Modi road show: ಬೆಂಗಳೂರಿಗೆ ಮೋದಿ ರೋಡ್‌ ಶೋ ಎಫೆಕ್ಟ್‌ : ಕಳಸ ಹಿಡಿದು ಬೈಕ್ ನಲ್ಲಿ ಕಲ್ಯಾಣ ಮಂಟಪಕ್ಕೆ ತೆರಳಿದ ವಧು

Modi road show: ವಿಧಾನ ಸಭೆ ಚುನಾವಣೆ ಹಿನ್ನೆಲೆ ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿ , ಕೇಂದ್ರ ಗೃಹ ಸಚಿವ ಅಮಿತ್‌ ಷಾ, ಯುಪಿ ಸಿಎಂ ಯೋಗಿ ಅದಿತ್ಯನಾಥ್‌ ಸೇರಿದಂತೆ ಬಿಜೆಪಿ ನಾಯಕರು ಭರ್ಜರಿ ರಣ ತಂತ್ರ ರೂಪಿಸುತ್ತಿದ್ದು ಈ ಬೆನ್ನಲ್ಲೇ ಸಂಚಾರ ಮಾರ್ಗದಲ್ಲಿ ಸಂಚರಿಸುವ ಜನರಿಗೆ ಭಾರೀ ತೊಂದರೆ ಎದುರಾಗಿದೆ.

 

ಇಂದು ವಿಶೇಷ ವಿಮಾನದ ಮೂಲಕ ಪ್ರಧಾನಿ ಮೋದಿ (Modi road show) ಬೆಂಗಳೂರಿಗೆ ಆಗಮಿಸುತ್ತಿದ್ದು, 5 ಕಿಲೋ ಮೀಟರ್‌ ಗಟ್ಟಲೇ ರೋಡ್‌ ಶೋ ನಡೆಸಲಿದ್ದಾರೆ. ಸಿಲಿಕಾನ್‌ ಸಿಟಿಗೆ ಪ್ರಧಾನಿ ಆಗಮನವೂ ಇಂದಿನ ಮದುವೆಗೂ ಎಫೆಕ್ಟ್‌ ತಟ್ಟಿದಂತಾಗಿದೆ.

ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಅದ್ದೂರಿ ಮದುವೆಯ ಕಲ್ಯಾಣ ಮಂಟಪಕ್ಕೆ ತೆರಳಲು ವಧುವಿನ ಕಡೆಯವರು ಪರದಾಟ ನಡೆಸಿದ್ದಾರೆ. ಕಾರಿನಲ್ಲಿ ಸಂಚಾರಕ್ಕೆ ಅನುಮತಿ ನೀಡಿದ ಹಿನ್ನೆಲೆ ವಧುವನ್ನು ಬೈಕ್ ನಲ್ಲಿ ಕೂರಿಸಿಕೊಂಡು ತೆರಳಿದ್ದಾರೆ

ವಧುವಿನ ಕಡೆಯವರು ಒಬ್ಬರು ಬೈಕ್ ಚಲಾಯಿಸುತ್ತಿದ್ದರೆ, ಜೊತೆಯಲ್ಲಿ ವಧು ಹಾಗೂ ವಧುವಿನ ಸಂಬಂಧಿಕರು ಕಳಸ ಹಿಡಿದು ಕೂತಿದ್ದಾರೆ ಮದುವೆಯ ಶಾಸ್ತ್ರಕ್ಕೂ ಪೊಲೀಸರು ಅಡ್ಡಿ ಪಡಿಸಿದ್ದು ಮದುವೆ ಎಫೆಕ್ಟ್‌ ತಟ್ಟಿದೆ. ಬೈಕ್ ನಲ್ಲಿ ತೆರಳುವುದಕ್ಕೂ ಪೊಲೀಸರು ಅನುಮತಿ ನೀಡಿಲ್ಲ ಹೀಗಾಗಿ ಮದುವೆ ಸಂಭ್ರಮದಲ್ಲಿದ್ದ ಜನರಿಗೆ ಭಾರೀ ತೊಂದರೆ ಉಂಟಾಗಿದೆ.

 

ಇದನ್ನು ಓದಿ: PM Narendra Modi: ರಾಜ್ಯದಲ್ಲಿ ಪ್ರಧಾನಿ ಮೋದಿ ಚುನಾವಣೆ ರಣತಂತ್ರ; ಕಾಂಗ್ರೆಸ್‌ ನಿಂದ ಸಮಾಜ ಒಡೆಯುವ ಕೆಸಲ; ಎಂದಿಗೂ ಕ್ಷಮಿಸಬೇಡಿ: ಪ್ರಧಾನಿ ಮೋದಿ ಮನವಿ 

Leave A Reply

Your email address will not be published.