Arun Gandhi: ಮಹಾತ್ಮ ಗಾಂಧಿ ಮೊಮ್ಮಗ ಅರುಣ್ ಗಾಂಧಿ ನಿಧನ!!!

Arun Gandhi: ಸ್ವಾಂತಂತ್ಯ ಹೋರಾಟಗಾರ ಮಹಾತ್ಮ ಗಾಂಧಿ (Mahatma Gandhi) ಅವರ ಮೊಮ್ಮಗ ಅರುಣ್‌ ಗಾಂಧಿ (89) ಅವರು ಮೇ.2 ಮಂಗಳವಾರದಂದು ನಿಧನರಾಗಿದ್ದಾರೆ. ಸಾಮಾಜಿಕ-ರಾಜಕೀಯ ಕಾರ್ಯಕರ್ತರಾಗಿ ಮತ್ತು ಲೇಖಕರಾಗಿ ಜನಪ್ರಿಯರಾಗಿದ್ದ ಅರುಣ್‌ ಗಾಂಧಿ (Arun Gandhi) ಅನಾರೋಗ್ಯದಿಂದ ಬಳುತ್ತಿದ್ದರು ಎನ್ನಲಾಗಿದ್ದು, ಇಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮರಣಹೊಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಇಂದು ಕೊಲ್ಹಾಪುರದಲ್ಲಿ ನಡೆಯಲಿದೆ ಎಂದು ಅವರ ಪುತ್ರ ತುಷಾರ್‌ ಗಾಂಧಿ ತಿಳಿಸಿದ್ದಾರೆ.

 

ಅರುಣ್‌ ಗಾಂಧಿಯವರು 14 ಏಪ್ರಿಲ್ 1934 ರಂದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಜನಿಸಿದರು. ಅವರ ತಂದೆ ಪತ್ರಿಕೆಯ ಸಂಪಾದಕರಾಗಿದ್ದರು. ತಾಯಿ ಕೂಡ ಅದೇ ಪತ್ರಿಕೆಯಲ್ಲಿ ಪ್ರಕಾಶಕರಾಗಿದ್ದರು ಎಂದು ಹೇಳಲಾಗಿದೆ. ಅರುಣ್ ಗಾಂಧಿ ʻಗಿಫ್ಟ್‌ ಆಫ್‌ ಆಂಗರ್‌, ಆಂಡ್‌ ಅದರ್‌ ಲೆಸೆನ್ಸ್‌ ಫ್ರಂ ಮೈ ಗ್ರಾಂಡ್‌ಫಾದರ್‌ ಮಹಾತ್ಮ ಗಾಂಧಿ ಹೀಗೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ.

https://twitter.com/TusharG/status/1653223702383972354?s=20

ಇದನ್ನೂ ಓದಿ:Monthly salary in country: ವಿಶ್ವದಲ್ಲಿ ಅತಿ ಹೆಚ್ಚು ಸಂಬಳ ಇರುವ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

Leave A Reply

Your email address will not be published.