Rajasthan: ರಾತ್ರೋ ರಾತ್ರಿ ಕೋಟ್ಯಾಧಿಪತಿಯಾದ ಈ ದಿನಗೂಲಿ ನೌಕರ! ಅಂದಾಜಲ್ಲಿ ಹಾಕಿದ ಟೀಮಿಗೆ ಸಿಕ್ತು 2ಕೋಟಿ!

Rajasthan: ಅದೃಷ್ಟ ಎಂಬುದು ಯಾರಿಗೆ ಹೇಗೆ ಒಲಿಯುತ್ತದೆ ಎಂದು ಹೇಳಲಾಗದು. ಕೆಲವರು ರಾತ್ರಿ ಬೆಳಗಾಗೋದ್ರೊಳಗೆ ಶ್ರೀಮಂತರಾಗಿ ಮೆರೆದಿದ್ದನ್ನು, ಶ್ರೀಮಂತರಿದ್ದವರು ಎಲ್ಲಾ ಕಳಕೊಂಡು ಏನೂ ಇಲ್ಲದಾಗಿ ಬಡವರಾದದ್ದನ್ನು ನಾವು ನೋಡಿದ್ದೇವೆ, ಆ ಬಗ್ಗೆ ಕೇಳಿದ್ದೇವೆ. ಅಂತೆಯೇ ಇದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದೆಡೆ ದಿನಗೂಲಿ ನೌಕರನೊಬ್ಬ ಆನ್​ಲೈನ್​ ಗೇಮ್​​ನಲ್ಲಿ 2 ಕೋಟಿ ಗೆದ್ದು ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗದ್ದಾನೆ (Rajasthan).

ಕೆಲವೊಮ್ಮೆ ಈ ಲಾಟರಿ ಟಿಕೆಟ್ ಅಲ್ಲಿ ದಿನಬೆಳಗಾಗೋದ್ರೊಳಗೆ ಕೋಟಿ ಕೋಟಿ ಲಾಟರಿ ಹೊಡೆದು ಕೆಲವರು ಕೋಟ್ಯಾದಿಪತಿಗಳಾದವರನ್ನು ನಾವು ನೋಡಿದ್ದೆವು. ಆದರಿಲ್ಲಿ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ರೂಪವಾಸ್ ತೆಹಸಿಲ್‌ನ ಮಾದಾಪುರ ಗ್ರಾಮದ ದಿನಗೂಲಿ ನೌಕರ ಆನ್​ಲೈನ್​ ಗೇಮ್​​ನಲ್ಲಿ 2 ಕೋಟಿ ಗೆದ್ದು ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗದ್ದಾನೆ.

ಹೌದು, ಮಾದಾಪುರ(Madapura) ಗ್ರಾಮದ ನಿವಾಸಿ ಖೇಮ್ ಸಿಂಗ್ ಡ್ರೀಮ್​ 11 ಫ್ಯಾಂಟಸಿ ಗೇಮ್​ನಲ್ಲಿ 2 ಕೋಟಿ ಗೆಲ್ಲುವ ಮೂಲಕ ರಾತ್ರೋರಾತ್ರಿ ಮಿಲಿಯನೇರ್ ಆಗಿದ್ದಾರೆ. ಆದರೆ ವಿಚಿತ್ರವೆಂದರೆ ಖೇಮ್ ಸಿಂಗ್ ತನಗೆ ಕ್ರಿಕೆಟ್ ಮತ್ತು ಈ ಆಟದ ಬಗ್ಗೆ ಏನೇನು ತಿಳಿದಿಲ್ಲ, ಬೇರೆಯವರನ್ನು ಆಡುವುದನ್ನ ನೋಡಿ ಕುತೂಹಲಕ್ಕಾಗಿ ಈ ಆಟವನ್ನು ಆಡಲು ಶುರು ಮಾಡಿದೆ ಎಂದು ತಿಳಿಸಿದ್ದಾರೆ.

ಅಂದಹಾಗೆ ಕೋಟ್ಯಾಧೀಶನಾಗಿರುವ ಖೇಮ್ ಸಿಂಗ್(Khem Sing) ಕುಟುಂಬದ ಆರ್ಥಿಕ ಸ್ಥಿತಿ ಶೋಚನೀಯವಾಗಿತ್ತು. ಹೊಟ್ಟೆ ಪಾಡಿಗಾಗಿ ಹರಿಯಾಣದ ಗುರ್ಗಾಂವ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಹೀಗಿರುವಾಗ ಈ ಮಧ್ಯೆ, ತಮ್ಮ ಊರಿನ ಹಲವರು ಡ್ರೀಮ್​ 11 ಆಡುವುದನ್ನು ಅವರು ನೋಡುತ್ತಿದ್ದರು. ಇತರರು ದುಡ್ಡು ಕಟ್ಟಿ ಗೆಲಲೋದನ್ನು ಕಂಡ ಅವರು ಉತ್ಸುಕರಾಗಿ ಈ ಆಟವನ್ನು ಆಡಲು ಆರಂಭಿಸಿದರು.

ಈ ಕುರಿತು ಮಾತನಾಡಿದ ಖೇಮ್ ಸಿಂಗ್ “ಚೆನ್ನೈ ವರ್ಸಸ್ ಹೈದರಾಬಾದ್ ಪಂದ್ಯದ ವೇಳೆ 49 ರೂಪಾಯಿ ಹೂಡಿಕೆ ಮಾಡಿ 2 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದೇನೆ. ಇದು ನನ್ನ ಎರಡನೇ ಪ್ರಯತ್ನ. ಮೊದಲ ಸಲ ಸೋತಾಗ ನನ್ನ ಮನಸ್ಸಿಗೆ ನಿರಾಸೆಯಾಯಿತು. ನಾಲ್ಕೈದು ದಿನಗಳ ನಂತರ ಎರಡನೇ ಪ್ರಯತ್ನದಲ್ಲಿ ಚೆನ್ನೈ-ಹೈದರಾಬಾದ್ ನಡುವಿನ ಪಂದ್ಯದ ವೇಳೆ 49 ರೂಪಾಯಿ ಹಾಕಿ ಟೀಮ್ ಮಾಡಿದ್ದೆ. ಅದರಲ್ಲಿ ಎರಡು ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದೇನೆಂದು” ಸಂತೋಷ ವ್ಯಕ್ತಪಡಿಸಿದರು. ಅಲ್ಲದೆ ಸಧ್ಯಕ್ಕೆ ಬ್ಯಾಂಕ್ ಖಾತೆಗೆ 69 ಲಕ್ಷ ಬಂದಿದ್ದು, ಉಳಿದ ಮೊತ್ತವನ್ನು ವಿತ್​ ಡ್ರಾ ಮಾಡಿದ್ದು, ಅದು ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದರು.

ಇನ್ನು ಖೇಮ್ ಸಿಂಗ್ ಅವರ ಈ ಗೆಲುವುನ್ನು ಅವರ ಇಡಿ ಗ್ರಾಮವೇ ಸಂಭ್ರಮಿಸಿದೆ. ಇದೇ ವೇಳೆ ವಿಜೇತ ಯುವಕನಿಗೆ ಗ್ರಾಮಸ್ಥರು ಮಾಲೆ, ಪೇಟ ತೊಡಿಸಿ ಸನ್ಮಾನ ಮಾಡಿದ್ದಾರೆ.

ಇದನ್ನೂ ಓದಿ:ಹಲಸಿನ ಹಣ್ಣಿನ ಮಾರಾಟದಿಂದ ಇಷ್ಟೆಲ್ಲಾ ಲಾಭ ಇದ್ಯಾ? ವಾವ್​, ಸೂಪರ್​ ಅಲ್ವಾ!

Leave A Reply

Your email address will not be published.