Mumbai News: ಮುಂಬೈನಲ್ಲಿ ಬಹುಮಹಡಿ ಕಟ್ಟಡ ಕುಸಿತ! ಘೋರ ದುರಂತದಲ್ಲಿ 15 ರಿಂದ 20 ಜನ ಸಿಲುಕಿರೋ ಶಂಕೆ!!

Mumbai: ಮುಂಬೈನಲ್ಲಿ (Mumbai) ಘೋರ ದುರಂತ ಸಂಭವಿಸಿದ್ದು, ಶನಿವಾರ (ಇಂದು) ಬಹುಮಹಡಿಯ ಕಟ್ಟಡ ಕುಸಿದಿರುವ ಭೀಕರ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿಯ ವಾಲ್ಪಾಡಾ ಪ್ರದೇಶದಲ್ಲಿ ನಡೆದಿದೆ.

 

ಗ್ರೌಂಡ್ ಪ್ಲಸ್ 2 ಅಂತಸ್ತಿನ ಕಟ್ಟಡ ಎಂದು ಹೇಳಲಾಗುತ್ತಿದ್ದು, ಈ ಘೋರ ದುರಂತದ ಪರಿಣಾಮ ಕಟ್ಟಡದ ಅವಶೇಷಗಳ ಅಡಿಯಲ್ಲಿ 15 ರಿಂದ 20 ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ನಾಲ್ಕು ಕುಟುಂಬಗಳು ಕೆಲವು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವೀಕ್ಷಿಸಿದ ಜನರು ತಿಳಿಸಿದ್ದಾರೆ.

ಈ ಬಗ್ಗೆ ಸ್ಥಳೀಯರು ಘಟನೆ ನಡೆದ ಕೂಡಲೆ ಅಗ್ನಿಶಾಮಕ ಮತ್ತು ವಿಪತ್ತು ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸದ್ಯ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲಾಗುತ್ತಿದೆ.

 

ಇದನ್ನು ಓದಿ: UIDAI Jobs: ಆಧಾರ್‌ ಸಂಸ್ಥೆಯಲ್ಲಿ ಉದ್ಯೋಗ! ಉತ್ತಮ ಸಂಬಳ ಲಭ್ಯ, ಈ ಕೂಡಲೇ ಅರ್ಜಿ ಸಲ್ಲಿಸಿ!!! 

Leave A Reply

Your email address will not be published.