FTII Recruitment 2023: FTII ನಲ್ಲಿ ಗ್ರೂಪ್ ಬಿ, ಸಿ ನಲ್ಲಿ ಹುದ್ದೆ! ಈ ಕೂಡಲೇ ಅರ್ಜಿ ಸಲ್ಲಿಸಿ

FTII Recruitment 2023: ಫಿಲ್ಮ್‌ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ನಲ್ಲಿ ಗ್ರೂಪ್‌ ಬಿ, ಸಿ ಕೆಲಸ ಹುಡುಕುತ್ತಿದ್ದವರಿಗೆ ಸುವರ್ಣ ಅವಕಾಶ ಇಲ್ಲಿದೆ. ಹೌದು, FTII ವಿವಿಧ ಗ್ರೂಪ್ B & C ಪೋಸ್ಟ್‌ಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿ ಪ್ರಾಧಿಕಾರ : ಫಿಲ್ಮ್‌ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾ (FTII Recruitment 2023 )
ಹುದ್ದೆಗಳ ಹೆಸರು : ಗ್ರೂಪ್‌ ಬಿ, ಗ್ರೂಪ್‌ ಸಿ ಹುದ್ದೆ
ಒಟ್ಟು ಹುದ್ದೆಗಳ ಸಂಖ್ಯೆ : 84
ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ / ದ್ವಿತೀಯ ಪಿಯುಸಿ / ಡಿಪ್ಲೊಮ / ಡಿಗ್ರಿ ಪಾಸ್ ಮಾಡಿರಬೇಕು.

ಯಾವುದೇ ಹುದ್ದೆಗೆ ಅರ್ಜಿ ಹಾಕಲು ರೂ.1000 ಶುಲ್ಕ ಪಾವತಿ ಮಾಡಬೇಕು. ಎಫ್‌ಟಿಐಐ ಗ್ರೂಪ್‌ ಬಿ, ಗ್ರೂಪ್‌ ಸಿ ಹುದ್ದೆಗಳಿಗೆ ಅರ್ಜಿ ಹಾಕಲು ಹುದ್ದೆಗಳಿಗೆ ಅನುಸಾರವಾಗಿ ಗರಿಷ್ಠ 25 ರಿಂದ 50 ವರ್ಷದವರೆಗೆ ಅವಕಾಶ ನೀಡಲಾಗಿದೆ.

ಮುಖ್ಯವಾಗಿ, ಕ್ಯಾಮೆರಾಮ್ಯಾನ್, ಗ್ರಾಫಿಕ್ ಅಂಡ್ ವಿಸುವಲ್ ಅಸಿಸ್ಟಂಟ್, ಫಿಲ್ಮ್‌ ಎಡಿಟರ್, ಲ್ಯಾಬೋರೇಟರಿ ಅಸಿಸ್ಟಂಟ್, ರಿಸರ್ಚ್‌ ಅಸಿಸ್ಟಂಟ್, ಪ್ರೊಡಕ್ಷನ್‌ ಅಸಿಸ್ಟಂಟ್, ಸೌಂಡ್‌ ರೆಕಾರ್ಡಿಸ್ಟ್‌, ಸ್ಟೆನೋಗ್ರಾಫರ್, ಅಪ್ಪರ್ ಡಿವಿಷನ್ ಕ್ಲರ್ಕ್, ಮೆಕ್ಯಾನಿಕ್, ಹಿಂದಿ ಟೈಪಿಸ್ಟ್‌ ಕ್ಲರ್ಕ್, ಮೆಕ್ಯಾನಿಕ್, ಕಾರ್ಪೆಂಟರ್, ಡ್ರೈವರ್, ಇಲೆಕ್ಟ್ರೀಷಿಯನ್, ಪೇಂಟರ್, ಟೆಕ್ನೀಷಿಯನ್, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ.

ಅಪ್ಲಿಕೇಶನ್‌ ಸಲ್ಲಿಸುವ ವಿಧಾನ :
FTII ಅಧಿಕೃತ ವೆಬ್‌ಸೈಟ್‌ ವಿಳಾಸ https://ftiirecruitment.in/Home/index.html ಕ್ಕೆ ಭೇಟಿ ನೀಡಿ. ಓಪನ್ ಆದ ಪೇಜ್‌ನಲ್ಲಿ ‘Registration’ ಎಂದಿರುವಲ್ಲಿ ಕ್ಲಿಕ್ ಮಾಡಿ. ಮತ್ತೊಂದು ಪೇಜ್‌ ಓಪನ್ ಆಗುತ್ತದೆ. ಇಲ್ಲಿ ಕೇಳಲಾದ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾದ ಮಾಹಿತಿಗಳು :
ಇ-ಮೇಲ್‌ ವಿಳಾಸ, ಮೊಬೈಲ್‌ ನಂಬರ್, ಹೆಸರು, ಎಸ್ಎಸ್‌ಎಲ್‌ಸಿ, ಅಂಕಪಟ್ಟಿ, ಆಧಾರ್ ಕಾರ್ಡ್, ಹುದ್ದೆಗೆ ನಿಗಧಿತ ವಿದ್ಯಾರ್ಹತೆ ದಾಖಲೆಗಳು.

ಪ್ರಮುಖ ದಿನಾಂಕಗಳು :
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 29-04-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 29-05-2023

ಫಿಲ್ಮ್‌ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾ ‘ ಈ ಹುದ್ದೆಗಳ ಕುರಿತು ವಿವರಗಳನ್ನು ಮೇಲಿನಂತೆ ತಿಳಿದು, ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: ಕೊಲೆಸ್ಟ್ರಾಲ್ ನಿಯಂತ್ರಿಸಲು ಒಂದು ಚಮಚ ಓಮ ಬೀಜಗಳನ್ನು ಸಾಕು!

Leave A Reply

Your email address will not be published.