Dolo 650 CEO: ಬೆಂಗಳೂರಲ್ಲಿ 66 ಕೋಟಿ ರೂ ಮನೆ ಖರೀದಿಸಿದ ಡೋಲೋ 650 ಸಿಇಒ!! ಅಬ್ಬಬ್ಬಾ, ಕಾಲಿ 2 ವರ್ಷಗಳಲ್ಲಿ ಇವರ ಆಸ್ತಿಯಲ್ಲಾದ ಏರಿಕೆ ಎಷ್ಟು ಗೊತ್ತಾ?
Dolo 650 CEO : ಡೋಲೋ 650 ಮಾತ್ರೆ ಕುರಿತು ಹೆಚ್ಚು ಹೇಳಬೇಕಿಲ್ಲ. ಭಾರತದ ಪ್ರತಿ ಮನೆಯಲ್ಲೂ ಡೋಲೋ 650 ಹೆಸರು ಕೇಳದವರಿಲ್ಲ. ಬಹುತೇಕ ಮನೆಗಳಲ್ಲಿ ಡೋಲೋ 650 ಮಾತ್ರೆ ಬಳಸಿದ್ದಾರೆ. ಅದರಲ್ಲೂ ಕೂಡ ಕೋವಿಡ್ ವೇಳೆ ಆ ಒಬ್ಬಳ ಹೆಣ್ಣು ಮಗಳ ಬೈಟ್ ಒಂದರಿಂದಾಗಿ, ನಂತರ ಆಕೆ ಒಳಗಾದ ಟ್ರೋಲ್ ನಿಂದಾಗಿ ಅದರ ಜನಪ್ರಿಯತೆ ಎಲ್ಲೆಲ್ಲೂ ಹರಡಿದೆ. ಇದು ಡೋಲೋ ಮಾತ್ರೆಯ ಮಾಲಿಕನ ಆಸ್ತಿಯನ್ನೇ ದುಪ್ಪಟ್ಟು ಮಾಡಿದೆ. ಅಂತೆಯೇ ಇದೀಗ ಡೋಲೋ 650 ಮಾತ್ರೆ ಕಂಪನಿ ಮುಖ್ಯಸ್ಥ (Dolo 650 CEO) ಬೆಂಗಳೂರಿನಲ್ಲಿ ಬರೋಬ್ಬರಿ 66 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ!
ಹೌದು, ಕೋಟಿ ಕೋಟಿ ಆದಾಯಗಳಿಸುತ್ತಿರುವ ಡೋಲೋ ಕಂಪನಿ ಸಿಇಒ ದಿಲೀಪ್ ಸುರಾನ ಇದೀಗ ಬೆಂಗಳೂರಿನಲ್ಲಿ ಬರೋಬ್ಬರಿ 66 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿರುವ ಈ ಮನೆ ಹಾಗೂ ನಿವೇಷನ ಜಾಗ 12,043 ಚದರ ಅಡಿ ವಿಸ್ತಾರವಾಗಿದೆ. ಇದರಲ್ಲಿ 8,373 ಚದರ ಅಡಿಯಲ್ಲಿ ಭವ್ಯ ಬಂಗಲೆ ಇದೆ.
ಜಿಜಿ ರಾಜೇಂದ್ರ ಕುಮಾರ್, ಸಧಾನ ಹಾಗೂ ಮನು ಗೌತಮ್ ಅವರ ಬಳಿಯಿಂದ ಈ ದುಬಾರಿ ಬಂಗಲೆ ಖರೀದಿಸಲಾಗಿದೆ.ಈ ಮನೆ ಖರೀದಿಸಿದ ನೋಂದಣಿ ಮಾಡಿಕೊಂಡಿದ್ದಾರೆ. ಇದರ ಸ್ಟಾಂಪ್ ಡ್ಯೂಟಿ ಬೆಲೆ 3.33 ಕೋಟಿ ರೂಪಾಯಿ. ಇದೀಗ ಡೋಲೋ ಕಂಪನಿ ಸಿಇಇ ದಿಲೀಪ್ ಸುರಾನ ಬೆಂಗಳೂರಿನಲ್ಲಿ ಅತ್ಯಂತ ದುಬಾರಿ ಮನೆ ಹೊಂದಿರುವ ಆಗರ್ಭ ಶ್ರೀಮಂತರ ಪಟ್ಟಿಗೆ ಸೇರಿಕೊಂಡಿದ್ದಾರೆ.
ದಿಲೀಪ್ ಸುರಾನ ತಂದೆ ಜಿಸಿ ಸುರನಾ 1973ರಲ್ಲಿ ಬೆಂಗಳೂರಿಗೆ ಬಂದರು. ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಜಿಸಿ ಸುರಾನಾ ವೃತ್ತಿಯಲ್ಲಿ ಅಕೌಂಟೆಂಟ್ ಆಗಿದ್ದರು. ಆದರೆ ದೆಹಲಿ ಮೂಲದ ಫಾರ್ಮಾ ಕಂಪನಿಯ ಔಷಧಿಗಳ ಸೇಲ್ಸ್ ಮೂಲಕ ಬೆಂಗಳೂರಿನಲ್ಲಿ ವೃತ್ತಿ ಆರಂಭಿಸಿದರು. ಐದೇ ವರ್ಷಕ್ಕೆ ಮೈಕ್ರೋ ಲ್ಯಾಬ್ಸ್ ಕಂಪನಿಯನ್ನು ಬೆಂಗಳೂರಿನಲ್ಲಿ ಹುಟ್ಟು ಹಾಕಿದರು. 1983ರಲ್ಲಿ ಪುತ್ರ ದಿಲೀಪ್ ಸುರನಾ ಮೈಕ್ರೋ ಲ್ಯಾಬ್ಸ್ ಕಂಪನಿ ಸೇರಿಕೊಂಡರು.
ಅಂದಹಾಗೆ ಕೋವಿಡ್ ಪರಿಣಾಮ ಹಾಗೂ ಆ ಒಬ್ಬಳು ಹೆಣ್ಣುಮಗಳ ವೈರಲ್ ಆದ ಬೈಟ್ ಕಾರಣದಿಂದ ಡೋಲೋ ಮಾತ್ರೆಯ ಒಡೆಯನ ಆದಾಯದಲ್ಲಿ 2019ರಿಂದ 2021ರ ವರೆಗೆ ಶೇಕಡಾ 244ರಷ್ಟು ಏರಿಕೆಯಾಗಿತ್ತು. ಡೋಲೋ 650 ಮಾತ್ರೆ ಭಾರಿ ವ್ಯಾಪಾರದಿಂದ ದಿಲೀಪ್ ಸುರಾನಾ ಒಟ್ಟು ಆಸ್ತಿ ಇದೀಗ 26,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಬೆಂಗಳೂರು, ಕರ್ನಾಟಕದಲ್ಲಿ ಸೀಮಿತವಾಗಿದ್ದ ಮೈಕ್ರೋ ಲ್ಯಾಬ್ಸ್‌ನ ಡೋಲೋ 650 ಹಾಗೂ ಇತರ ಔಷಧಿಗಳು ಭಾರತದಲ್ಲಿ ವ್ಯಾಪಾರ ವಹಿವಾಟು ಆರಂಭಿಸಿತು.
ಇದನ್ನೂ ಓದಿ: Samantha: ಮತ್ತೆ ಆಸ್ಪತ್ರೆಗೆ ದಾಖಲಾದ ಸಮಂತಾ! ವೆಂಟಿಲೇಟರ್‌ನಲ್ಲಿರೋ ಫೋಟೋ ಕಂಡು ಅಭಿಮಾನಿಗಳಲ್ಲಿ ಆತಂಕ!