Congress candidate Jagadish Shettar: ಯಡಿಯೂರಪ್ಪನವರಿಗೆ ಶಾಕ್ ಕೊಟ್ಟ ಲಿಂಗಾಯತ ಮುಖಂಡರು! ಜಗದೀಶ್ ಶೆಟ್ಟರ್ ಬೆಂಬಲಿಸಿ, ಗೆಲ್ಲಿಸೋದಾಗಿ ಸಭೆಯಲ್ಲಿ ನಾಯಕರ ಶಪಥ!
Congress candidate Jagadish Shettar: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರೋ ಹುಬ್ಬಳ್ಳಿ-ಧಾರವಾಡ(Hubballi Dharwad) ಸೆಂಟ್ರಲ್ ನಲ್ಲಿ ವೀರಶೈವ ಲಿಂಗಾಯತ ನಾಯಕರೆಲ್ಲರೂ ಸೇರಿ ಈ ಸಲದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರೋ ಮಾಜಿ ಸಿಎಂ ಜಗದೀಶ್(Jagadish Shetter) ಶೆಟ್ಟರ್ ಅವರಿಗೆ ಬೆಂಬಲ ನೀಡೋದಾಗಿ ತಿಳಿಸಿದ್ದು, ಈ ಮೂಲಕ ಬಿಜೆಪಿ(BJP) ವರಿಷ್ಠ, ಲಿಂಗಾಯತರ ಮಾಸ್ ಲೀಡರ್ ಯಡಿಯೂರಪ್ಪನವರಿಗೆ ಶಾಕ್ ನೀಡಿದ್ದಾರೆ.
ಹೌದು, ಇದೀಗ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಚುನಾವಣೆ ಕಾವು ಮತ್ತಷ್ಟು ರಂಗೇರಿದೆ. ಕಾಂಗ್ರೆಸ್ (Congress) ಸೇರ್ಪಡೆಯಾಗಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಸಿಎಂ ಜಗದೀಶ ಶೆಟ್ಟರ್(Jagadish shettar) ಅವರನ್ನು ಸೋಲಿಸಲು ಬಿಜೆಪಿ ಪಣ ತೊಟ್ಟಿದೆ. ಇದರಿಂದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ(BJP) ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಗೆಲುವಿಗೆ ರಾಜ್ಯ ಹಾಗೂ ಕೇಂದ್ರ ನಾಯಕರು ಇನ್ನಿಲ್ಲದ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಇದಕ್ಕಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಲಿಂಗಾಯತ ಅಸ್ತ್ರ ಪ್ರಯೋಗಿಸಿದ್ದರು. ಆದರೀಗ ಈ ಬೆನ್ನಲ್ಲೇ ಶೆಟ್ಟರ್ ಅವರು ಯಡಿಯೂರಪ್ಪನವರಿಗೆ ಶಾಕ್ ನೀಡಿದ್ದಾರೆ.
ಇತ್ತೀಚೆಗೆ ಯಡಿಯೂರಪ್ಪರು ಹುಬ್ಬಳ್ಳಿ- ಧಾರವಾಡ ಕ್ಷೇತ್ರದಲ್ಲಿ ಲಿಂಗಾಯತ ನಾಯಕರೆಲ್ಲರನ್ನೂ ಸೇರಿಸಿ ಕ್ಷೇತ್ರದಲ್ಲಿ ಬಿಜೆಪಿ(BJP) ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಗೆಲ್ಲಿಸಲು ಎಲ್ಲರ ಸಹಕಾರ ಅತ್ಯಗತ್ಯ. ಇದಕ್ಕಾಗಿ ನೀವೆಲ್ಲರೂ ಟೆಂಗಿನಕಾಯಿ ಅವರನ್ನು ಬೆಂಬಲಿಸಬೇಕು.ಯಾವುದೇ ಸಮೀಕ್ಷೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಯಾವ ಕಾರಣಕ್ಕೂ ಶೆಟ್ಟರ್ ಇಲ್ಲಿಂದ ಗೆಲ್ಲಲು ಸಾಧ್ಯವಿಲ್ಲ. ನಾಳೆ ರಾಲಿ ಏರ್ಪಡಿಸಲಾಗಿದೆ. ಹತ್ತಾರು ಸಾವಿರ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಿ. ರಾಜಕೀಯ ದೊಂಬರಾಟ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು. ಇವತ್ತಿನಿಂದ ಜಗದೀಶ್ ಶೆಟ್ಟರ್ ಹೆಸರನ್ನು ಹೇಳಲ್ಲ.
ನಂಬಿಕೆ ದ್ರೋಹಿ, ವಿಶ್ವಾಸ ದ್ರೋಹಿ ಪಕ್ಷಾಂತರಿಗಳಿಗೆ ಕ್ಷಮಿಸುವುದಿಲ್ಲ ಎನ್ನುವ ಸುದ್ದಿ ಎಲ್ಲೆಡೆ ಹೋಗಬೇಕು. ಪ್ರಹ್ಲಾದ್ ಜೋಶಿ ಮತ್ತು ಇತರೆ ನಾಯಕರು ಕೆಲಸ ಬದಿಗೊತ್ತಿ ಎಲ್ಲ ಮುಖಂಡರು ಅಭ್ಯರ್ಥಿ ಗೆಲುವಿಗೆ ಶ್ರಮಿಸಿ ಎಂದು ಮನವಿ ಮಾಡಿದ್ದರು. ಇದಕ್ಕೆ ಎಲ್ಲಾ ನಾಯಕರು ಒಪ್ಪಿ ಬಿಜೆಪಿ ಗೆಲ್ಲಿಸುವುದಾಗಿ ಪಣಟೊಟ್ಟಿದ್ದರು. ಆದರೆ ಯಡಿಯೂರಪ್ಪ ಲಿಂಗಾಯತ ಮುಖಂಡರ ಸಭೆ ನಡೆಸಿದ ಬೆನ್ನಲ್ಲೇ ಇದೀಗ ಶೆಟ್ಟರ್ ಕೂಡ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಸಿದ್ದು, ಶೆಟ್ಟರ್ ಗೆಲುವಿಗೆ ಶ್ರಮಿಸುವುದಾಗಿ ಸಭೆಯಲ್ಲಿದ್ದ ಎಲ್ಲರೂ ಶಪಥ ಕೂಡ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಲ್ಲದೇ ಜಗದೀಶ್ ಶೆಟ್ಟರ್( Congress candidates Jagadish Shettar) ಅವರು ಬಿಜೆಪಿ ನಾಯಕರಿಗೆ ಚೆಕ್ ಮೆಟ್ ಕೊಟ್ಟಿದ್ದಾರೆ.
ಅಂದಹಾಗೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಸಿದ ಜಗದೀಶ್ ಶೆಟ್ಟರ್, ತಮಗೆ ಬಿಜೆಪಿಯಲ್ಲಿ ಆದ ಅಪಮಾನ ಹಾಗೂ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದರಿಂದ ಆ ಪಕ್ಷ ತೊರೆದಿದ್ದೇನೆ. ಇದೀಗ ಕಾಂಗ್ರೆಸ್ ಸೇರಿದ್ದೇನೆ. ಈ ಹಿಂದೆಯೂ ನೀವು ನನಗೆ ಬೆಂಬಲಿಸಿದ್ದೀರಿ. ಈಗಲೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಬಳಿಕ ಸಭೆಯಲ್ಲಿದ್ದವರೆಲ್ಲರೂ ಕೈ ಎತ್ತುವ ಮೂಲಕ ಜಗದೀಶ್ ಶೆಟ್ಟರ್‌ಗೆ ಬೆಂಬಲ ಸೂಚಿಸಿದರು.
ಈ ವೇಳೆ ಕೆಲವು ವೀರಶೈವ ಲಿಂಗಾಯತ ನಾಯಕರು ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಎಲ್ಲರ ಭಾಷಣದ ಬಳಿಕ ಯಾರೂ ನಮ್ಮ ಜೊತೆ ಇರ್ತಾರೆ ಅವರನ್ನು ಬೆಂಬಲಿಸೋಣ. ನಮ್ಮ ನೋವಿಗೆ ಸ್ಪಂದಿಸುವವರಿಗೆ ಮತ ಹಾಕೋಣ ಎಂದು ಸಭೆಯಲ್ಲಿದ್ದ ಸುಮಾರು 200 ಕ್ಕೂ ಹೆಚ್ಚು ವೀರಶೈವ ಲಿಂಗಾಯತ ಮುಖಂಡರು ಕೈ ಎತ್ತಿ ಗೆಲ್ಲಿಸುವ ಶಪಥ ಮಾಡಿದರು. ಇದರೊಂದಿಗೆ ಜಗದೀಶ್ ಶೆಟ್ಟರ್ ಅವರಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಇದನ್ನೂ ಓದಿ: ಸ್ತ್ರೀ ಕಾಂಡೋಮ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಫುಲ್ ಡೀಟೇಲ್ಸ್