Mobile apps Ban: ಮತ್ತೆ 14 ಆಪ್ ಗಳನ್ನು ನಿಷೇಧಿಸಿದ ಕೇಂದ್ರ ಸರ್ಕಾರ : ಭಯೋತ್ಪಾದಕರ Apps ನಿಮ್ಮ ಮೊಬೈಲಲ್ಲೂ ಇದ್ಯಾ ಗಮನಿಸಿ !

India blocks Mobile apps: ನವದೆಹಲಿ: ಕೇಂದ್ರ ಸರ್ಕಾರವು ಮತ್ತೆ 14 ಮೊಬೈಲ್ ಆಪ್ (India blocks Mobile apps)  ಗಳನ್ನು (Messenger application) ನಿರ್ಬಂಧಿಸಿದೆ. ಈ ಅಪ್ಲಿಕೇಶನ್ ಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದ್ದು, ಪಾಕಿಸ್ತಾನದಿಂದ ಸಂದೇಶವನ್ನು ಹರಡಲು ಮತ್ತು ಸಂದೇಶಗಳನ್ನು ಸ್ವೀಕರಿಸಲು ಭಯೋತ್ಪಾದಕರು ಈ ಮೊಬೈಲ್ ಮೆಸೆಂಜರ್ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರು ಎಂದು ವರದಿಯಾಗಿದೆ. ರಕ್ಷಣಾ ಪಡೆಗಳು, ಭದ್ರತೆ, ಗುಪ್ತಚರ ಮತ್ತು ತನಿಖಾ ಸಂಸ್ಥೆಗಳ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

 

ಜಮ್ಮು ಕಾಶ್ಮೀರದಲ್ಲಿನ ಭಯೋತ್ಪಾದಕರು ತಮ್ಮ ಬೆಂಬಲಿಗರು ಮತ್ತು ಅವರ ಇಲ್ಲಿನ ತಂಡದ ಕೆಲಸಗಾರರೊಂದಿಗೆ (OGW) ಸಂವಹನ ನಡೆಸಲು ಈ ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ ಎಂದು ಹಲವಾರು ಏಜೆನ್ಸಿಗಳು ತನಿಖೆ ನಡೆಸಿ ಹೇಳಿವೆ. ಈ ರಿಪೋರ್ಟ್ ಆಧಾರದ ಮೇಲೆ ಕೇಂದ್ರವು ಈ ನಿರ್ಧಾರ ಕೈಗೊಂಡಿದೆ. ಇದಲ್ಲದೆ, ಈ ಅಪ್ಲಿಕೇಶನ್‌ಗಳು ಭಾರತದಲ್ಲಿ ಪ್ರತಿನಿಧಿಗಳನ್ನು ಹೊಂದಿಲ್ಲ. ಈಗ ಈ ಅಪ್ಲಿಕೇಶನ್‌ಗಳನ್ನು ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ಸೆಕ್ಷನ್ 69A ಅಡಿಯಲ್ಲಿ ನಿರ್ಬಂಧಿಸಲಾಗಿದೆ.

ಈ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನವು ಬಳಕೆದಾರರಿಗೆ ಅನಾಮಧೇಯತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ ಎಂಬ ಶಾಕಿಂಗ್ ವರದಿಯೊಂದು ಹೇಳಿದೆ. ಈ ಆಪ್ ಗಳು ದೋಸ್ತ ಚಟುವಟಿಕೆಗಳನ್ನು ನಡೆಸಲು ಪೂರಕವಾಗಿದೆ. ಅವುಗಳ ಈ ವೈಶಿಷ್ಟ್ಯಗಳು ಅದನ್ನು ಬಳಕೆ ಮಾಡುವವರ ಬಗ್ಗೆ ಮಾಹಿತಿ ಕಲೆ ಹಾಕಲು ತುಂಬಾ ಕಠಿಣವಾಗಿದೆ. ವಿವಿಧ ಏಜೆನ್ಸಿಗಳ ಮೂಲಕ, ಗೃಹ ವ್ಯವಹಾರಗಳ ಸಚಿವಾಲಯವು ಈ ಮೊಬೈಲ್ ಅಪ್ಲಿಕೇಶನ್‌ಗಳು ಭಯೋತ್ಪಾದಕರು ಮತ್ತು ಅವರ ಅಂಗಸಂಸ್ಥೆಗಳಿಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುವುದನ್ನು ಕಂಡುಹಿಡಿದಿವೆ. ಅದರಂತೆ ಈಗ ಈ 15 ಆಪ್ ಗಳಿಗೆ ಕಡಿವಾಣ ಬಿದ್ದಿದೆ.

ಭದ್ರತಾ ಕಾಳಜಿಯ ಕಾರಣದಿಂದ ದೇಶವು ಈಗಾಗಲೇ ನೂರಾರು ಅಪ್ಲಿಕೇಶನ್‌ಗಳ ವಿರುದ್ಧ ಇದೇ ರೀತಿಯ ಕ್ರಮಗಳನ್ನು ಹಿಂದೆ ತೆಗೆದುಕೊಂಡಿರುವುದರಿಂದ ಮೊಬೈಲ್ ಅಪ್ಲಿಕೇಶನ್‌ಗಳ ಮೇಲೆ ಕೇಂದ್ರ ಸರ್ಕಾರದ ಈ ಕಠಿಣ ಕ್ರಮ ಹೊಸದಲ್ಲ. ಕಳೆದ ಕೆಲವು ವರ್ಷಗಳಲ್ಲಿ, ಸರ್ಕಾರವು “ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ” ಎಂದು ಉಲ್ಲೇಖಿಸಿ ಸುಮಾರು 250 ಚೀನೀ ಅಪ್ಲಿಕೇಶನ್‌ಗಳ ಮೇಲೆ ನಿಷೇಧ ಹೇರಿದೆ. ಕಳೆದ 2020ರ ನಂತರ ಬರೋಬ್ಬರಿ 200 ಯಾಪ್ ಗಳನ್ನು ಭಾರತ ನಿಷೇಧಿಸಿದೆ.

ಜನಪ್ರಿಯ ಅಪ್ಲಿಕೇಶನ್‌ಗಳಾದ TikTok, Shareit, WeChat, Helo, Likee, UC News, Bigo Live, UC ಬ್ರೌಸರ್, Xender, Camscanner, PUBG ಮೊಬೈಲ್ ಮತ್ತು ಗರೆನಾ ಫ್ರೀ ಫೈರ್‌ನಂತಹ ಜನಪ್ರಿಯ ಮೊಬೈಲ್ ಆಟಗಳನ್ನು ಈಗಾಗಲೇ ನಿಷೇಧಿಸಿದೆ. ಈಗ ನಿಷೇಧಿಸಿದ ಆಪ್ಗಳನ್ನು ಪಟ್ಟಿ ಮಾಡಿಲ್ಲವಾದರೂ ಈ ಕೆಳಗಿನ ಆಪ್ಗಳು ನಿಷೇಧವಾಗಿದೆ ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ.

ಆದಾಗ್ಯೂ, Crypviser, Enigma, Safeswiss, Wickrme, Mediafire, Briar, BChat, Nandbox, Conion, IMO, Element, Second line, Zangi, Threema ಸೇರಿದಂತೆ ಇತರ ಅಪ್ಲಿಕೇಶನ್‌ಗಳನ್ನು ಕೇಂದ್ರವು ನಿರ್ಬಂಧಿಸಿದೆ.

ಇದನ್ನೂ ಓದಿ:Congress Guarantee: 6ನೇ ಗ್ಯಾರಂಟಿ ಘೋಷಣೆ: ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಬಂಪರ್ ಕೊಡುಗೆ!

Leave A Reply

Your email address will not be published.