Dr. G. Parameshwar: ತುಮಕೂರು ಪ್ರಚಾರ ವೇಳೆ ಡಾ ಜಿ ಪರಮೇಶ್ವರ್​ ಮೇಲೆ ಕಲ್ಲೆಸೆತ ; ಗಂಭೀರ ಗಾಯ ಆಸ್ಪತ್ರೆಗೆ ದಾಖಲು

Dr. G. Parameshwar: ತುಮಕೂರು : ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಪ್ರಚಾರ ವೇಳೆ ಗುಂಪಿನಲ್ಲಿದ್ದ ದುಷ್ಕರ್ಮಿಯಿಂದ ಡಾ ಜಿ ಪರಮೇಶ್ವರ್​ ಮೇಲೆ ಕಲ್ಲೆಸೆತ ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ಬೆಳಕಿಗೆ ಬಂದಿದೆ.

 

Dr. G. Parameshwar

ವಿಧಾನ ಸಭೆ ಚುನಾವಣೆ ಹಿನ್ನೆಲೆ ತುಮಕೂರಿನ ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಪ್ರಚಾರ ಕಾರ್ಯದಲ್ಲಿ ಭರ್ಜರಿಯಾಗಿ ತೊಡಗಿದ್ದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರನ್ನು ಎತ್ತಿಕೊಂಡು ಕುಣಿಯುತ್ತಿದ್ದರು. ಬಳಿ ಹೂವಿನ ಹಾರವನ್ನು ಕಾರ್ಯಕರ್ತರು ಹಾಕೋದಕ್ಕೆ ಮುಂದಾಗುತ್ತಿದ್ದಂತೆ ಗುಂಪಿನಲ್ಲಿದ್ದ ಜನರು ಕಲ್ಲುಗಳನ್ನು ತೂರಾಟ ನಡೆಸಿದ್ದಾರೆ.

Image Credit Source: Prajavani

 

ಕಲ್ಲು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ (Dr. G. Parameshwar)  ತಲೆಗೆ ತಾಗಿದ್ದು, ಗಂಭೀರ ಗಾಯಗೊಂಡು ರಕ್ತಸ್ರಾವಗೊಂಡಿದ್ದು ತಲೆಯ ಮೇಲೆ ಕೈಯನ್ನು ಇಟ್ಟೇ, ನಡೆದುಕೊಂಡು ಬರುವುದನ್ನು ಕಂಡ ಕಾರ್ಯಕರ್ತರು ಓಡೋಡಿ ಬಂದು ನೋಡಿದಾಗ ರಕ್ತ ಹರಿಯುತ್ತಿರೋದನ್ನು ಕಂಡು ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆಗಾಗಿ ಕರೆದುಕೊಂಡಿದ್ದಾರೆ. ಬಳಿಕ ಅಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಯಾರೋ ದುಷ್ಕರ್ಮಿಗಳಿಂದ ಈ ಕೃತ್ಯ ಎಸಗಲಾಗಿದೆ ಎಂದು ವರದಿಯಾಗಿದೆ.

 

ಇದನ್ನು ಓದಿ: P.M. Narendra Modi: ನಾಳೆ ಪ್ರಧಾನಿ ಮೋದಿ ಅಬ್ಬರ ಮತ ಪ್ರಚಾರ : ವಾಹನ ಸವಾರರೇ.. ಈ ಸಂಚಾರ ಮಾರ್ಗ ನಿರ್ಬಂಧ 

1 Comment
  1. MichaelLiemo says

    can i buy ventolin over the counter in australia: buy Ventolin – buy ventolin uk
    ventolin inhaler for sale

Leave A Reply

Your email address will not be published.