆರಂಭಿಸಿದಾಗ ಬಿಜೆಪಿಯ ಎದೆಗೆ ಚೂರಿ ಹಾಕಿಲ್ಲವೇ? ಅಷ್ಟೇ ಅಲ್ಲದೆ, 2013ರಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೊಂದಿಗೆ ದೆಹಲಿಯ ಹೋಟೆಲ್ ವೊಂದರಲ್ಲಿ ವ್ಯಕ್ತಿಯೊಬ್ಬರನ್ನು ಭೇಟಿಯಾಗಿದ್ದೀರಾ! ನೆನಪಿದೆಯಾ? ಎಂದು ಯಡಿಯೂರಪ್ಪನವರಿಗೆ ಪಾಟೀಲ್ ಪ್ರಶ್ನೆ ಹಾಕಿದರು.
“ ವೀರಶೈವ-ಲಿಂಗಾಯತ ಸಮುದಾಯದ ಮುಖಂಡರನ್ನು ಕಣಕ್ಕಿಳಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂಚು ರೂಪಿಸಿ, ಈ ಇಬ್ಬರು ನಾಯಕರು ಬಿಜೆಪಿ ತೊರೆಯುವಂತೆ ಮಾಡಿದ್ದಾರೆ. ಇದು ವೀರಶೈವ-ಲಿಂಗಾಯತ ಸಮುದಾಯಕ್ಕೆ ತವರು ಮನೆಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 130-140 ಸ್ಥಾನಗಳನ್ನು ಗೆಲ್ಲಲಿದೆ” ಎಂದು ಹೇಳಿದರು.
ಸಮುದಾಯದ ನಾಯಕ ವೀರೇಂದ್ರ ಪಾಟೀಲ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ 1990ರಲ್ಲಿ ಕಾಂಗ್ರೆಸ್ (congress) ಅವರನ್ನು ಮುಖ್ಯಮಂತ್ರಿ (chief minister) ಸ್ಥಾನದಿಂದ ಕೆಳಗಿಳಿಸಿತು. ಆದರೆ, ಯಡಿಯೂರಪ್ಪನವರು ಚೆನ್ನಾಗಿದ್ದರು, ಅನಾರೋಗ್ಯವಿರಲಿಲ್ಲ ಆದರೂ ಬಿಜೆಪಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿತು. ಯಾಕೆ? ಕಾರಣವೇನು? ಎಂದು ಪಾಟೀಲ್ ಪ್ರಶ್ನಿಸಿದರು.
“ಬಿಜೆಪಿ ಪ್ರಚಾರದ ನೇತೃತ್ವ ವಹಿಸಲು ರಾಜ್ಯದಲ್ಲಿ ಬಿಜೆಪಿ ನಾಯಕರಿಲ್ಲದ ಕಾರಣ ನರೇಂದ್ರ ಮೋದಿ (Narendra Modi) ಹಾಗೂ ಅಮಿತ್ ಶಾ (Smith Shah) ಅವರನ್ನು ಕರ್ನಾಟಕದ ಖಾಯಂ ನಿವಾಸಿಯನ್ನಾಗಿ ಮಾಡಿದ್ದಾರೆ. ಶೆಟ್ಟರ್ ಮತ್ತು ಸವದಿಯನ್ನು ಸೋಲಿಸಲು ಯಡಿಯೂರಪ್ಪ ಅವರನ್ನು ನಿಯೋಜಿಸಲಾಗಿದೆ. ಯಡಿಯೂರಪ್ಪ ಅವರು ತಮ್ಮ ಇಬ್ಬರು ಮಕ್ಕಳ ರಾಜಕೀಯ ಭವಿಷ್ಯದ ಬಗ್ಗೆ ಹೆದರಿ ಈ ಕೆಲಸಕ್ಕೆ ಇಳಿದಿದ್ದಾರೆ” ಎಂದು ಹೇಳಿದರು.
ಇದನ್ನು ಓದಿ: Karnataka Polls 2023: ಭಜರಂಗದಳ ನಿಷೇಧ ಕುರಿತ ಕಾಂಗ್ರೆಸ್ ಪ್ರಣಾಳಿಕೆ ವಿಷಯಕ್ಕೆ ಪ್ರಧಾನಿ ಮೋದಿ ಏನಂದ್ರು ಗೊತ್ತಾ?