Actor Jaggesh: ಡಿ.ಕೆ. ಶಿವಕುಮಾರ್ ಅವರು ನನ್ನ ಕ್ಲೋಸ್ ಫ್ರೆಂಡ್ ಅವರೇ ಮುಖ್ಯಮಂತ್ರಿ ಆಗಲಿ – ಎಂದು ಬಿಟ್ಟ ಬಿಜೆಪಿ ಸಂಸದ ಜಗ್ಗೇಶ್ !

Actor Jaggesh: ಮೈಸೂರಿನಲ್ಲಿ ಚುನಾವಣಾ ಪ್ರಚಾರದ ಸಂದರ್ಭ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಹೇಳಿಕೆಯಿಂದನ್ನು ನೀಡಿದ್ದು, ” ಡಿ.ಕೆ. ಶಿವಕುಮಾರ್ ಅವರು ನನ್ನ ಕ್ಲೋಸ್ ಫ್ರೆಂಡ್ ಅವರೇ ಮುಖ್ಯಮಂತ್ರಿ ಆಗಲಿ ” ಎಂದು ಜಗ್ಗೇಶ್ ಅವರು ಹೇಳಿದ್ದಾರೆ. ಜಗ್ಗೇಶ್ ಅವರು ಯಾಕೆ ಅಂದಿದ್ದಾರೆ ಆ ಮಾತನ್ನು ಎನ್ನುವುದು ಇದೀಗ ಚರ್ಚೆಯಾಗುತ್ತಿದೆ.

 

ಚುನಾವಣಾ (Election) ಸಮಯಕ್ಕೆ ಇನ್ನು ಕೇವಲ 11 ದಿನ ಬಾಕಿ. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ರಾಜ್ಯ ಸರಕಾರದ ಮೇಲಿನ 40% ಆರೋಪ ಕಾಂಗ್ರೆಸ್ನ ಟೂಲ್ ಕೀಟ್ ಭಾಗವಷ್ಟೇ. ತಾನು ಮಾಡಿದ ಒಂದೇ ಒಂದು ಆರೋಪವನ್ನು ಕಾಂಗ್ರೆಸ್ ಸಾಬೀತು ಮಾಡಿಲ್ಲ ಎಂದು ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ (Actor Jaggesh) ಇಂದು ಕಿಡಿಕಾರಿದ್ದಾರೆ.

ಅವರು ಹೈ ಫೈ ವರುಣಾದಲ್ಲಿ ಕ್ಷೇತ್ರದ ಪ್ರಚಾರ ವೇಳೆ ಮಾತನಾಡುತ್ತಾ, ‘ ಪ್ರಧಾನಿ ಮೋದಿಯವರು (PM Narendra Modi) ಕೇವಲ ರಾಷ್ಟ್ರದ ನಾಯಕ ಅಲ್ಲ. ಅವರು ವಿಶ್ವ ನಾಯಕನಂತಿದ್ದು, ಈ ದೇಶಕ್ಕೆ ತಂದೆ ಇದ್ದಂತೆ. ಕೈಯಲ್ಲಿ ಆಗದವರು ಮೈ ಪರಚಿಕೊಂಡಂತೆ, ಮೋದಿ ಅವರ ಬಗ್ಗೆ ಕಾಂಗ್ರೆಸ್ ಮೈ ಪರಚಿಕೊಳ್ಳುತ್ತಿದೆ ‘ ಎಂದು ಕಾಂಗ್ರೆಸ್ ವಿರುದ್ಧ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ.

‘ ನಮ್ಮ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ದಿನವೂ ಸದನದಲ್ಲಿ ಕೂತು ರಾಜ್ಯದ ಬಗ್ಗೆ ಮಾತಾಡಿದ್ದು ನಾನು ನೋಡಿಲ್ಲ. ಕಾಂಗ್ರೆಸ್ ಕೇವಲ ಪ್ರಧಾನಿ ಮೋದಿ ಬಗ್ಗೆ ಅಪಮಾನಕರಿಯಾಗಿ ಮಾತಾಡುವುದರಲ್ಲೇ ಕಾಲ ಕಳೆಯುತ್ತಿದೆ. ಮೋದಿ ಅವರನ್ನು ಕಾಂಗ್ರೆಸ್’ನವರು ಎಷ್ಟು ಬೈತಾರೋ, ಮೋದಿ ಅವರು ಅಷ್ಟು ಮೇಲೆ ಹೋಗುತ್ತಾರೆ ‘ ಎಂದು ಜಗ್ಗೇಶ್ ಹೇಳಿದ್ದಾರೆ.

ವಿ.ಸೋಮಣ್ಣ ಗೆಲುವು ಖಚಿತ:
ಬಿಜೆಪಿ ಅಭ್ಯರ್ಥಿ ಪ್ರಚಾರಕ್ಕೆ ತಡೆ ವಿಚಾರವಾಗಿ ಜಗ್ಗೇಶ್ ಪ್ರತಿಕ್ರಿಯಿಸಿ, ಯಾವಾಗ ತಮ್ಮ ವಿರುದ್ದ ವಿರೋಧಿ ಅಲೆ ಬಂದಾಗ ಇಂತಹಾ ಹತಾಶೆ ಮನೋಭಾವದಲ್ಲಿ ಗಲಾಟೆ ಮಾಡಿಸುತ್ತಾರೆ. ಯಾರನ್ನು ತಡೆಯುವ ಪ್ರಯತ್ನ ಮಾಡಬೇಡಿ ಎಂದು ನಾನು ಸಿದ್ದರಾಮಯ್ಯನವರಲ್ಲಿ ಮನವಿ ಮಾಡುತ್ತೇನೆ. ವಿ. ಸೋಮಣ್ಣನವರಿ ನಿನ್ನೆ ಮೊನ್ನೆಯ ನಾಯಕರಲ್ಲ, ಅದನ್ನು ಗೋವಿಂದರಾಜ ನಗರ ಕ್ಷೇತ್ರದ ಅಭಿವೃದ್ಧಿ ನೋಡಿದಾಗ ಗೊತ್ತಾಗುತ್ತದೆ ಎಂದರು.

ಡಿಕೆಶಿ ಸಿಎಂ ಆಗಲಿ ಎಂದು ಬಿಟ್ಟ ಜಗ್ಗೇಶ್ !
‘ ಗುಜರಾತಿನ ಅಮುಲ್ ಉತ್ಪನ್ನಗಳನ್ನು ರಾಜ್ಯಕ್ಕೆ ಪರಿಚಯಸಿದವರು ಮಾಜಿ ಸಿಎಂ ಸಿದ್ದರಾಮಯ್ಯ. ವರುಣದಲ್ಲಿ ಗೆದ್ದರೆ ಸಿದ್ದರಾಮಯ್ಯ ಸಿಎಂ ಆಗುತ್ತೇನೆ ಎನ್ನುತ್ತಾರೆ‌. ನನಗೆ ಡಿ.ಕೆ ಶಿವಕುಮಾರ್ ಕ್ಲೋಸ್ ಫ್ರೆಂಡ್. ಅವರೇ ಸಿಎಂ ಆಗಬೇಕು ಎನ್ನುವ ಆಸೆ ಇದೆ. ಅಂತಿಮವಾಗಿ ವರುಣ ಕ್ಷೇತ್ರದಲ್ಲಿ 100% ಸೋಮಣ್ಣನವರು ಗೆಲ್ಲುತ್ತಾರೆ ‘ ಎಂದು ಜಗ್ಗೇಶ್ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: ಮೋದಿಗೆ ಕಾಂಗ್ರೆಸ್ ನಾಯಕರು ಎಷ್ಟು ಸಲ ಅವಾಚ್ಯ ಬೈಗುಳ ನೀಡಿದ್ದಾರೆ ಗೊತ್ತಾ ?

Leave A Reply

Your email address will not be published.