Man sleep with 6 wives together: 80 ಲಕ್ಷ ರೂ. ಖರ್ಚು ಮಾಡಿ 20 ಅಡಿ ಅಗಲದ ಬೆಡ್ ತಯಾರಿಸಿದ ಅಸಾಧ್ಯ ರಸಿಕ: ಒಟ್ಟೊಟ್ಟಿಗೆ, ಒತ್ತೊತ್ತಿ ಈತ ಎಷ್ಟು ಹೆಂಡ್ತೀರ ಜತೆ ಮಲಗ್ತಾನೆ ಗೊತ್ತಾ ?
Man sleep with 6wives together: ವ್ಯಕ್ತಿಯೊಬ್ಬ ತನ್ನ ಆರು ಜನ ಪತ್ನಿಯರೊಂದಿಗೆ ಮಲಗಲು ದಿನಕ್ಕೊಂದರಂತೆ ಟೈಮ್ ಟೇಬಲ್ ಹಾಕಿದ್ದ ಸುದ್ದಿ ಓದಿರುತ್ತೀರಿ. ಆ ಸುದ್ದಿ ಈಗ ಹಳೆಯದು. ಬಹುಶ: ಆ ಟೈಮ್ ಟೇಬಲ್ ವರ್ಕ್ ಆಗಿಲ್ಲ ಅನಿಸುತ್ತದೆ, ಅಥವಾ ಆತನಿಗೆ ಒಬ್ಬೊಬ್ಬರ ಜೊತೆಯೇ ಮಲಗಿ ಬೋರಾಗಿರಬೇಕು ! ಅದಕ್ಕೇ ಆತನೀಗ ತನ್ನ ಪ್ರಸ್ತುತ ಇರುವ ಎಲ್ಲಾ 6 ಜನ ಪತ್ನಿಯರ ಜೊತೆ (Man sleep with 6wives together) ಮಲಗಲು 20 ಅಡಿ ವಿಶಾಲವಾದ ಬೆಡ್ಡನ್ನು ತಯಾರಿಸಿ ಸುದ್ದಿಯಲ್ಲಿದ್ದಾನೆ.
ಆರ್ಥರ್ ಓ ಉರ್ಸೊ ಎಂಬ ಹೆಸರಿನ ಬ್ರೆಜಿಲಿಯನ್ ವ್ಯಕ್ತಿಯ ರೂ. 80 ಲಕ್ಷ ಮೌಲ್ಯದ 20 ಅಡಿ ಹಾಸಿಗೆಯನ್ನು ನಿರ್ಮಿಸುತ್ತಿದ್ದಾನೆ. ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಓಡಾಡುತ್ತಿದೆ. ದೊಡ್ಡ ಹಾಸಿಗೆ ಹರವಿ ಏಕಕಾಲಕ್ಕೆ ಈಗಿರುವ ತನ್ನ ಆರೂ ಜನ ಪತ್ನಿಯರೊಂದಿಗೆ ‘ಒಟ್ಟೊಟ್ಟಾಗಿ ಮತ್ತು ಒತ್ತೊತ್ತಾಗಿ ‘ ಹಾಗೂ ‘ ಮಲಗುವುದು ಮತ್ತು ನಿದ್ರಿಸುವುದು ‘ ಆತನ ಪ್ಲಾನ್ !!!
ಆರ್ಥರ್ ಈ ಹಿಂದೆ 9 ಹೆಂಡತಿಯರನ್ನು ಹೊಂದಿದ್ದ: ಆದರೆ ಅವರು ಕಳೆದ ವರ್ಷ ಅವರಲ್ಲಿ ನಾಲ್ವರಿಗೆ ವಿಚ್ಛೇದನ ನೀಡಿದ್ದ. ಮತ್ತೆ ಇಬ್ಬರನ್ನು ಮನೆ ತುಂಬಿಸಿಕೊಂಡಿದ್ದ. ಈಗ ಆತ ಒಟ್ಟು ಆರು ಹೆಂಡತಿಯರನ್ನು ಹೊಂದಿದ್ದಾನೆ ಮತ್ತು ಏಕಕಾಲದಲ್ಲಿ ಅವರೆಲ್ಲರ ಜತೆ ಮಜಾ ಮಾಡುವುದು ಆತನ ಕನಸು. ಆ ಮೂಲಕ ತನ್ನ ಸಂಬಂಧವನ್ನು ಇನ್ನಷ್ಟು ಬೆಚ್ಚಗೆ ಮತ್ತು ಗಟ್ಟಿಯಾಗಿ ಮಾಡೋದು ಆತನ ಇರಾದೆಯಂತೆ !
ಇದನ್ನು ಸಾಧಿಸಲು ಇದೀಗ ವಿಶಿಷ್ಟ ಬೆಡ್ಡಿನ ತಯಾರಿಕಾ ಕಾರ್ಯ ಬಿರುಸಾಗಿ ನಡೆದಿದೆ. ಅವರು 20 ಅಡಿ ಅಗಲ, 7 ಆಡಿ ಎತ್ತರದ ಮೃದುವಾದ ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ದೈತ್ಯ ಹಾಸಿಗೆಯ ನಿರ್ಮಾಣವು 15 ತಿಂಗಳುಗಳನ್ನು ತೆಗೆದುಕೊಂಡಿದ್ದು, ಇದರ ನಿರ್ಮಾಣ ಕಾರ್ಯದಲ್ಲಿ ಒಟ್ಟು 12 ಜನರ ತಂಡ ಕೈ ಜೋಡಿಸಿದೆ. ಅಲ್ಲದೆ, ಒಟ್ಟು 950 ಸ್ಕ್ರೂಗಳನ್ನು ಇದರಲ್ಲಿ ಬಳಸಲಾಗಿದೆ ಎನ್ನಲಾಗಿದೆ.
ಈ ಬೆಡ್‌ನ ಕಲ್ಪನೆಯು ಸ್ಥಳಾವಕಾಶದ ಕಾರಣದಿಂದ ಹುಟ್ಟಿಕೊಂಡಿತು ಎಂದಿದ್ದಾನೆ ಆರ್ಥರ್. ‘ ನಾನು ಅನೇಕ ಬಾರಿ ಸೋಫಾ ಮತ್ತು ಡಬಲ್ ಬೆಡ್ ನಲ್ಲಿ ಮಲಗಬೇಕಾಗುತ್ತಿತ್ತು. ಮತ್ತು ಹಲವು ಬಾರಿ ನನ್ನ ಹೆಂಡತಿಯರಿಗೆ ಸ್ಥಳಾವಕಾಶ ಕಲ್ಪಿಸಲು ನಾನು ನೆಲದ ಮೇಲೆ ಮಲಗಬೇಕಾಗಿತ್ತು. ನನ್ನ ಸಂಬಂಧಗಳ ಉದ್ದಕ್ಕೂ, ನನಗೆ ಮತ್ತು ನನ್ನ ಹೆಂಡತಿಯರಿಗೆ ಮಲಗಲು ಅನುಕೂಲ ಮಾಡಲು ನಾನು ಈ ಯೋಜನೆ ರೂಪಿಸಿದೆ. ಅದರ ಫಲಶೃತಿಯೇ ಈ ಬಿಗ್ ಬೆಡ್ ‘ ಎಂದಿದ್ದಾನೆ ಆರ್ಥರ್ !
ಆತ ಮತ್ತು ಆತನ ಹಿಂದಿನ ಪತ್ನಿ ಲಿಯಾನಾ 2021 ರಲ್ಲಿ ತಮ್ಮ ಸಂಬಂಧವನ್ನು ಸೋಷಿಯಲ್ ಮೀಡಿಯಾಗೆ ತೆರೆಯಲು ನಿರ್ಧರಿಸಿ ವಿಡಿಯೋ ಅಪ್ಲೋಡ್ ಮಾಡಿದಳು. ಕೊನೆಗೆ ಅದು ಬಹು ಜನಪ್ರಿಯ ಆಯಿತು. ಇದೀಗ ಆರ್ಥರ್ ಅವರು 2 ಲಕ್ಷಕ್ಕೂ ಹೆಚ್ಚು Instagram ಅನುಯಾಯಿಗಳನ್ನು ಹೊಂದಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷ ವ್ಯಕ್ತಿಗಳ ಮೀಸಲಾದ ಅನುಯಾಯಿಗಳನ್ನು ಹೊಂದಿರುವ ಆರ್ಥರ್, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವೈವಾಹಿಕ ಜೀವನವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ದುಡ್ಡು ಮಾಡುತ್ತಾನೆ. ಇದಲ್ಲದೆ, ಈ 7 ಜನರ ಸಂಸಾರ ಸೋಷಿಯಲ್ ಮೀಡಿಯಾದಲ್ಲಿ ತಮ್ಮಪ್ರಣಯ ಪ್ರಯತ್ನಗಳು ಮತ್ತು ಲೈಂಗಿಕ ಸಲಹೆಗಳ ವೀಡಿಯೊಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ವೇದಿಕೆಯಿಂದಲೇ ಆತ ತಿಂಗಳಿಗೆ ಸುಮಾರು 50 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾನೆ !
ಈ ಹಿಂದೆ ಅರ್ಥ ತನ್ನ ಆರು ಜನ ಪತ್ನಿಯರ ಜತೆ ಸುಖಿಸಲು, ದಿನಕ್ಕೊಂಬರಂತೆ ತನ್ನ ಜೊತೆ ಮಲಗಲು ಟೈಮ್ ಟೇಬಲ್ ಹಾಕಿ ಗಮನ ಸೆಳೆದಿದ್ದ. ಆತನ ಆ ಪ್ಲಾನ್ ಹೇಳಿದ ಮಟ್ಟಿನ ಯಶಸ್ಸು ಕಂಡಿಲ್ಲ. ಒಟ್ಟಾರೆಯಾಗಿ ಎಲ್ಲರನ್ನೂ ಕಟ್ಟಿಕೊಂಡು ಒಟ್ಟಾಗಿ ಮಲಗುವುದು ಈಗ ಆತನಿಗೆ ಕ್ರೇಜ್ ಅನ್ನಿಸಿದೆ. ಅದಕ್ಕಾಗಿ ಈಗ ತಯಾರಾಗಿದೆ 20 ಅಡಿ ಅಗಲದ 85 ಲಕ್ಷದ ವಿಶಾಲವಾದ ಬೆಡ್. ಇದೂ ಬೇಸರ ಆದ್ರೆ ಮುಂದೇನು ಪ್ಲಾನ್ ಹಾಕ್ತಾನೋ ದೇವರೇ ಬಲ್ಲ.
ಇದನ್ನೂ ಓದಿ: Samantha: ಮತ್ತೆ ಆಸ್ಪತ್ರೆಗೆ ದಾಖಲಾದ ಸಮಂತಾ! ವೆಂಟಿಲೇಟರ್‌ನಲ್ಲಿರೋ ಫೋಟೋ ಕಂಡು ಅಭಿಮಾನಿಗಳಲ್ಲಿ ಆತಂಕ!