Mother Teresa Scholarship: ಉನ್ನತ ಶಿಕ್ಷಣ ಪಡೆಯುವವರಿಗೆ ಇಲ್ಲಿದೆ ಬೆಸ್ಟ್ ಸ್ಕಾಲರ್ ಶಿಪ್! ನಿಮಗಿರಬೇಕಾದ ಅರ್ಹತೆಗಳೇನು? ಇಲ್ಲಿದೆ ಕಂಪ್ಲೀಟ್ ವಿವರ
Mother Teresa Scholarship : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು, ಕೇರಳ ಸರ್ಕಾರವು ಮದರ್ ತೆರೆಸಾ ವಿದ್ಯಾರ್ಥಿವೇತನವನ್ನು (Mother Teresa Scholarship) ನೀಡುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಈ ವಿದ್ಯಾರ್ಥಿ ವೇತನ ಸಿಗಲಿದೆ.
ಈ ಯೋಜನೆಡಿಯಲ್ಲಿ, ಉತ್ತಮ ಭವಿಷ್ಯಕ್ಕಾಗಿ ಪ್ಯಾರಾಮೆಡಿಕಲ್ ಅಥವಾ ನರ್ಸಿಂಗ್ ಡಿಪ್ಲೊಮಾವನ್ನು ಮುಂದುವರಿಸಲು ಬಯಸುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
ಅಲ್ಪಸಂಖ್ಯಾತ ಸಮುದಾಯದ ಅನೇಕ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನವನ್ನು ಪ್ಯಾರಾಮೆಡಿಕಲ್ ಅಥವಾ ನರ್ಸಿಂಗ್ ಕೋರ್ಸ್‌ಗಳಲ್ಲಿ ಮುಂದುವರಿಸಲು ಬಯಸುತ್ತಾರೆ ಆದರೆ ದುರ್ಬಲ ಆರ್ಥಿಕ ಪರಿಸ್ಥಿತಿಗಳಿಂದ ಈ ಕೋರ್ಸ್‌ಗಳನ್ನು ಮುಂದುವರಿಸಲು ಅಸಾಧ್ಯವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇರಳ ಸರ್ಕಾರವು ಮದರ್ ತೆರೇಸಾ ಸ್ಕಾಲರ್‌ಶಿಪ್ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ, ಅಲ್ಪಸಂಖ್ಯಾತ ಸಮುದಾಯದ ಜನರು ತಮ್ಮ ಶಿಕ್ಷಣವನ್ನು ಸುಲಭವಾಗಿ ಮುಂದುವರಿಸಲು ಹಣಕಾಸಿನ ನೆರವು ನೀಡಲಾಗುವುದು. ನೀವೂ ಕೂಡಾ ಈ ಸ್ಕಾಲರ್ ಶಿಪ್ಗೆ ಅಪ್ಲೈ ಮಾಡಬಹುದು.
ಮುಖ್ಯವಾಗಿ ಮುಸ್ಲಿಂ, ಸಿಖ್, ಬೌದ್ಧ ಪಾರ್ಸಿಗಳು ಮತ್ತು ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಆ ವಿದ್ಯಾರ್ಥಿಗಳೆಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬಹುದು.
ಮದರ್ ತೆರೆಸಾ ವಿದ್ಯಾರ್ಥಿವೇತನ ಮೂಲಕ ವಿದ್ಯಾರ್ಥಿಗಳಿಗೆ ವಾರ್ಷಿಕ 15 ಸಾವಿರ ರೂಪಾಯಿ ಸಿಗುತ್ತದೆ. ಈ ಯೋಜನೆಯ ಸಂಪೂರ್ಣ ಜವಾಬ್ಧಾರಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕಾಲೇಜು ಶಿಕ್ಷಣ ಇಲಾಖೆ ನಿರ್ವಹಿಸುತ್ತದೆ. ಆರ್ಥಿಕ ಕಾರಣದಿಂದ ಯಾರೂ ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದೇ ಇದರ ಉದ್ದೇಶವಾಗಿದೆ.
ಈ ವಿದ್ಯಾರ್ಥಿವೇತನ ಪಡೆಯಲು, ಅರ್ಜಿದಾರರು ಕೇರಳದ ಖಾಯಂ ನಿವಾಸಿಯಾಗಿರಬೇಕು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು.ಉನ್ನತ ಶಿಕ್ಷಣ ಪಡೆಯುವವರಾಗಿರಬೇಕು. ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯವು ವಾರ್ಷಿಕ 8 ಲಕ್ಷಕ್ಕಿಂತ ಕಡಿಮೆ ಇರಬೇಕು. ನರ್ಸಿಂಗ್/ ಪ್ಯಾರಾಮೆಡಿಕಲ್ ಡಿಪ್ಲೊಮಾ ಕೋರ್ಸ್‌ಗಳ ಅರ್ಜಿದಾರರಾಗಿರಬೇಕು.
ಈ ಮೇಲೆ ನೀಡಿದ ಎಲ್ಲಾ ಅರ್ಹತೆಗಳನ್ನು ವಿದ್ಯಾರ್ಥಿಗಳು ಹೊಂದಿದ್ದರೆ ಮಾತ್ರ ಈ ಮದರ್ ತೆರೆಸಾ ವಿದ್ಯಾರ್ಥಿವೇತನವನ್ನು ಪಡೆಯಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ಐಶ್ವರ್ಯ ರೈ ಸಂಭಾವನೆ ಕೇಳಿದ್ರೆ ಶಾಕ್ ಆಗೋದು ಪಕ್ಕಾ, ಈಕೆಯ ಮುಂದೆ ರಶ್ಮಿಕಾ ಸಂಭಾವನೆ ಕೇವಲ ಅರ್ಧ !