Bride market: ಹುಡುಗೀರೇ ಗಮನಿಸಿ, ಈ ಮಾರ್ಕೆಟ್ ನಲ್ಲಿ ಮದ್ವೆಗೆ ಸಿಗ್ತಾರೆ ಹುಡುಗ್ರು…. ! ಸಕತ್ ಚೀಪ್….ಸಕತ್ ಫಾಸ್ಟ್…!

Bride market: ಸಂಪ್ರದಾಯ ಪ್ರಧಾನವಾದ ಭಾರತದಲ್ಲಿ ಹಿಂದೆಲ್ಲ ಮದುವೆ ವಿಚಾರವಾಗಿ ಪೋಷಕರ ನಿರ್ಧಾರವೇ ಅಂತಿಮವಾಗಿತ್ತು. ತಾವು ನೋಡಿದ ಹುಡುಗ ಮತ್ತು ಹುಡುಗಿಗೆ ಮದುವೆ ಮಾಡಿಸುತ್ತಿದ್ದರು. ಆದರೀಗ ಕಾಲ ಈಗ ಬದಲಾಗಿದೆ. ತಮಗೆ ಬೇಕಾದ, ಇಷ್ಟವೆನಿಸುವ ಸಂಗಾತಿಯನ್ನು ಅವರವರೇ ಹುಡುಕಿಕೊಳ್ಳುತ್ತಾರೆ. ಪ್ರೀತಿಸಿಯೋ, ಪ್ರೇಮಿಸಿಯೋ ಅವರನ್ನೇ ಮದುವೆ ಆಗುತ್ತಾರೆ. ಇದಲ್ಲದೆ ಇಂದು ಮ್ಯಾಟ್ರಿಮೊನಿಯಂತಹ ಅನೇಕ ಆಪ್ ಗಳು ಬಂದಿದ್ದು, ಅದರಲ್ಲೂ ತಮ್ಮ ಬಾಳ ಸಂಗಾತಿಯನ್ನು ಆರಿಸುವುದುಂಟು. ಆದರೆ ಇದೆಲ್ಲದರ ನಡುವೆ ವಿಚಿತ್ರ ಎಂಬಂತೆ ಇಲ್ಲೊಂದೆಡೆ ‘ಮಧು ಮಗನ ಮಾರುಕಟ್ಟೆ’ ಯೊಂದು ಭಾರಿ ಸದ್ದು ಮಾಡ್ತಿದೆ. ಇಲ್ಲಿ ಹುಡುಗಿಯರು (Bride market) ತಮಗಿಷ್ಟವಾದ ಹುಡುಗನನ್ನು ಆರಿಸಬಹುದು.

 

ಹೌದು, ಹಿಂದೆಲ್ಲಾ ರಾಜ ಮಹಾರಾಜರ ಕಾಲದಲ್ಲಿ ನಡೆಯುತ್ತಿದ್ದ ಸ್ವಯಂವರದ ಬಗ್ಗೆ ನೀವೆಲ್ಲರೂ ಕೇಳಿರಬಹುದು. ಅಲ್ಲಿ ವಧು ತನಗಿಷ್ಟವೆನಿಸಿದ ಹುಡುಗನನ್ನು ಆರಿಸುತ್ತಿದ್ದಳು. ಆದರೆ ಈ ಸಂಪ್ರದಾಯ ಈಗಲೂ ಇದೆ ಅಂದ್ರೆ ನಂಬ್ತೀರಾ? ನಂಬಲೇ ಬೇಕು. ಯಾಕೆಂದರೆ ಬಿಹಾರದ ಮಧುಬನಿ ಪ್ರದೇಶದಲ್ಲಿ ದುಲ್ಹಾ ಬಜಾರ್​ ಆಚರಣೆ ನಡೆಸುತ್ತಾರೆ. ದುಲ್ಹಾ ಬಜಾರ್​ ಅಂದ್ರೆ ವಧುವಿನ ಜಾತ್ರೆ ಎಂದರ್ಥ. ಈ ಜಾತ್ರೆಯಲ್ಲಿ ‘ಮಧು ಮಗನ ಮಾರುಕಟ್ಟೆ’ ಇದ್ದು ಇಲ್ಲಿ ಹುಡುಗಿಯರು ತಮಗಿಷ್ಟವಾದ ಹುಡುಗನನ್ನು ತಾವೇ ಆರಿಸಬಹುದು.

ಅಂದಹಾಗೆ ಈ ಆಚರಣೆಗೆ ಸುಮಾರು 700 ವರ್ಷದ ಇತಿಹಾಸವಿದೆ. ಇಲ್ಲಿಗೆ ಪ್ರತಿಯೊಂದು ಜಾತಿ ಧರ್ಮದ ವಧು ಮತ್ತು ವರರು ಬರುತ್ತಾರೆ. ಹುಡುಗಿಯರು ತಮಗೆ ಸೂಕ್ತವಾದ ವರನನ್ನು ಆಯ್ಕೆ ಮಾಡಬಹುದಾದಂತಹ ಅವಕಾಶ ಇಲ್ಲಿ ಕಲ್ಪಿಸಲಾಗಿದೆ. ಭೇಟಿ, ಮಾತುಕತೆ ಮತ್ತು ಮನಸ್ಸುಗಳು ಒಂದಾದ ಬಳಿಕ ಮದುವೆಯಾಗಲು ಆಲೋಚನೆ ಮಾಡುತ್ತಾರೆ.

ಇದರ ಇತಿಹಾಸ ಕುರಿತು ನೋಡೋದಾದ್ರೆ 1310ರಲ್ಲಿ ಕರ್ನಾಟಕದ ರಾಜ ಹರಿಸಿಂಹ ದೇವ್​​ ಅಂದು ಸೌರತ್​ನಲ್ಲಿ ಈ ಜಾತ್ರೆಯನ್ನು ಪ್ರಾರಂಭಿಸಿದರು. ಹಾಗಾಗಿ ಇದಕ್ಕೆ 700 ವರ್ಷದ ಇತಿಹಾಸವಿದೆ. ಮತ್ತೊಂದು ಅಚ್ಚರಿ ಸಂಗತಿ ಎಂದರೆ ಅಂದು ರಕ್ತದ ಗುಂಪು ಹೊಂದಾಣಿಕೆ ಆದರೆ ಮಾತ್ರ ಮದುವೆ ಮಾಡಲಾಗುತ್ತಿತ್ತು. ಅಲ್ಲದೆ ಆಗಿನ ಕಾಲದಲ್ಲಿ ಪೋಷಕರು ವರದಕ್ಷಿಣೆ ಸಮಸ್ಯೆ ಮತ್ತು ಹುಡುಗಿಯನ್ನು ಮದುವೆ ಮಾಡಿ ಕೊಡಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆ ನಿವಾರಿಸಲು ಈ ಜಾತ್ರೆಯನ್ನು ಆರಂಭಿಸಿದರು ಎನ್ನಲಾಗಿದೆ. ಮಧು ಮಗನ ಜಾತ್ರೆ ಇಂದಿಗೂ ನಡೆಯುತ್ತಲೇ ಬಂದಿದೆ. ಸದ್ಯ ಮಿಥಿಲಾಂಚನ್​ನಲ್ಲಿ ಈ ಪದ್ಧತಿ ಜೀವಂತವಾಗಿ ಉಳಿದಿದೆ. ಸಾವಿರಾರು ಯುವಕರು ಈ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ.

 

ಇದನ್ನು ಓದಿ: Karnataka Elections: ಚುನಾವಣಾ ಪ್ರಚಾರದ ವೇಳೆ ನಿಮ್ ದಿಗ್ಗಜ ನಾಯಕರು ಸೇವಿಸೋ ಆಹಾರ ಏನು ನೋಡಿದ್ರಾ ?! 

Leave A Reply

Your email address will not be published.