IMD Predicts Heavy Rain in Karnataka: ಕರ್ನಾಟಕದ ಈ ಭಾಗದಲ್ಲಿ ಸುರಿಯಲಿದೆ ಭಾರೀ ಮಳೆ! ಹವಾಮಾನ ಇಲಾಖೆ ನೀಡಿದೆ ಬಿಗ್‌ ಬಿಗ್‌ ನ್ಯೂಸ್‌!!

Heavy Rain in Karnataka: ಎಷ್ಟೋ ದಿನಗಳಿಂದ ಮರೆಯಾಗಿದ್ದ ಮಳೆರಾಯ ಮತ್ತೆ ಭುವಿಯನ್ನು ತಂಪಾಗಿಸಿದ್ದಾನೆ. ಇಳೆಯನ್ನು ನೀರಿನಿಂದ ಹೊಯ್ದು ಎಲ್ಲೆಡೆ ಹಚ್ಚಹಸಿರಿನಿಂದ ಮಾಡಲು ವರುಣ ರಾಯ ಕೃಪೆ ತೋರಿದ್ದಾನೆ. ಬಿರು ಬೇಸಿಗೆಯ ಬಿಸಿಲಿನ ಬೇಗೆಗೆ ಬೆವತು ಹೋಗಿದ್ದ ಜನರಿಗೆ ಮಳೆಯ ಹನಿ ಕೂಲ್‌ ಕೂಲ್‌ ಅನುಭವ ನೀಡಿದೆ. ಆದರೆ ಈಗ ಹವಾಮಾನ ಇಲಾಖೆಯೊಂದು ಭಾರೀ ಮುನ್ಸೂಚನೆ ನೀಡಿದ್ದು, ಇದರ ಪ್ರಕಾರ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ (Heavy Rain in Karnataka) ಸಾಧ್ಯತೆ ಇದೆ ಎಂದು ಹವಮಾನಾ ಇಲಾಖೆಯಿಂದ ವರದಿಯಾಗಿದೆ.

 

ಚಿಕ್ಕಮಗಳೂರು, ಕೊಡಗು, ಮೈಸೂರು, ಹಾಸನ. ಚಿತ್ರದುರ್ಗ, ಬಳ್ಳಾರಿ, ಚಾಮರಾಜನಗರ, ರಾಯಚೂರು, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮುಂದಿನ ಎರಡು ಗಂಟೆಗಳಲ್ಲಿ ಭಾರೀ ಮಳೆ ಸುರಿಯುವ ಸಂಭವವಿದೆ. ಈ ಮಳೆಯಿಂದ ವಿದ್ಯುತ್‌ ತೊಂದರೆ ಉಂಟು ಮಾಡಬಹುದು. ಏಕೆಂದರೆ ಭಾರೀ ಗಾಳಿಯೊಂದಿಗೆ ಮಳೆ ಉಂಟಾಗುವುದರಿಂದ ವಿದ್ಯುತ್‌ ವ್ಯತ್ಯಯ ಕೂಡ ಆಗಲಿದೆ ಎಂದು ಹೇಳಲಾಗಿದೆ.

ರಾಜ್ಯ ರಾಜಧಾನಿಯಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಸಂಜೆ ಅಥವಾ ರಾತ್ರಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಹಾಗೆನೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ:The Kapil Sharma Show: ಹಾಸ್ಯನಟ ಕೃಷ್ಣ ಅಭಿಷೇಕ್ ‘ಕಪಿಲ್‌ ಶರ್ಮಾ ಶೋʼ ಬಿಡಲು ಕಾರಣ ಯಾರು? ದಾರಿ ತಪ್ಪಲು ಇವರೇ ಕಾರಣ ಎಂದ ನಟ!

 

Leave A Reply

Your email address will not be published.