LPG cylinder: LPG ಸಿಲಿಂಡರ್ ಬೆಲೆಗಳಲ್ಲಿ ಭಾರೀ ಕಡಿತ: 171.5 ರೂಪಾಯಿ ಇಳಿಸಿದ ಕೇಂದ್ರ, ಇವತ್ತಿನಿಂದಲೇ ಜಾರಿ !
LPG cylinder: ಕೇಂದ್ರವು ಎಲ್ಪಿಜಿ ಸಿಲಿಂಡರ್(LPG cylinder) ಗ್ರಾಹಕರಿಗೆ ಭರ್ಜರಿ ಸುದ್ದಿ ನೀಡಿದ್ದು, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 171.50 ರೂಪಾಯಿಗಳಷ್ಟು ಇಳಿಕೆ ಮಾಡಿದೆ. ಈ ಹೊಸ ದರ ಇವತ್ತಿನಿಂದಲೆ ಜಾರಿಗೆ ಬರಲಿದೆ. ಇನ್ಮುಂದೆ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1856.50 ರೂಪಾಯಿ ಇರಲಿದೆ.
ಇಂದು, ಮೇ. 1 ರಿಂದ 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 171.50 ರೂ.ಗೆ ಇಳಿಸಲಾಗಿದೆ. ಈ ಸಿಲಿಂಡರ್ ಬೆಲೆ ಕಡಿತ ಕೇವಲ ವಾಣಿಜ್ಯ ಅನಿಲ ಸಿಲಿಂಡರ್ ಬಳಕೆದಾರರಿಗೆ ಮಾತ್ರ. ಉಳಿದ ಗೃಹಬಳಕೆಯ ಎಲ್ಪಿಜಿ ಅನಿಲ ಗ್ರಾಹಕರಿಗೆ ಬೆಲೆಯಲ್ಲಿ ಯಾವುದೇ ಪರಿಷ್ಕರಣೆಯಾಗಿಲ್ಲ. ಅಲ್ಲದೆ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.
ಎಲ್ಪಿಜಿ ಬೆಲೆಗಳು ನಿರ್ಧಾರ ಆಗುವುದು ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಆಧಾರದ ಮೇಲೆ. ಬೆಲೆ ಹೆಚ್ಚಾದಾಗ ಗ್ಯಾಸ್ ಬೆಲೆಯೂ ಹೆಚ್ಚಾಗುತ್ತದೆ ಅಥವಾ ಹೆಚ್ಚಾಗಬೇಕು. ಆದರೆ ಗ್ಯಾಸ್ ಸಿಲಿಂಡರ್ ಬೆಲೆಗಳು ಸರ್ಕಾರದ ನೀತಿ ನಿರ್ದೇಶನದಂತೆ ನಡೆಯುತ್ತಿದ್ದು, ಬಡ ವರ್ಗಗಳಿಗೆ, ಗೃಹಬಳಕೆಯ ಸರ್ಕಾರವು ಈ ಬೆಲೆಗಳಲ್ಲಿ ಸಬ್ಸಿಡಿ ನೀಡಿದೆ. ಇಂದು ನವದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗಳ ಬೆಲೆ 1,103 ರೂ ಇದ್ದು ಇವುಗಳನ್ನು ಭಾರತ ಸರ್ಕಾರವು ಪ್ರತಿ ತಿಂಗಳು ಪರಿಷ್ಕರಿಸುತ್ತಾ ಇರುತ್ತದೆ. ಅದರಂತೆ ಈಗ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಪರಿಷ್ಕರಣೆ ಆಗಿದೆ.
ಈ ಬೆಲೆ ಪರಿಷ್ಕರಣೆ ಒಟ್ಟು ನಾಲ್ಕು ಕಡೆ ನಡೆದಿದೆ. ದೇಶದ ನಾಲ್ಕು ಮಹಾನಗರಗಳಲ್ಲಿ ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ದೇಶದ ರಾಜಧಾನಿ ದೆಹಲಿ, ಕೋಲ್ಕತಾ ಮತ್ತು ಮುಂಬೈನಲ್ಲಿ ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಯನ್ನು ಇಳಿಸಲಾಗಿದೆ.
ದೇಶದ ಹಲವು ನಗರಗಳ ವಾಣಿಜ್ಯ ಸಿಲಿಂಡರ್ ಬೆಲೆ ಈ ರೀತಿ ಇದೆ. ದೇಶದ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ 1856.50 ರೂಪಾಯಿ, ಚೆನ್ನೈ ನಲ್ಲಿ 2021.50 ರೂಪಾಯಿ, ಮುಂಬೈನಲ್ಲಿ 1808.50 ರೂಪಾಯಿ ಇದ್ದರೆ, ಕೋಲ್ಕತ್ತಾದಲ್ಲಿ 1960.50 ರೂಪಾಯಿ ಇದೆ. ಬೆಂಗಳೂರಿನಲ್ಲಿ ಸಿಲಿಂಡರ್. ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.
ಇದನ್ನೂ ಓದಿ: ಈ ರಾಶಿಯವರಿಗೆ ಹಠಾತ್ ಆರ್ಥಿಕ ಲಾಭ ಲಭಿಸುತ್ತದೆ!