B K Hariprasad: ಭಯೋತ್ಪಾದನೆ ಬೆಂಬಲಿಸಿದ್ರೆ PFI, ಭಜರಂಗದಳ ಆದ್ರೂ ಬ್ಯಾನ್ ಮಾಡ್ತೇವೆ! ಮತ್ತೆ ನಾಲಗೆ ಹರಿಬಿಟ್ಟ ಬಿ.ಕೆ‌ ಹರಿಪ್ರಸಾದ್

B K Hariprasad: ಕಾಂಗ್ರೆಸ್‌ ಪಕ್ಷ (Karnataka Congress) ಇಂದು ತನ್ನ ಪ್ರಣಾಳಿಕೆ (Congress Manifesto) ಬಿಡುಗಡೆ ಮಾಡಿ ಅಧಿಕಾರಕ್ಕೆ ಬಂದ್ರೆ ಭಜರಂಗದಳ ನಿಷೇಧ (Bajrang Dal Karnataka Ban) ಮಾಡ್ತೇವೆ ಎಂದಿರುವುದು ಇಡೀ ನಾಡಿನ ಹನುಮ ಭಕ್ತರ ಹಾಗೂ ಭಜರಂಗದಳದ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಈಗಲೂ ಕೂಡ ದೇಶಾದ್ಯಂತ ಆಕ್ರೋಶ ಕೇಳಿ ಬರ್ತಿದೆ. ಆದ್ರೆ ಈ ನಡುವೆಯೇ ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ ಎಂದು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ (B K Hariprasad) ನಾಲಗೆ ಹರಿಬಿಟ್ಟಿದ್ದಾರೆ.

 

ಹೌದು, ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಹಾಗೂ ಭಯೋತ್ಪಾದನೆಗೆ ಉತ್ತೇಜನ ಕೊಟ್ಟರೇ ಆ ಸಂಘಟನೆಗಳನ್ನು ಬ್ಯಾನ್‌ ಮಾಡಬಹುದು. ಅದು PFI, FIA, ಭಜರಂಗದಳ (Bajrang Dal) ಆಗಿದ್ದರೂ ನಾವು ಬ್ಯಾನ್‌ ಮಾಡುತ್ತೇವೆ, ಯಾರು ದೇಶದಲ್ಲಿ ಶಾಂತಿಯನ್ನು ಕದಡಿ, ಭಯೋತ್ಪಾದನೆಗೆ ಬೆಂಬಲ ಕೊಡುತ್ತದೆಯೋ ಅದನ್ನು ನಾವು ಬ್ಯಾನ್‌ ಮಾಡಬೇಕಾಗುತ್ತದೆ, ನಮ್ಮ ದೇಶವು ಸರ್ವಜನಾಂಗದ ಶಾಂತಿ ತೋಟವಾಗಿದೆ. ಆದರೆ ಇಲ್ಲಿ ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಇಂದು ಚಾಣಕ್ಯ ಅಮಿತ್‌ ಶಾ ಇತರರು ರಾಜ್ಯಕ್ಕೆ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಯಾವತ್ತೂ ಬಿಜೆಪಿ ಸ್ಪಷ್ಟವಾಗಿ ಬಹುಮತ ಬಂದಿಲ್ಲ. ದೇಶದಲ್ಲಿ ತೆಗೆದುಕೊಂಡರೂ ಅವರಿಗೆ 3 ರಾಜ್ಯದಲ್ಲಿ ಮಾತ್ರ ಸ್ಪಷ್ಟ ಬಹುಮತ ಬಂದಿದೆ. ಬಾಕಿ ಎಲ್ಲಾ ರಾಜ್ಯದಲ್ಲೂ ಖರೀದಿ ಹಾಗೂ ಕುದುರೆ ವ್ಯಾಪಾರ ಮಾಡಿ ಸರ್ಕಾರ ಮಾಡುತ್ತಿದ್ದಾರೆ. ಆದ್ದರಿಂದ ಧರ್ಮ ಆಧಾರಿತ ರಾಜಕಾರಣ ಕಾಂಗ್ರೆಸ್‌ ಪಕ್ಷ ಮಾಡುವುದಿಲ್ಲ ಎಂದು ಹೇಳಿದರು.

ಪ್ರಣಾಳಿಕೆ ಘೋಷಣೆಯಾದ ಬಳಿಕ, ಅದರಲ್ಲೂ ಭಜರಂಗದಳ ನಿಷೇದದ ಪ್ರಸ್ತಾಪ ಕಿವಿಗೆ ಬಿದ್ದ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಭವಿಷ್ಯವೇ ಬದಲಾದಂತಿದೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ತೆಗೆದುಕೊಂಡ ಈ ನಿರ್ಧಾರ ಕೈಯ್ಯಾರೆ 10-15 ಸೀಟ್ ಕಳೆದುಕೊಳ್ಳುವಂತೆ ಮಾಡಿದೆ. ಇಷ್ಟಾದರೂ ಕಾಂಗ್ರೆಸ್ ಗೆ ತನ್ನ ತಪ್ಪಿನ ಅರಿವಾಗಿಲ್ದ ಎಂದು ಕಾಣುತ್ತದೆ.

ಅಂದಹಾಗೆ ಪ್ರಚಾರದ ವೇಳೆ ಈ ಪ್ರಣಾಳಿಕೆ ವಿಚಾರವಾಗಿ ಹರಿಹಾಯ್ದ ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ಅವರು “ಹನುಮಂತನ ಭಕ್ತರು ಭಜರಂಗದಳದ ಭಜರಂಗಿಗಳು. ಅದನ್ನು ಬ್ಯಾನ್ ಮಾಡುತ್ತೆವೆ ಎಂದು ಕಾಂಗ್ರೆಸ್ ಅವರು ಹೇಳುತ್ತಿದ್ದಾರೆ. ಹನುಮನ ಭಕ್ತರು ಒಬ್ಬೊಬ್ಬರು ಸಿಡಿದೆದ್ದು ನಿಂತರೆ ಬಜರಂಗದಳ ಬ್ಯಾನ್ ಮಾಡಲು ಮುಂದಾದ ನಿಮ್ಮ ಸರ್ಕಾರ ಹಾಗೂ ಪಕ್ಷವನ್ನು ಬೇರು ಸಮೇತ ಕಿತ್ತೊಗೆಯುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.

 

ಇದನ್ನು ಓದಿ: Karnataka 2nd PUC Supplementary Exam Time Table : ದ್ವಿತೀಯ PUC ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ!

Leave A Reply

Your email address will not be published.