ಬೆಳ್ತಂಗಡಿ : ಬೈಕ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಪತ್ತೆ ರೌಡಿಶೀಟರ್ ನನ್ನು ಹೆಡೆಮುರಿ ಕಟ್ಟಿದ ಪೊಲೀಸರು

Beltangadi : ಬೈಕ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ 14 ಪ್ರಕರಣಗಳ ರೌಡಿಶೀಟರ್ ನನ್ನು ಬೆಳ್ತಂಗಡಿ (Beltangadi) ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಹಂದೇವು ಮೂರು ಮಾರ್ಗದ ಬಳಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ಮತ್ತು ತಂಡ ಎ.30 ರಂದು ಬೆಳಗ್ಗೆ ಚುನಾವಣಾ ನೀತಿ ಸಂಹಿತೆ ಕರ್ತವ್ಯದಲ್ಲಿರುವಾಗ ನಯನಾಡು ಕಡೆಯಿಂದ ಗೋಳಿಯಂಗಡಿ ಕಡೆಗೆ ಅಪ್ಪಾಚ್ಚಿ ಬೈಕ್ ನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡಿದಾಗ ಬೈಕ್ ನಲ್ಲಿ ಸುಮಾರು 500 ಗ್ರಾಂ ಗಾಂಜಾ ಪ್ಯಾಕೆಟ್ ಪತ್ತೆ ಹಚ್ಚಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಿದಾಗ ಗಾಂಜಾವನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದಾಗಿ ತಪ್ಪೋಪ್ಪಿಕೊಂದ್ದು ಅದರಂತೆ ವೇಣೂರು ಠಾಣೆಯಲ್ಲಿ NDPS ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

 

ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿ ಕಡಬ ತಾಲೂಕಿನ ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಪೂವಣಿ ಗೌಡರ ಮಗನಾದ ಆರೋಪಿ ಪ್ರಸಾದ್ @ ಪಚ್ಚು (32) ಎಂಬಾತನಾಗಿದ್ದು ಈತನ ಮೇಲೆ ಒಟ್ಟು ವಿವಿಧ ಪೊಲೀಸ್ ಠಾಣೆಗಳಲ್ಲಿ 14 ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು. ಈತನ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಮಾಡಿದ್ದಾರೆ.500 ಗ್ರಾಂ ಗಾಂಜಾ ಮೌಲ್ಯ ಸುಮಾರು 17,000 ರೂಪಾಯಿ ಅಗಿದ್ದು.ಬೈಕ್ ಮೌಲ್ಯ 20,000 ರೂಪಾಯಿ ಅಗಿದ್ದು ಒಟ್ಟು ಮೌಲ್ಯ 37,000 ರೂಪಾಯಿ ಅಗಿದ್ದು. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ತನಿಖೆಯನ್ನು ವೇಣೂರು ಸಬ್ ಇನ್ಸ್ಪೆಕ್ಟರ್ ಶ್ರೀಶೈಲಾ ನಡೆಸಲಿದ್ದಾರೆ. ಆರೋಪಿಯನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಕರಣದ ಪತ್ತೆಗೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ಸಿಬ್ಬಂದಿಗಳಾದ ಇಬ್ರಾಹಿಂ , ವಿಜಯ ಕುಮಾರ್ ರೈ, ಚೌಡಪ್ಪ, ವೇಣೂರು ಪೊಲೀಸ್‌ ಠಾಣೆಯ ಸಿಬ್ಬಂದಿ ಅಭಿಜಿತ್ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ವಾಹನ ಚಾಲಕ ಚಿದಾನಂದ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: Shocking news : ಸಾಂಬಾರ್​ಗೆ​ ಉಪ್ಪು ಜಾಸ್ತಿಯಾಯ್ತೆಂದು ತನಗೆ ತಾನೇ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಯುವಕ!

Leave A Reply

Your email address will not be published.