Uttar Pradesh: ಛೀ! ಹಾಡಹಗಲೇ ಶಿಕ್ಷಕನೋರ್ವನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ! ಬೆಚ್ಚಿ ಬೀಳಿಸುತ್ತೆ ಈ ವೀಡಿಯೋ!!!

Uttar Pradesh: ಅತ್ಯಾಚಾರ (Rape), ಲೈಂಗಿಕ ಕಿರುಕುಳದ ಪ್ರಕರಣ ಹಿಂದೆ ಮತ್ತು ಇಂದೂ ನಡೆಯುತ್ತಿದೆ. ಕಾಮುಕ ವ್ಯಾಘ್ರಗಳು ಅಮಾಯಕ ಹುಡುಗಿಯರನ್ನು (girl) ಬಲಿ ತೆಗೆದುಕೊಳ್ಳುತ್ತಿವೆ. ತಮ್ಮ ಲಾಭಕ್ಕಾಗಿ ಯುವತಿಯರ ಜೀವನ ನಾಶ ಮಾಡುತ್ತಿದ್ದಾರೆ. ಇಂತಹ ಪ್ರಕರಣಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಸಮಾಜದಲ್ಲಿ ಈ ರೀತಿಯ ಘಟನೆ ಸಾಮಾನ್ಯ ಎಂಬಂತಿದೆ. ಎಷ್ಟೆಂದರೆ, ಯಾವುದೇ ಭಯವಿಲ್ಲದೆ, ಹಾಡಹಗಲೇ ಎಲ್ಲರ ಮುಂದೆ ಲೈಂಗಿಕ ಕಿರುಕುಳ ನೀಡುವಷ್ಟು.

 

ಹೌದು, ಇಲ್ಲೊಬ್ಬ (Uttar Pradesh) ಶಿಕ್ಷಕ (teacher) ತನ್ನ ಕಾಮ ತೃಷೆ ತೀರಿಸಿಕೊಳ್ಳಲು ವಿದ್ಯಾರ್ಥಿನಿಯನ್ನು ಕೆಟ್ಟ ರೀತಿಯಲ್ಲಿ ನಡೆಸಿಕೊಂಡಿದ್ದಾನೆ. ಶಿಕ್ಷಕರನ್ನು ಗೌರವ, ಭಕ್ತಿ-ಭಾವದಿಂದ ಕಾಣಲಾಗುತ್ತದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ಒಳ್ಳೆ ದಾರಿಯಲ್ಲಿ ಮುನ್ನಡೆಸುವ ಗುರು ಅವರು. ಆದರೆ, ಇಲ್ಲೊಬ್ಬ ಕಾಲೇಜಿನ ಶಿಕ್ಷಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಶಿಕ್ಷಕನೊಬ್ಬ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ದೃಶ್ತವನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದ್ದು, ಸದ್ಯ ವಿಡಿಯೋ ವೈರಲ್ (viral video) ಆಗಿದ್ದು, ಘಟನೆಯು ಉತ್ತರಪ್ರದೇಶ ಮಿರ್ಜಾಪುರದ ಐಟಿಐ ಕಾಲೇಜೊಂದರಲ್ಲಿ (ITI college) ನಡೆದಿದೆ ಎಂದು ತಿಳಿದುಬಂದಿದೆ.

ವಿಡಿಯೋವನ್ನು ಭೌತಶಾಸ್ತ್ರದ ಪ್ರಾಧ್ಯಾಪಕ, ಸಾಮಾಜಿಕ ಕಾರ್ಯಕರ್ತ ಮತ್ತು ಕಿಸಾನ್ ನಾಯಕ ಅರುಣೇಶ್ ಯಾದವ್ ಎಂಬವರು ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಉತ್ತರಪ್ರದೇಶ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ.

 

ವಿಡಿಯೋ ಗಮನಿಸಿದ ಪೊಲೀಸರು ತಕ್ಷಣವೇ ಕ್ರಮ ಕೈಗೊಂಡಿದ್ದು, 24 ಗಂಟೆಗಳಲ್ಲಿ ಆರೋಪಿ ಶಿಕ್ಷಕನನ್ನು ಬಂಧಿಸಿದ್ದಾರೆ. ಬಂಧಿತ ಶಿಕ್ಷಕ ವಿಜಯ್ ಸಿಂಗ್ ಎನ್ನಲಾಗಿದ್ದು, ಈತ ಕತ್ರಾದ ಐಟಿಐ ಕಾಲೇಜಿನಲ್ಲಿ ಶಿಕ್ಷಕ ಎಂದು ಹೇಳಲಾಗಿದೆ.

ಇದನ್ನೂ ಓದಿ: Nita Ambani Richness: ನೀತಾ ಅಂಬಾನಿಯ ಮೇಕಪ್ ಮ್ಯಾನ್ ಪಡ್ಯೋ ಸಂಭಾವನೆ ಕೇಳಿದ್ರೆ ಇನ್ನು ಬೇರೆ ಉದ್ಯೋಗ ನಾ ಮಾಡಲ್ಲ ಅಂತೀರ !

Leave A Reply

Your email address will not be published.