Atal Pension Yojana: ಅಟಲ್ ಪಿಂಚಣಿ ಯೋಜನೆಯಲ್ಲಿ ಆಗಿದೆ ಮಹತ್ತರ ಬದಲಾವಣೆ!
Atal Pension Yojana 2023: ಅಟಲ್ ಪಿಂಚಣಿ ಯೋಜನೆಯು (Atal Pension Yojana 2023) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿದ್ದು, 18 ರಿಂದ 40 ವರ್ಷಗಳ ನಡುವಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಡಿ, ಚಂದಾದಾರರಿಗೆ ತಿಂಗಳಿಗೆ ಕನಿಷ್ಠ 1,000 ಮತ್ತು ಗರಿಷ್ಠ 5,000 ಪಿಂಚಣಿ ನೀಡಲಾಗುತ್ತದೆ. ಸದ್ಯ ಈ ಯೋಜನೆಯಲ್ಲಿ ಮಹತ್ತರ ಬದಲಾವಣೆ ಆಗಿದೆ. ಅಟಲ್ ಪಿಂಚಣಿ ಯೋಜನೆ ಚಂದಾದಾರಿಕೆ ಶೇ. 20 ರಷ್ಟು ಏರಿಕೆಯಾಗಿದೆ ಎನ್ನಲಾಗಿದೆ.
2021-22 ರಲ್ಲಿ ಅಟಲ್ ಪಿಂಚಣಿ ಯೋಜನೆಗೆ ಹೊಸದಾಗಿ 99 ಲಕ್ಷ ಜನರು ಚಂದಾದಾರರು ಆಗಿದ್ದರು. ಆದರೆ, ಹಣಕಾಸು ವರ್ಷ 2022-23ರಲ್ಲಿ ಈ ಯೋಜನೆಯ ಹೊಸ ಚಂದಾದಾರರ ಪ್ರಮಾಣ ಶೇಕಡ 20ರಷ್ಟು ಏರಿಕೆಯಾಗಿದೆ.
“ಮಾರ್ಚ್ 31, 2023 ರ ವೇಳೆಗೆ ಒಟ್ಟು 5.20 ಕೋಟಿ ಜನರು ಅಟಲ್ ಪಿಂಚಣಿ ಯೋಜನೆಯ ಚಂದಾದಾರಿಕೆಯನ್ನು ಮಾಡಿಕೊಂಡಿದ್ದು, ಈ ಖಾತೆಯ ಅಡಿಯಲ್ಲಿನ ಆಸ್ತಿ ಮೌಲ್ಯವು 27,200 ಕೋಟಿ ರೂಪಾಯಿ ಆಗಿದೆ. ಈ ಯೋಜನೆಯನ್ನು ಆರಂಭ ಮಾಡಿದಾಗಿನಿಂದ ಈವರೆಗೆ ಶೇಕಡ 8.69 ರಷ್ಟು ಹೂಡಿಕೆಯ ಲಾಭವನ್ನು ಗಳಿಸಿದೆ” ಎಂದು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ತಿಳಿಸಿದೆ.
ಒಂಬತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳು (bank) ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವರ್ಗದಲ್ಲಿ, 32 ಬ್ಯಾಂಕ್‌ಗಳು ವಾರ್ಷಿಕ ಗುರಿಯನ್ನು ಸಾಧಿಸಿವೆ. ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್, ಧನಲಕ್ಷ್ಮಿ ಬ್ಯಾಂಕ್ ಮತ್ತು ಏರ್‌ಟೆಲ್ ಪೇಮೆಂಟ್ ಬ್ಯಾಂಕ್‌ಗಳು ಹಣಕಾಸು ಸಚಿವಾಲಯವು ನಿಗದಿಪಡಿಸಿದ ವಾರ್ಷಿಕ ಗುರಿಯನ್ನು ಸಾಧಿಸಿವೆ. ಇನ್ನು 12 ರಾಜ್ಯಗಳು ಸಹ ತಮ್ಮ ಗುರಿಯನ್ನು ತಲುಪಿದೆ. ಈ ಬ್ಯಾಂಕ್‌ಗಳು ಸಮಿತಿಯ ಸಹಾಯ ಮತ್ತು ಬೆಂಬಲದೊಂದಿಗೆ ತಮ್ಮ ವಾರ್ಷಿಕ ಗುರಿಗಳನ್ನು ಸಾಧಿಸಿವೆ.
ಆದರೆ ಬ್ಯಾಂಕ್ ಆಫ್ ಇಂಡಿಯಾ (bank of india), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) (sbi) ಮತ್ತು ಇಂಡಿಯನ್ ಬ್ಯಾಂಕ್ ಪ್ರತಿ ಶಾಖೆಗೆ 100 ಕ್ಕೂ ಹೆಚ್ಚು ಎಪಿವೈ ಖಾತೆಗಳನ್ನು ಹೊಂದಿದೆ. ಜಾರ್ಖಂಡ್ ರಾಜ್ಯ ಗ್ರಾಮೀಣ ಬ್ಯಾಂಕ್, ವಿದರ್ಭ ಕೊಂಕಣ ಗ್ರಾಮೀಣ ಬ್ಯಾಂಕ್, ತ್ರಿಪುರಾ ಗ್ರಾಮೀಣ ಬ್ಯಾಂಕ್ ಮತ್ತು ಬರೋಡಾ ಉತ್ತರ ಪ್ರದೇಶ ಗ್ರಾಮೀಣ ಬ್ಯಾಂಕ್ ಪ್ರತಿ ಶಾಖೆಗೆ 160 ಕ್ಕೂ ಹೆಚ್ಚು ಎಪಿವೈ ಖಾತೆಗಳನ್ನು ತೆರೆದಿದೆ.
ಇದನ್ನು ಓದಿ: Arjun Tendulkar: ಮೂಗಿನೊಳಗೆ ಬೆರಳಿಟ್ಟು ಆಮೇಲೆ ಬಾಯಿಗೆ ಹಾಕಿ ಉಪ್ಪು ನೋಡಿದ : ಅರ್ಜುನ್ ತೆಂಡೂಲ್ಕರ್ ಅಸಹ್ಯ ವಿಡಿಯೋ ವೈರಲ್ !