Prathap Simha: ಅಮಿತ್‌ ಶಾ ಸಮಾವೇಶದಿಂದ ನಷ್ಟ ಅನುಭವಿಸಿದ ಮುಸ್ಲಿಂ ವ್ಯಾಪಾರಿ: ಹಣ ಪಾವತಿಸಿ ಮಾನವೀಯತೆ ಮೆರೆದ ಪ್ರತಾಪ್ ಸಿಂಹ!

Prathap Simha: ಕೇಂದ್ರ ಗೃಹ ಸಚಿವ ಅಮಿತ್ ಶಾ(Amith Sha) ಅವರ ಸಮಾವೇಶದ ವೇಳೆ ಮಾರಲು ತಂದಿದ್ದ ತಂಪು ಪಾನೀಯದ ವಾಹನದ ಮೇಲೆ ಜನರು ಮುಗಿಬಿದ್ದು, ಕೂಲ್​ ಡ್ರಿಂಕ್ಸ್​ ಕುಡಿದ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಿದ್ದ ಸಮೀರ್​ ಹಸನ್​ ಸಾಬ್​(Sameer Hasan Sab) ಅವರಿಗೆ ಸಂಸದ ಪ್ರತಾಪ್ ಸಿಂಹ(Prathap Simha) ಅವರು ಹಣ ಪಾವತಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹೌದು, ಗದಗ(Gadag) ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಏಪ್ರಿಲ್ 28 ರಂದು ನಡೆದಿದ್ದ ಬಿಜೆಪಿ(BJP) ಬಹಿರಂಗ ಸಮಾವೇಶದಲ್ಲಿ ಕೂಲ್‌ ಡ್ರಿಂಕ್ಸ್‌ ವ್ಯಾಪಾರ ಮಾಡಲು ಬಂದಿದ್ದ ಸಮೀರ್ ಸಾಬ್, ನೆರದಿದ್ದ ಜನರ ವರ್ತನೆಯಿಂದ ನಷ್ಟ ಅನುಭವಿಸಿದ್ದ ಸಮೀರ್ ಗೆ ಆಗಿರೋ ನಷ್ಟವನ್ನ ಸಂಸದ ಪ್ರತಾಪ್ ಸಿಂಹ ಭರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಮೀತರ್‌ ಒಟ್ಟಾರೆ 30 ಸಾವಿರ ನಷ್ಟವಾಗಿರಬಹುದು ಎಂದು ಹೇಳಿದ್ದರು. ಆದರೆ, ಪ್ರತಾಪ್‌ ಸಿಂಹ್‌ 35 ಸಾವಿರ ಹಣ ಪಾವತಿಸಿದ್ದಾರೆ.

ಮಧ್ಯರಾತ್ರಿ 12ರ ಸುಮಾರಿಗೆ ಸಮೀರ್‌ಗೆ ಫೋನ್ ಮಾಡಿದ್ದ ಪ್ರತಾಪ್ ಸಿಂಹ ನಷ್ಟವಾಗಿರೋ ಬಗ್ಗೆ ಮಾಹಿತಿ ಕೇಳಿದ್ದರು. ನಂತರ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಬಳಿಕ ತಾವು ಪಾವತಿಸಿದ ಹಣದ ಸ್ಕ್ರೀನ್ ಶಾಟ್ ತೆಗೆದು, ಆ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಅದಲ್ಲದೆ, ಸಮೀರ್ ಸಾಬ್ ಗೆ ಹಣ ಕಳುಹಿಸಿದ್ದೇನೆ..ಸಾರಿ ಬ್ರದರ್‌, ಧನ್ಯವಾದ ಅಂತಾ ಬರೆದುಕೊಂಡಿದ್ದಾರೆ. ಸಂಸದ ಪ್ರತಾಪ್‌ ಸಿಂಹ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಅಂದಹಾಗೆ ಲಕ್ಷ್ಮೇಶ್ವರದಲ್ಲಿ ಅಮಿತ್ ಶಾ ಸಮಾವೇಶಕ್ಕೆ ಬದಿದ್ದ ಜನರಿಗೆ ಕಾರ್ಯಕ್ರಮದ ಆಯೋಜಕರು ನೀರಿನ ವ್ಯವಸ್ಥೆ ಮಾಡಿರಲಿಲ್ಲ. ಇದರಿಂದ ಬಿಸಿಲಿನ ಬೇಗೆಗೆ ಜನ ಬೇಸತ್ತು ಹೋಗಿದ್ದರು. ಜನರಿಗೆ ತುಂಬ ಬಾಯಾರಿಕೆ ಆಗಿದ್ದುಮ ನೀರಿಗಾಗಿ ಪರದಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಸಮೀರ್ ಹಸನ್​ ಸಾವ್ ಎನ್ನುವಾತ ಕೂಲ್ ಡ್ರಿಂಕ್ಸ್​ ಇರುವ ವಾಹನ ಸಮಾವೇಶದ ಬಳಿ ವ್ಯಾಪಾರಕ್ಕೆ ಬಂದಿದ್ದ. ಬಿಜೆಪಿಯವರೇ ಕೂಲ್​ ಡ್ರಿಂಕ್ಸ್ ತರಿಸಿದ್ದಾರೆ ಎಂದು ಜನ ಸಮೀರ್​ ವಾಹನಕ್ಕೆ ಮುಗಿಬಿದ್ದು, ಕೂಲ್​ ಡ್ರಿಂಕ್ಸ್, ಜ್ಯೂಸ್, ನೀರಿನ ಬಾಟಲ್​ ತಗೆದುಕೊಂಡು ಹೋಗಿದ್ದರು. ಇದರಿಂದ ಸುಮಾರ್ 35 ಸಾವಿರ ರೂಪಾಯಿ ನಷ್ಟವಾಯ್ತು ಎಂದು ಸಮೀರ್​ ಕಣ್ಣೀರಿಟ್ಟಿದ್ದ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಫುಲ್​ ವೈರಲ್ ಆಗಿತ್ತು.

ವಿಷಯ ತಿಳಿದು ಕಾಂಗ್ರೆಸ್ ಮುಖಂಡ ಸರ್ಫರಾಜ್ ಸೂರಣಗಿ ಮತ್ತು ತಂಡ, ಸಮೀರ್ ಮನೆಗೆ ತೆರಳಿ 20 ಸಾವಿರ ರೂಪಾಯಿ ಕೊಟ್ಟಿದ್ದರು. ಈಗ ಪ್ರತಾಪ್ ಸಿಂಹ ಅವರೂ 35 ಸಾವಿರ ರೂಪಾಯಿ ಹಣ ಕೊಟ್ಟಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಮೀರ್ “ಘಟನೆಯಲ್ಲಿ 30-35 ಸಾವಿರ ರೂಪಾಯಿ ಮೌಲ್ಯದ ನೀರಿನ ಬಾಟಲ್ ಗಳು, ಕೂಲ್‌ ಡ್ರಿಂಕ್ಸ್‌ ಬಾಟಲ್ ಲಾಸ್ ಆಗಿವೆ. ನನಗೆ ಅಷ್ಟೆ ಹಣ ಸಾಕು, ಕಾಂಗ್ರೆಸ್ ಮುಖಂಡರನ್ನ ಸಂಪರ್ಕಿಸಿ ಹೆಚ್ಚುವರಿಯಾಗಿ ಬಂದ ಹಣ ಹಿಂತಿರುಗಿಸುತ್ತೇನೆ.. ಇಲ್ಲವೇ ಆಸ್ಪತ್ರೆ, ವೃದ್ದಾಶ್ರಮಕ್ಕೆ ದಾನ ಮಾಡಲಿದ್ದೇನೆ” ಎಂದು ಹೇಳಿದ್ದಾರೆ.

 

ಇದನ್ನು ಓದಿ: SBI Recruitment 2023: ಎಸ್‌ಬಿಐ ನಲ್ಲಿ ಭರ್ಜರಿ ಉದ್ಯೋಗವಕಾಶ! 217 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ, ಮಿಸ್‌ ಮಾಡಬೇಡಿ, ಈ ಕೂಡಲೇ ಅರ್ಜಿ ಸಲ್ಲಿಸಿ 

Leave A Reply

Your email address will not be published.