PM Narendra Modi: ರಾಜ್ಯದಲ್ಲಿ ಪ್ರಧಾನಿ ಮೋದಿ ಚುನಾವಣೆ ರಣತಂತ್ರ; ಕಾಂಗ್ರೆಸ್‌ ನಿಂದ ಸಮಾಜ ಒಡೆಯುವ ಕೆಲಸ; ಎಂದಿಗೂ ಕ್ಷಮಿಸಬೇಡಿ: ಪ್ರಧಾನಿ ಮೋದಿ ಮನವಿ

PM Narendra Modi: ವಿಜಯಪುರ: ವಿಧಾನಸಭೆ ಚುನಾವಣೆ ಇನ್ನೇನು ಕೆಲವು ದಿನಗಳು ಬಾಕಿ ಇದೆ. ಈಗಾಗಲೇ ಉಭಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅರಳಿಸಲು ನಾಯಕರು ನಾನಾ ಕಸರತ್ತು ನಡೆಸಿದ್ದಾರೆ. ಹೀಗಾಗಿ ರಾಜ್ಯಕ್ಕೆ ಪ್ರಧಾನಿ ಮೋದಿ (PM Narendra Modi)  ಆಗಮಿಸಿದ್ದು, ಚುನಾವಣೆ ರಣಹಳಹೆ ಊದಲಿದ್ದಾರೆ.
ವಿಜಯಪುರ ನಗರದ ಸೈನಿಕ ಶಾಲೆ ಆವರಣದಲ್ಲಿ ಬಿಜೆಪಿ ಸಮಾವೇಶ ನಡೆದಿದೆ. ಈ ವೇಳೆ ಪ್ರಧಾನಿ ಮೋದಿ ಭಾಷಣ ಮಾಡಿದ್ದು, ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷವು ಸಮಾಜವನ್ನು ಒಡೆಯುವ ಕೃತ್ಯ ಎಸಗುತ್ತಿದೆ. ಅಂಥ ಕಾಂಗ್ರೆಸ್ಸನ್ನು ಎಂದಿಗೂ ಕ್ಷಮಿಸಬೇಡಿ ಎಂದು ಮೋದಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

 

ಜಗತ್ಯೋತಿ ಬಸವೇಶ್ವರರು ಸಮಾನತೆಗಾಗಿ ಹೋರಾಡಿದ್ದರು. ಆದರೆ ಇಂದಿನ ಕಾಂಗ್ರೆಸ್ ನಾಯಕರು ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಹೀಗಾಗಿ ಸಮಾಜವನ್ನು ವಿಭಜಿಸುವ ಕಾಂಗ್ರೆಸ್ ಪಕ್ಷವನ್ನು ಕ್ಷಮಿಸಬೇಡಿ ಎಂದು ಮೋದಿ ಕಿವಿಮಾತು ಹೇಳಿದ್ದಾರೆ. ಕುವೆಂಪು ಅವರ ‘ಸರ್ವ ಜನಾಂಗದ ಶಾಂತಿಯ ತೋಟ’ ಸಾಲನ್ನು ಉಲ್ಲೇಖಿಸಿದ ಮೋದಿ, ಸಮಾಜದ ವರ್ಗಗಳು ಪರಸ್ಪರ ಗೌರವ ನೀಡಿ ಬಾಳುವುದು ಮುಖ್ಯ ಎಂದರು.

ನನ್ನನ್ನು ಟೀಕಿಸುವುದರಲ್ಲೇ ಕಾಂಗ್ರೆಸ್​ ಸಮಯ ವ್ಯರ್ಥ ಮಾಡುತ್ತಿದೆ. ಡಾ. ಅಂಬೇಡ್ಕರ್​​​ರನ್ನು ಕಾಂಗ್ರೆಸ್​ನವರು ದೇಶದ್ರೋಹಿ ಎಂದಿದ್ದರು. ನನ್ನನ್ನು 91 ಬಾರಿ ಕಾಂಗ್ರೆಸ್​ ನಾಯಕರು ಬೈದಿದ್ದಾರೆ. ನನ್ನ ಸಮಾಧಿ ತೋಡಬೇಕೆಂಬುದೇ ಕಾಂಗ್ರೆಸ್ ಉದ್ದೇಶ. ಆದರೆ ನಿಮ್ಮ ಆಶೀರ್ವಾದ ಇರುವವರೆಗೆ ಏನೂ ಮಾಡಲಾಗದು ಎಂದರು.

ಇನ್ನು ಆಯುಷ್ಮಾನ್ ಭಾರತ್ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಬಯಲುಶೌಚ ಮುಕ್ತಕ್ಕಾಗಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಕಾಶಿಯಲ್ಲಿ ಮಹಿಳೆಯರು ಶೌಚಾಲಯಕ್ಕೆ ‘ಮರ್ಯಾದ ಮನೆ’ ಎಂಬ ಬೋರ್ಡ್​ಗಳನ್ನು ಅಳವಡಿಸಿದ್ದಾರೆ ಎಂದು ಹೇಳಿದ್ದಾರೆ.

 

ಇದನ್ನು ಓದಿ: Atal Pension Yojana: ಅಟಲ್‌ ಪಿಂಚಣಿ ಯೋಜನೆಯಲ್ಲಿ ಆಗಿದೆ ಮಹತ್ತರ ಬದಲಾವಣೆ! 

Leave A Reply

Your email address will not be published.