Ayodhya: ಫೇಸ್ಬುಕ್ ಲೈವ್ ಬಂದು ಅಯೋಧ್ಯೆ ಅರ್ಚಕ ಆತ್ಮಹತ್ಯೆ : ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

Ayodhya: ಇತ್ತೀಚಿನ ದಿನಗಳಲ್ಲಂತೂ ಈ ಲೈವ್ ಸೂಸೈಡ್ ಗಳು ವಿಪರೀತ ಹೆಚ್ಚಾಗುತ್ತಿವೆ. ವಾರದಲ್ಲಿ ಒಂದಾದರೂ ಈ ತರದ ಸುದ್ದಿಗಳನ್ನು ನಾವು ಕೇಳುತ್ತಿರುತ್ತೇವೆ. ಆದರೀಗ ಆಶ್ಚರ್ಯ ಎಂಬಂತೆ ಅಯೋಧ್ಯೆ (Ayodhya)ದೇವಾಲಯದ ಯುವ ಅರ್ಚಕರೊಬ್ಬರು ಈ ರೀತಿಯಾಗಿ ಸಾಯುವ ಮುನ್ನ ಫೇಸ್ ಬುಕ್ ಲೈವ್ ಬಂದು ಸಾವಿನ ಕಾರಣ ತಿಳಿಸಿ ನಂತರ ದೇವಾಲಯದೊಳಗೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

 

ಹೌದು, ದೇವಸ್ಥಾನದ ಕೊಠಡಿಯೊಂದರಲ್ಲಿ ಅರ್ಚಕ (Priest) ನೇಣು ಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಅಯೋಧ್ಯೆಯಲ್ಲಿ (Ayodhya) ಸೋಮವಾರ ನಡೆದಿದೆ. 28 ರಿಂದ 30 ವರ್ಷದ ಒಳಗಿನ ರಾಮ್‌ಶಂಕರ್ ದಾಸ್ ಆತ್ಮಹತ್ಯೆ ಮಾಡಿಕೊಂಡಿರುವ ಅರ್ಚಕ.

 

ಅಂದಹಾಗೆ ಕಿರುಕುಳದಿಂದ ಮನನೊಂದ ನರಸಿಂಗ್ ದೇವಸ್ಥಾನದ ಅರ್ಚಕ ತನ್ನ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನವರಿಯಲ್ಲಿ ಮುಖ್ಯ ಅರ್ಚಕ ರಾಮ್ ಸರಣ್ ದಾಸ್ ನಾಪತ್ತೆಯಾದ ಬಳಿಕ ಇವರೊಬ್ಬರೇ ದೇವಸ್ಥಾನದಲ್ಲಿ ಉಳಿದುಕೊಂಡಿದ್ದರು. ಎಷ್ಟು ಬಡಿದರೂ ಬಾಗಿಲು ತೆರೆಯುತ್ತಿಲ್ಲ ಎಂಬ ಮಾಹಿತಿ ತಿಳಿದ ಕೂಡಲೇ ಪೊಲೀಸರು ಬಾಗಿಲು ಒಡೆದು ಒಳಗೆ ನುಗ್ಗಿದ್ದಾರೆ. ಈ ವೇಳೆ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಯೋಧ್ಯೆಯ ಎಸ್‌ಹೆಚ್‌ಒ (SHO) ಮನೋಜ್ ಕುಮಾರ್ ಶರ್ಮ ತಿಳಿಸಿದ್ದಾರೆ

 

ಇನ್ನು ಅರ್ಚಕ ರಾಮ್ ಶಂಕರ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಫೇಸ್‌ಬುಕ್ ಲೈವ್ (Facebook Live) ಬಂದಿದ್ದು, ರಾಯ್‌ಗಂಜ್ ಪೊಲೀಸ್ ಹೊರಠಾಣೆ ಪ್ರಭಾರ ಉಪನೀರಿಕ್ಷಕರಾಗಿದ್ದ ಸ್ವತಂತ್ರ ಕುಮಾರ್ ಮೌರ್ಯ ಹಾಗೂ ಕಾನ್ಸ್ಟೇಬಲ್‌ ಸುಭಾಷ್ ಸಿಂಗ್ ಇಬ್ಬರು ಪೊಲೀಸರು ತನಗೆ 2 ಲಕ್ಷ ರೂ. ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಫೇಸ್ ಬುಕ್ ಲೈವ್ ಮಾಡಿದ್ದಾರೆ. ಆದರೆ ಪೋಲೀಸ್ ಅಧಿಕಾರಿಗಳು ಮಾತ್ರ ಈ ಆರೋಪ ಆಧಾರರಹಿತ ಎಂದು ತಿಳಿಸಿದ್ದು, ರಾಮ್ ಶಂಕರ್ ತೀವ್ರ ಮಾದಕ ವ್ಯಸನಿಯಾಗಿದ್ದ ಎಂದು ತಿಳಿಸಿದ್ದಾರೆ.

 

ತೀವ್ರ ಮಾದಕವ್ಯಸನಿಯಾಗಿದ್ದ ಅರ್ಚಕರು ವಸ್ತುಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಿದ ಬಳಿಕ ಮಾದಕವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ಕೆಲವು ಗಂಟೆಗಳ ಬಳಿಕ ಇವರ ಫೇಸ್‌ಬುಕ್ ಲೈವ್ ಬಗ್ಗೆ ಮಾಹಿತಿ ಬಂದಿದೆ. ಇದನ್ನು ಅವರು ಆತ್ಮಹತ್ಯೆ ಮಾಡಿಕೊಳ್ಳುವ 10 ಗಂಟೆಗಳ ಮೊದಲು ಚಿತ್ರೀಕರಿಸಿದ್ದಾರೆ ಎಂದು ಎಸ್‌ಹೆಚ್‌ಒ (SHO) ಮನೋಜ್ ಕುಮಾರ್ ಶರ್ಮ ತಿಳಿಸಿದ್ದಾರೆ.

 

ಇದನ್ನೂ ಓದಿ : Survey of India Recruitment 2023: ಕೇಂದ್ರ ಸರ್ಕಾರದ ಹುದ್ದೆಗೆ ಅರ್ಜಿ ಆಹ್ವಾನ ; ತಿಂಗಳಿಗೆ 63 ಸಾವಿರ ಸಂಬಳ ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ 

 

Leave A Reply

Your email address will not be published.