Ukraine: ಕಾಳಿ ಮಾತೆಯ ವಿವಾದಾತ್ಮಕ ಫೋಟೋ ಪೋಸ್ಟ್ ಮಾಡಿದ ಉಕ್ರೇನ್! ಗರಂ ಆದ ಭಾರತೀಯರು!!!

Ukraine: ಹಿಂದೂಗಳಿಗೆ ಹಾಗೂ ಭಾರತೀಯರ ಭಾವನೆಗಳಿಗೆ ಧಕ್ಕೆಯಾಗವ ಹಾಗೆ ಉಕ್ರೇನ್(Ukraine) ವರ್ತಿಸಿದ್ದು, ಹಿಂದೂಗಳ ಆರಾಧ್ಯ ದೇವತೆ ಕಾಳಿ ಮಾತೆಯು ವಿಚಿತ್ರ ಭಂಗಿಯ ವಿವಾದಾತ್ಮಕ ಚಿತ್ರವೊಂದನ್ನು ರಚಿಸಿ ಪೋಸ್ಟ್ ಮಾಡಿದೆ. ಇದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

 

ಹೌದು, ಹಿಂದೂ ದೇವತೆ ಕಾಳಿ ಮಾತೆಯ ವಿವಾದಾತ್ಮಕ ಚಿತ್ರವನ್ನು ಉಕ್ರೇನ್ ರಕ್ಷಣಾ ಸಚಿವಾಲಯವು ಪೋಸ್ಟ್ ಮಾಡಿದ್ದು, ಇದೊಂದು ‘ಕಲಾಕೃತಿ’ ಅಷ್ಟೆ ಎಂದು ಉಕ್ರೇನ್ ತನ್ನನ್ನು ತಾನು ಸಮರ್ಥಿಸಿಕೊಂಡು ಉದ್ಧಟತನ ಮೆರೆದಿದೆ. ಸದ್ಯ ಉಕ್ರೇನ್ ರಕ್ಷಣಾ ಸಚಿವಾಲಯ ಪೋಸ್ಟ್ ಮಾಡಿರೋ ಈ ಫೋಟೋಗೆ ಕಟ್ಟುನಿಟ್ಟಿನ ಪ್ರತಿಕ್ರಿಯೆಗಳು ಬರುತ್ತಿದ್ದು, ಮಾತೆ ಕಾಳಿ ದೇವಿಯ ವಿನಾಶದ ಸಂಕೇತ ಎಂದು ಟ್ವೀಟ್‌ನಲ್ಲಿ ಬರೆಯಲಾಗಿದೆ.

ಅಂದಹಾಗೆ ಏಪ್ರಿಲ್ 30 ರಂದು ಉಕ್ರೇನ್‌ ರಕ್ಷಣಾ ಸಚಿವಾಲಯದ ಅಧಿಕೃತ ಟ್ವಿಟರ್ ಹ್ಯಾಂಡಲ್ ಟ್ವೀಟ್ ಮಾಡಿದ ಫೋಟೋವನ್ನು ‘ವರ್ಕ್ ಆಫ್ ಆರ್ಟ್’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಪೋಸ್ಟ್ ಮಾಡಿದ ಚಿತ್ರವು ಎರಡು ಚಿತ್ರಗಳ ಸಂಯೋಜನೆಯಾಗಿದೆ. ಬಾಂಬ್ ಸ್ಫೋಟದ ನಂತರ ಆಕಾಶದಲ್ಲಿ ಸ್ಫೋಟದ ಪ್ಲೂಮ್ ಅನ್ನು ಚಿತ್ರ ತೋರಿಸುತ್ತದೆ. ಆದರೆ, ಎರಡನೇ ಚಿತ್ರದಲ್ಲಿ ಸ್ಪೋಟ ಪ್ಲೂಮ್ ರೀತಿಯಲ್ಲೇ, ಕಾರ್ಟೂನ್ ಮಾದರಿ ಎನ್ನಲಾಗುವ ಕಾಳಿ ಮಾತೆಯ ವಿಕೃತ ಚಿತ್ರವನ್ನು ಇರಿಸಲಾಗಿದೆ.

ಈ ಫೋಟೋದಲ್ಲಿ ಮಾತೆ ಕಾಳಿಯನ್ನು ಹಾಲಿವುಡ್ ನಟಿ ಮರ್ಲಿನ್ ಮನ್ರೋ ರೀತಿ ತೋರಿಸಲಾಗಿದೆ. ಸ್ಫೋಟದ ಹೊಗೆಯಲ್ಲಿ ಮರ್ಲಿನ್ ಮನ್ರೋ ತರಹದ ಮುಖವುಳ್ಳ ಮಾಹಾ ಕಳಿಯ ಮುಖವು ಗೋಚರಿಸುತ್ತದೆ. ಇದರಲ್ಲಿ ನಾಲಿಗೆ ಹೊರಗಿದೆ ಮತ್ತು ಕುತ್ತಿಗೆಯಲ್ಲಿ ತಲೆಬುರುಡೆಯ ಮಾಲೆ ಇದೆ.

ಸದ್ಯ ಈ ಫೋಟೋ ಹಿಂದೂಗಳನ್ನು ಕೆರಳಿಸಿದೆ. ಆಗಾಗ ಏನಾದರೂ ತಲೆ ಹರಟೆ ಮಾಡುವ ಉಕ್ರೇನ್‌ಗೆ ಭಾರತದಿಂದ ಯಾವುದೇ ರೀತಿಯ ಬೆಂಬಲ ಸಿಗದಿರಲು ಇದೇ ಕಾರಣ ಎಂದು ಹೇಳುತ್ತಿದ್ದಾರೆ. ಭಾರತದ ಟ್ವಿಟರ್ ಬಳಕೆದಾರರು ಇದನ್ನು ಅವಹೇಳನಕಾರಿ ಮತ್ತು ‘ಹಿಂದೂಫೋಬಿಕ್’ ಎಂದು ಕರೆಯುತ್ತಿದ್ದಾರೆ. ಇದರೊಂದಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಉಪ್ಪಿನಂಗಡಿ : 7 ಅಂಗಡಿಗಳಿಂದ ಕಳ್ಳತನ

Leave A Reply

Your email address will not be published.