P M Modi: ಕಾರಿನ ಫುಟ್ ಬೋರ್ಡ್ ನಲ್ಲಿ ನೇತಾಡಿದ ಪ್ರಧಾನಿಯ ವಿರುದ್ಧ ದೂರು ನೀಡಿದ ತ್ರಿಶೂರ್ ನಿವಾಸಿ!!!

P M Modi: ಪ್ರಧಾನಿ ನರೇಂದ್ರ ಮೋದಿ (P M Modi) ಅವರು ವಾಹನವೊಂದರ ತೆರೆದ ಬಾಗಿಲಿನಲ್ಲಿ ನೇತಾಡುವ ಮೂಲಕ ರೋಡ್‌ ಶೋ ನಡೆಸಿದ್ದಾರೆಂದು ಅವರ ವಿರುದ್ಧ ದೂರು ನೀಡಲಾಗಿದೆ.

ಹೌದು, ಕೇರಳದ ತ್ರಿಶೂರ್ ಪ್ರದೇಶದ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ಕೊಚ್ಚಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತ್ರಿಶೂರ್ ಮೂಲದ ಜಯಕೃಷ್ಣನ್ ಅವರು ಬುಧವಾರ ಏಪ್ರಿಲ್ 24 ರಂದು ಕೊಚ್ಚಿಯಲ್ಲಿ ಪ್ರಧಾನಿ ನಡೆಸಿದ ರೋಡ್ ಶೋ ವೇಳೆ ಸಂಚಾರ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಿ ಕೇರಳ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅನಿಲ್ ಕಾಂತ್ ಮತ್ತು ಮೋಟಾರು ವಾಹನ ಇಲಾಖೆಗೆ ಅವರು ದೂರು ನೀಡಿದ್ದಾರೆ.

ಅಂದಹಾಗೆ ಕೇರಳಕ್ಕೆ 2 ದಿನಗಳ ಭೇಟಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಸೋಮವಾರ ಸಂಜೆ ಕೇರಳದ ಸಾಂಪ್ರದಾಯಿಕ ಧಿರಿಸು ಧರಿಸಿ ರೋಡ್‌ ಶೋ ವೇಳೆ ರಸ್ತೆಯಲ್ಲಿ ಕೆಲ ಸಮಯ ನಡೆದು ಅಭಿಮಾನಿಗಳನ್ನು ಚಕಿತಗೊಳಿಸಿದ್ದರು. ಹೀಗೆ ಸುಮಾರು 20 ನಿಮಿಷ ನಡೆದ ನಂತರ ಕಾರನ್ನು ಹತ್ತಿ ಫುಟ್‌ಬೋರ್ಡಿನಲ್ಲಿ ನಿಂತು ಹೆದ್ದಾರಿಯ ಇಕ್ಕೆಲಗಳು ಹಾಗೂ ಕಟ್ಟಡಗಳಲ್ಲಿ ನಿಂತು ನೋಡುತ್ತಿದ್ದ ಜನರತ್ತ ಕೈಬೀಸಿದ್ದರು.

ಈ ರೋಡ್‌ ಶೋಗೆ ಸಂಬಂಧಿಸಿದಂತೆ ಜಯಕೃಷ್ಣನ್‌, ಪ್ರಧಾನಿ ವಿರುದ್ಧ ದೂರು ದಾಖಲಿಸಿದ್ದು, ವಾಹನವೊಂದರ ತೆರೆದ ಬಾಗಿಲಿನಲ್ಲಿ ನೇತಾಡುವ ಮೂಲಕ ಪ್ರಧಾನಿ ಈ ರೋಡ್‌ ಶೋ ನಡೆಸಿದ್ದಾರೆಂದು ತಾವು ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಅದರಲ್ಲಿ ರೋಡ್ ಶೋ ವೇಳೆ, ಸುತ್ತ ಮುತ್ತ ನೆರೆದಿದ್ದ ಜನರು ಮೋದಿ ಮೇಲೆ ಹೂವಿನ ಸುರಿಮಳೆ ಗೈದದುದರಿಂದ ಕಾರಿನ ಗಾಜು ಹೂವುಗಳಿಂದ ಮುಚ್ಚಿ ಹೋಗಿತ್ತು. ಇದರಿಂದ ಚಾಲಕನ ವೀಕ್ಷಣೆಗೆ ಅಡ್ಡಿಯಾಗಿತ್ತು ಎಂದು ಹೇಳಿದ ಜಯಕೃಷ್ಣನ್ ಎಲ್ಲರೂ ಕಾನೂನನ್ನು ಪಾಲಿಸುವಂತೆ ಮಾಡಬೇಕೆಂದು ಹೇಳಿದ್ದಾರೆ.

ಇದನ್ನೂ ಓದಿ: Dolo 650 CEO who bought the house : ಬೆಂಗಳೂರಲ್ಲಿ 66 ಕೋಟಿ ರೂ ಮನೆ ಖರೀದಿಸಿದ ಡೋಲೋ 650 ಸಿಇಒ!! ಅಬ್ಬಬ್ಬಾ, ಕಾಲಿ 2 ವರ್ಷಗಳಲ್ಲಿ ಇವರ ಆಸ್ತಿಯಲ್ಲಾದ ಏರಿಕೆ ಎಷ್ಟು ಗೊತ್ತಾ?

Leave A Reply

Your email address will not be published.