Jia Khan Case Verdict: ನಟಿ ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್ ಪಾಂಚೋಲಿ ಖುಲಾಸೆ, ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು!

Jia Khan Case Verdict: ಬಾಲಿವುಡ್‌ನ ಹೆಸರಾಂತ ನಟಿ ಜಿಯಾ ಖಾನ್‌ (Jia Khan) ಎಂಬ ಸ್ನಿಗ್ಧ, ಮುಗ್ಧ ಚೆಲುವಿನ ಚೆಲುವೆ, ಜೂನ್‌ 3 ರ 2013 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಇಡೀ ಬಾಲಿವುಡ್‌ ಜಗತ್ತನ್ನೇ ತಲ್ಲಣಗೊಳಿದ ಸುದ್ದಿಯಾಗಿತ್ತು. ನಟಿಯ ಸಾವಿಗೆ ಜಿಯಾ ಖಾನ್‌ಳ ಗೆಳಯ ಸೂರಜ್‌ ಪಾಂಚೋಲಿ ನೇರ ಕಾರಣ ಎಂಬ ಆಪಾದನೆಯನ್ನು ನಟಿ ತಾಯಿ ಮಾಡಿದ್ದರು. ಜೊತೆಗೆ ಈ ಸಂದರ್ಭದಲ್ಲಿ ಡೆತ್‌ ನೋಟ್‌ ಕೂಡಾ ದೊರಕಿತ್ತು. ನಂತರ ನಟನನ್ನು ಪೊಲೀಸರು ಬಂಧಿಸಿದ್ದರು. ನಂತರ ಸೂರಜ್‌ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಇಂದು ಈ ವಿಷಯದ ಅಂತಿಮ ತೀರ್ಪು (Jia Khan Case Verdict) ಬಿಡುಗಡೆಯಾಗಿದೆ. ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಸೂರಜ್‌ ಪಂಚೋಲಿಯನ್ನು ಸಂಪೂರ್ಣವಾಗಿ ಖುಲಾಸೆಗೊಳಿಸಿದೆ.

ಈ ಪ್ರಕರಣ ಕಳೆದ 10 ವರ್ಷಗಳಿಂದ ಕೋರ್ಟ್‌ನಲ್ಲಿ ನಡೆತಾ ಇತ್ತು. ಇದಕ್ಕೂ ಮೊದಲು, ನ್ಯಾಯಾಲಯದ ತೀರ್ಪು ಶೀಘ್ರದಲ್ಲೇ ಬರಲಿದೆ ಆದರೆ ಜಿಯಾ ಖಾನ್ ಅವರ ತಾಯಿ ರಬ್ಯಾ ಕೆಲವು ಲಿಖಿತ ವಿಷಯಗಳನ್ನು ಸಲ್ಲಿಸಲು ಸ್ವಲ್ಪ ಸಮಯ ಕೇಳಿದ್ದರು. ಹೀಗಾಗಿ ನ್ಯಾಯಾಲಯ ತನ್ನ ತೀರ್ಪಿಗೆ ಮಧ್ಯಾಹ್ನ 12.30ರವರೆಗೆ ತಡೆ ನೀಡಿತ್ತು. ಆದರೆ ಇದೀಗ ಈ ವಿಚಾರದಲ್ಲಿ ಸೂರಜ್ ಪಾಂಚೋಲಿಗೆ ರಿಲೀಫ್ ಸಿಕ್ಕಿದೆ. ಜಿಯಾಖಾನ್ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ನಟ ಸೂರಜ್‌ ಪಂಚೋಲಿಯನ್ನು ಸಂಪೂರ್ಣವಾಗಿ ಖುಲಾಸೆಗೊಳಿಸಿದೆ. ಸೂರಜ್ ಮತ್ತು ಅವರ ಕುಟುಂಬಕ್ಕೆ ಇದೊಂದು ಸಂತಸದ ಸಂದರ್ಭ. ಇದೇ ವೇಳೆ ಜಿಯಾ ಖಾನ್ ತಾಯಿಯ ನಿರೀಕ್ಷೆಯೂ ಹುಸಿಯಾಗಿದೆ. ಜಿಯಾ ಅವರ ತಾಯಿ ರಬ್ಯಾ ಇಂದು ತೀರ್ಪುಗಾಗಿ ಮುಂಬೈಗೆ ಬಂದಿದ್ದರು.

Image Source: News 18

 

‘ನಿಶಬ್ದ’ ಮತ್ತು ‘ಗಜಿನಿ’ ಚಿತ್ರಗಳ ಮೂಲಕ ಗಮನ ಸೆಳೆದ ಜಿಯಾ ಖಾನ್ ಕೇವಲ 25 ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು. ನಟಿಯ ಸಾವಿನ ನಂತರ, 6 ಪುಟಗಳ ಸೂಸೈಡ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಜಿಯಾ ಅವರ ಪತ್ರವನ್ನು ಸ್ವೀಕರಿಸಿದ ನಂತರ ನಟ ಸೂರಜ್ ಪಾಂಚೋಲಿಯನ್ನು ಬಂಧಿಸಲಾಯಿತು. ನಂತರ ನಟನಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿತು.

ಜಿಯಾ ಖಾನ್ ತಮ್ಮ ಆತ್ಮಹತ್ಯೆ ಪತ್ರದಲ್ಲಿ ಸೂರಜ್ ಪಾಂಚೋಲಿ ಬಗ್ಗೆ ಹೇಳಿದ್ದಳು. ತಾನು ಮತ್ತು ಸೂರಜ್ ಒಬ್ಬರನ್ನೊಬ್ಬರು ಹೇಗೆ ಪ್ರೀತಿಸುತ್ತಿದ್ದರು ಮತ್ತು ನಂತರ ನಟ ತನ್ನೊಂದಿಗೆ ಆತ ಹೇಗೆ ವರ್ತಿಸಲು ಪ್ರಾರಂಭಿಸಿದ ಎಂಬುವುದರ ಬಗ್ಗೆ. ಸೂರಜ್‌ನ ಬದಲಾಗುತ್ತಿರುವ ವರ್ತನೆಯನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬರೆಯಲಾಗಿತ್ತು ಎಂದು ವರದಿ ತಿಳಿಸಿದೆ. ಸೂರಜ್‌ನ ಸಲಹೆಯ ಮೇರೆಗೆ ತನ್ನ ಮಗಳು ತನ್ನ ಗರ್ಭಪಾತವನ್ನು ಸಹ ಮಾಡಿಸಿಕೊಂಡಿದ್ದಾಳೆ ಎಂದು ಜಿಯಾಳ ತಾಯಿ ಹೇಳಿದ್ದರು.

ಸೂರಜ್ ಪಾಂಚೋಲಿ (Sooraj Pancholi) ಖ್ಯಾತ ಬಾಲಿವುಡ್ ನಟ ಆದಿತ್ಯ ಪಾಂಚೋಲಿ (Aditya Pancholi) ಮತ್ತು ನಟಿ ಜರೀನಾ ವಹಾಬ್ ಅವರ ಪುತ್ರ. ಸೂರಜ್ ಪಾಂಚೋಲಿ ಇಂದು ಬಾಲಿವುಡ್ ನಟ. ನಟ ತನ್ನ ಬಾಲಿವುಡ್ ವೃತ್ತಿಜೀವನವನ್ನು 2015 ರ ಚಲನಚಿತ್ರ ಹೀರೋ ಮೂಲಕ ಪ್ರಾರಂಭಿಸಿದ್ದರು. ಈ ಚಿತ್ರದಲ್ಲಿ ಸುನೀಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಅಥಿಯಾ ತಮ್ಮ ಬಾಲಿವುಡ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸೂರಜ್ ಇತ್ತೀಚಿನ ದಿನಗಳಲ್ಲಿ ಜಿಯಾ ಖಾನ್ ಆತ್ಮಹತ್ಯೆ ಪ್ರಕರಣದ ಸುದ್ದಿಯಲ್ಲಿದ್ದಾರೆ. ಇಂದು ಈ ಪ್ರಕರಣದ ಅಂತಿಮ ತೀರ್ಪು ಸಿಬಿಐ ನ್ಯಾಯಾಲಯದಲ್ಲಿ ಪ್ರಕಟವಾಗಿದೆ.

ಜಿಯಾ ಖಾನ್ ಹುಟ್ಟಿದ್ದು ನ್ಯೂಯಾರ್ಕ್ ನಲ್ಲಿ. ಬಾಲ್ಯದಿಂದಲೂ ನಟನೆಯಲ್ಲಿ ಒಲವು ಇದ್ದ ಕಾರಣ, ನಟನೆಯೊಂದಿಗೆ ಟ್ರೆಂಡ್ ಡ್ಯಾನ್ಸರ್ ಮತ್ತು ಗಾಯಕಿ ಕೂಡ ಆಗಿ ಗುರುತಿಸಿಕೊಂಡಿದ್ದಳು. ತನ್ನ ಕನಸುಗಳನ್ನು ಈಡೇರಿಸಿಕೊಳ್ಳಲು ಮುಂಬೈಗೆ ಬಂದಿದ್ದ ಜಿಯಾ ಖಾನ್, ತಾನು ಕಂಡ ಕನಸನ್ನು ನನಸು ಮಾಡಿಕೊಂಡಳು. ಈ ನಟಿ ಕೇವಲ 18ನೇ ವಯಸ್ಸಿನಲ್ಲಿ ಬಾಲಿವುಡ್ ಲೋಕಕ್ಕೆ ಕಾಲಿಟ್ಟಿದ್ದರು. ಮೊದಲ ಚಿತ್ರ ಅಮಿತಾಬ್ ಬಚ್ಚನ್ ಅವರೊಂದಿಗೆ ಮಾಡಿ ಸೈ ಎನಿಸಿಕೊಂಡಿದ್ದಳು. ಈ ಸಿನಿಮಾ ಹೆಸರು ʼನಿಶಬ್ದ್ʼ.

ಜಿಯಾ ಖಾನ್ ಅಮಿತಾಬ್ ಬಚ್ಚನ್ ಜೊತೆ ತುಂಬಾ ಬೋಲ್ಡ್ ದೃಶ್ಯಗಳಲ್ಲಿ ನಟಿಸಿ, ಈ ಚಿತ್ರದಲ್ಲಿ ಇಬ್ಬರು ತಾರೆಯರ ನಡುವೆ ದೊಡ್ಡ ವಯಸ್ಸಿನ ಅಂತರವಿದ್ದ ಸಿನಿಮಾವಾಗಿತ್ತು. ಅಭಿನಯದ ವಿಚಾರದಲ್ಲಿ ಜಿಯಾ ಎಲ್ಲರ ಮನ ಗೆದ್ದಿದ್ದರು. ಜಿಯಾ ಖಾನ್ ಅವರ ಮೊದಲ ಚಿತ್ರಕ್ಕೆ ಅತ್ಯುತ್ತಮ ಚೊಚ್ಚಲ ಮಹಿಳೆಗಾಗಿ ಫಿಲ್ಮ್‌ಫೇರ್ ಅನ್ನು ಸಹ ನೀಡಲಾಯಿತು. ಈ ಚಿತ್ರದ ನಂತರ, ಅವರು ಅಮೀರ್ ಖಾನ್ ಅವರೊಂದಿಗೆ ಗಜನಿ ಚಿತ್ರದಲ್ಲಿ ಕಾಣಿಸಿಕೊಂಡರು. ಗಜನಿಯಲ್ಲಿ ಅವರದ್ದು ಪ್ರಮುಖ ಪಾತ್ರವಾಗಿತ್ತು.

ಜಿಯಾ ಖಾನ್ ಪತ್ರಕರ್ತೆಯಾಗುವ ಮೂಲಕ ಈ ಚಿತ್ರದಲ್ಲಿ ನಟಿಸಿದ್ದರು. ಇದರ ನಂತರ ಅವರು ಅಕ್ಷಯ್ ಕುಮಾರ್ ಅವರ ಹೌಸ್‌ಫುಲ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದು, ಬ್ಯಾಕ್ ಟು ಬ್ಯಾಕ್ ನಟಿಗೆ ಮೂವರು ದೊಡ್ಡ ಸ್ಟಾರ್ ಗಳ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು. ಆದರೆ, ಅಭಿಮಾನಿಗಳು ಜಿಯಾ ಅವರನ್ನು ಇನ್ನಷ್ಟು ಚಿತ್ರಗಳಲ್ಲಿ ನೋಡುವ ನಿರೀಕ್ಷೆಯಲ್ಲಿದ್ದರು. ಅದೇ ಸಮಯದಲ್ಲಿ, ನಟಿ ಇಹಲೋಕ ತ್ಯಜಿಸಿದ್ದರು. ಜಿಯಾ 3 ಜೂನ್ 2023 ರಂದು ತನ್ನ ಮುಂಬೈ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಇದನ್ನೂ ಓದಿ: ಎರಡು ಲಿಂಗಗಳೊಂದಿಗೆ ಜನಿಸಿದ ಮಗು, ಫೋಟೋ ವೈರಲ್!‌

Leave A Reply

Your email address will not be published.