Rishab Shetty: ಪಂಜುರ್ಲಿ ದೈವದ ಆಶೀರ್ವಾದ ಪಡೆದ ಸಂದರ್ಭ: ರಿಷಬ್ ಶೆಟ್ಟಿ ಥರವೇ ಕಾಣಿಸಿದ ದೈವ ನರ್ತಕ !

Rishab Shetty: ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ “ಕಾಂತಾರ”(Kantara) ಹೌದು, ಕಾಂತರ ಸಿನಿಮಾ ನಮ್ಮ ನಾಡಿನ, ನಮ್ಮ ಸಂಸ್ಕೃತಿಯ ಹೆಮ್ಮೆ. ಈ ಸಿನಿಮಾದ ಕೇಂದ್ರವೇ ಪಂಜುರ್ಲಿ ದೈವ. ಅಂದಹಾಗೆ ರಿಷಬ್ ಆಗಾಗ ತಮ್ಮ ತವರಿಗೆ ತೆರಳಿ ಈ ದೈವದ ಆಶೀರ್ವಾದವನ್ನು ಪಡೆಯುತ್ತಿರುತ್ತಾರೆ. ಅಂತೆಯೇ ಇತ್ತೀಚೆಗೆ ಕೂಡ ರಿಷಬ್ ಪಂಜುರ್ಲಿಯ ಕೋಲಕ್ಕೆ ತೆರಳಿದ್ದರು. ಆದರೆ ಈ ಬಾರಿ ಮಾತ್ರ ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವ ಆಶೀರ್ವಾದ ಮಾಡುತ್ತಿರೋ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ. ಯಾಕೆ ಗೊತ್ತಾ?

ಹೌದು, ದಕ್ಷಿಣ ಕನ್ನಡ(Dakshina kannada) ಜಿಲ್ಲೆಯ ಮುತ್ತೂರು(Mutturu) ನಟ್ಟಿಲ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದು. ಈ ವೇಳೆ ರಿಷಬ್​ ಪಂಜುರ್ಲಿ ದೈವದ ಆಶೀರ್ವಾದ ಪಡೆದಿದ್ದಾರೆ. ಈ ಆಶೀರ್ವಾದದ ವಿಡಿಯೋವೆ ಇದೀಗ ವೈರಲ್ ಆಗ್ತಿರೋದು. ಯಾಕೆಂದರೆ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಪಂಜುರ್ಲಿ ದೈವದ ವೇಷವನ್ನು ಹಾಕಿದ್ದರು. ಇದೀಗ ನಟ ರಿಷಬ್​​ ಶೆಟ್ಟಿಯುಂತೆ ಮುತ್ತೂರು ನಟ್ಟಿಲ ಪಂಜುರ್ಲಿ ದೈವದ ನೇಮೋತ್ಸವದಲ್ಲಿ ರಿಷಬ್ ಗೆ ಆಶೀರ್ವದಿಸಿದ ಪಂಜುರ್ಲಿ ದೈವವು ಸೇಮ್​​​ ರಿಷಬ್​​ ಶೆಟ್ಟಿಯಂತೆ ಕಾಣುತ್ತಿದ್ದಾರೆ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.

ಅಂದಹಾಗೆ ಕಾಂತಾರ ಸಿನಿಮಾ ಗ್ರ್ಯಾಂಡ್​​​ ಸಕ್ಸಸ್​ ಕಂಡ ನಂತರ ರಿಷಬ್, ಕುಟುಂಬ ಸಮೇತ ಬಂದು ದೈವಕ್ಕೆ ಹರಕೆ ಸಲ್ಲಿಸಿ ವಿಶೇಷ ಪೂಜೆ ಕೂಡ ಸಲ್ಲಿಸಿದ್ರು. ಇದೀಗ ಮತ್ತೆ ಬಂದು ಪಂಜುರ್ಲಿ ದೈವದ ಆಶೀರ್ವಾದವನ್ನ ರಿಷಬ್ ಪಡೆದುಕೊಂಡಿದ್ದಾರೆ. ಸದ್ಯ ನಟ ರಿಷಬ್​​​ ಶೆಟ್ಟಿ ಕಾಂತಾರ 2 ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ಬ್ಯುಸಿಯ ನಡುವೆ ನಟ ರಿಷಬ್​​ ಶೆಟ್ಟಿ ದೈವದ ಆಶೀರ್ವಾದ ಪಡೆಯಲು ಬಂದಿರುವುದು ವಿಶೇಷವಾಗಿತ್ತು.

ಇನ್ನು ಕಾಂತಾರ ಸಿನಿಮಾ ಹಿಟ್ ಬಳಿಕ ರಿಷಬ್ ಅವರ ಇಮೇಜ್ ಬದಲಾಗಿದೆ. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿದ್ದ `ಕಾಂತಾರ’ (Kantara Film) ಸಿನಿಮಾ ಸೂಪರ್ ಸಕ್ಸಸ್ ಕಂಡಿದ್ದು, ಭಾರತೀಯರು ಕನ್ನಡ ಇಂಡಸ್ಟ್ರಿಯನ್ನು ನೋಡೋದು ಕೂಡ ಬದಲಾಗಿದೆ. ಹೊಂಬಾಳೆ ನಿರ್ಮಾಣದ (Hombale Films) ಈ ಚಿತ್ರ ಆಸ್ಕರ್ ಅಂಗಳದವರೆಗೂ ತಲುಪಿತ್ತು ಅನ್ನೋದು ವಿಶೇಷ.

ಕಾಂತಾರ ಸಕ್ಸಸ್‌ಗೆ ದೈವ ಕೋಲದ ವೀಡಿಯೋಗೆ ಅಭಿಮಾನಿಗಳ ಕಾಮೆಂಟ್ ಸುರಿಮಳೆಯೇ ಹರಿದು ಬರುತ್ತಿದೆ. ಹಾಗೆಯೇ ಈ ವೇಳೆ ಆದಷ್ಟು ಬೇಗ `ಕಾಂತಾರ 2’ಗೆ ಬಗ್ಗೆ ಗುಡ್ ನ್ಯೂಸ್ ಕೊಡಿ ಎಂದು ಫ್ಯಾನ್ಸ್ ಬೇಡಿಕೆ ಇಟ್ಟಿದ್ದಾರೆ.

 

 

 

ಇದನ್ನು ಓದಿ: Child death: ಜೆಮ್ಸ್ ಸಿಹಿ ತಿಂಡಿಯ ಬಾಟಲಿ ಗಂಟಲಲ್ಲಿ ಸಿಲುಕಿ 3 ವರ್ಷದ ಮಗು ಮೃತ್ಯು ! 

Leave A Reply

Your email address will not be published.