BJP-Congress members fight: ಚಿಕ್ಕಮಗಳೂರಿನಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ಹೈಡ್ರಾಮ: ತಳ್ಳಾಟ, ನೂಕಾಟ

BJP-Congress members fight: ಚಿಕ್ಕಮಗಳೂರು (Chikkamagalur)ತಾಲೂಕಿನ ಸಾದರಹಳ್ಳಿಯಲ್ಲಿ ಪ್ರಚಾರ ವೇಳೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ (BJP-Congress members fight)  ನಡೆದ ಘಟನೆ ಬೆಳಕಿಗೆ ಬಂದಿದೆ.

 

ರಾಜ್ಯದೆಲ್ಲೆಡೆ ವಿಧಾನ ಸಭೆ ಚುನಾವಣೆ(election )ದಿನಾಂಕ ಹತ್ತಿರವಾಗುತ್ತಿದ್ದಂತೆ ಎಲ್ಲೆಡೆ ಅಬ್ಬರದ ಪ್ರಚಾರ ನಡೆಸಲಾಗುತ್ತಿದ್ದು, ಈ ಸಂದರ್ಭದಲ್ಲೇ ಕಾರ್ಯಕರ್ತರ ಒಂದೆಡೆ ಟೀಕೆಗಳನ್ನು ನಡೆಯುತ್ತಿದ್ದರೆ ಮತ್ತೊಂದೆಡೆ ಗಲಾಟೆ, ನೂಕಾಟ , ತಳ್ಳಾಟ,  ನಡೆಯುತ್ತಿದೆ. ಇದೀಗ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆಯೇ ಗದ್ದಲ ಉಂಟಾಗಿದೆ.

ಚಿಕ್ಕಮಗಳೂರು ತಾಲೂಕಿನ ಸಾದರಹಳ್ಳಿಯಲ್ಲಿ ಪ್ರಚಾರ ವೇಳೆ ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಹೆಚ್.ಡಿ.ತಮ್ಮಯ್ಯ ಮುಖಾಮುಖಿಯಾಗಿದ್ದರು ಆ ವೇಳೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್.ಡಿ.ತಮ್ಮಯ್ಯ ಪ್ರಸ್ತಾಪ ಮಾಡಿದ್ದಾರೆ.ಈ ಬೆನ್ನಲ್ಲೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ಶುರುವಾಗಿ ತಾರಕ್ಕೇರಿ ನೂಕಾಟ ತಳ್ಳಾಟಕ್ಕೂ ಕಾರಣವಾಯ್ತು.  ಬಳಿಕ ಸಿಟಿ ರವಿ ಕಾರಿನಲ್ಲಿದ್ದಾಗ ಕಾಂಗ್ರೆಸ್ ಕಾರ್ಯಕರ್ತರಿಂದ ಕಿರಿಕ್​ ಮಾಡಿದ್ದು ಕೂಡಲೇ ಅಲ್ಲಿ ಬಂದ H.D.ತಮ್ಮಯ್ಯ ಸಮಾಧಾನಪಡಿಸಿದ್ದಾರೆ ಎಂದು ವರದಿಯಾಗಿದೆ.

 

ಇದನ್ನು ಓದಿ:Mahalakshmi-Ravindar: ‘ ನೀವು ಇಷ್ಟವಾಗುವುದಿಲ್ಲ’ ಎಂದ ರವೀಂದರ್, ಪತಿಯ ಪೋಸ್ಟ್’ಗೆ ಮಹಾಲಕ್ಷ್ಮಿ ಕೊಟ್ಳು ಖಾರದ ಕೌಂಟರ್ !  

Leave A Reply

Your email address will not be published.