Sumalatha Ambareesh: ಆ ಒಂದು ಕುಟುಂಬ ಮಾತ್ರ ಈ ಚುನಾವಣೆಯಲ್ಲೂ ಅತಂತ್ರ ಸ್ಥಿತಿ ಬರಲಿ ಎಂದು ಕಾಯುತ್ತಾ ಕುಳಿತಿದೆ : ಮತ್ತೆ ಎಚ್ಡಿಕೆ ವಿರುದ್ಧ ಹರಿಹಾಯ್ದ ಸುಮಲತಾ ಅಂಬರೀಷ್

HDK- Sumalatha : ರಾಜ್ಯ ವಿಧಾನಸಭೆಯ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಕೆಲವೇ ದಿನಗಳಲ್ಲಿ ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ಎದುರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಭರ್ಜರಿ ಪ್ರಚಾರ ಕೂಡ ನಡೆಯುತ್ತ, ಚುನಾವಣಾ ಕಾವು ರಂಗೇರಿದೆ. ಇನ್ನು ಈ ವೇಳೆ ಸ್ಪರ್ಧಿ ಹಾಗೂ ಪ್ರತಿಸ್ಪರ್ಧಿಗಳು ಆರೋಪ, ಪ್ರತ್ಯಾರೋಪಗಳನ್ನು ಮಾಡುವುದು ಕಾಮನ್ ಆಗಿದೆ. ಅಂತೆಯೇ ಸಂಸದೆ ಸುಮಲತಾ ಅಂಬರೀಷ್(MP Sumalatha Amnbrish) ಅಂತೂ ಇತ್ತೀಚಿನ ಕೆಲವು ದಿನಗಳಿಂದ ಮಾಜಿ ಸಿಎಂ ಕುಮಾರಸ್ವಾಮಿ(HD kumaraswamy) ಅವರ ವಿರುದ್ಧ ನಿರಂತರವಾಗಿ ಕಿಡಿಚಾರುತ್ತಾ ಬಂದಿದ್ದಾರೆ.

ಹೌದು, ಸ್ವಾಭಿಮಾನಿ ಹೆಸರಿನಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್(JDS) ವಿರುದ್ಧ ಗೆದ್ದು ಸಂಸದೆಯಾಗಿ ಇತ್ತೀಚೆಗೆ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿರುವ ಸುಮಲತಾ ಅಂಬರೀಷ್ ಕಳೆದ ಕೆಲವು ದಿನಗಳಿಂದ ಜೆಡಿಎಸ್ ಪಕ್ಷವನ್ನು, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (HDK- Sumalatha) ಅವರನ್ನು ಮಾತಿನಿಂದಲೇ ತಿವಿಯುತ್ತ, ಕಟುವಾಗಿ ಟೀಕಿಸುತ್ತಾ ಬರುತ್ತಿದ್ದಾರೆ. ಅಂತೆಯೇ ನಿನ್ನೆ ಬುಧವಾರ ಮಂಡ್ಯದಲ್ಲಿ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಕೂಡ “ಆ ಒಂದು ಕುಟುಂಬ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ಬರಲಿ ಎಂದು ಕಾಯುತ್ತಾ ಕುಳಿತಿದೆ” ಎಂದು ದೇವೇಗೌಡರ(Devegowda) ಫ್ಯಾಮಿಲಿ ಮೇಲೆ ಹರಿಹಾಯ್ದಿದ್ದಾರೆ.

“ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಾಲಾದರೂ, ಮೂವರು ಸಚಿವರುಗಳು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಆದರೂ ಜಿಲ್ಲೆಗೆ ಅವರ ಕೊಡುಗೆಗಳು ಶೂನ್ಯ. ಮೈ ಶುಗರ್ ಫ್ಯಾಕ್ಟರಿ ಸಮಸ್ಯೆ ನಾನು ಸಂಸದೆಯಾದ ನಂತರ ನನ್ನ ಪ್ರಯತ್ನದಿಂದ ಬಗೆಹರಿಯಿತು. ಹೀಗಾಗಿ ಮಂಡ್ಯದಲ್ಲಿ ಬದಲಾವಣೆ ಬೇಕಿದೆ. ಈ ಭಾಗದ ಜೆಡಿಎಸ್ ಶಾಸಕರು ಯಾವ ಕೆಲಸ ಮಾಡಿದ್ದಾರೆ ಒಂದನ್ನ ತೋರಿಸಿ. ಯಾರೊ ಒಬ್ಬರು ಇನ್ನೂ ಕನಸು ಕಾಣುತ್ತಿದ್ದಾರೆ, ಈ ಸಲವೂ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ಬರಲಿದೆ, ನಾನೇ ಸಿಎಂ ಆಗಬೇಕು ಅಂತ ಕನಸನ್ನು ಕಾಣುತ್ತಿದ್ದಾರೆ, ಆ ಒಂದೇ ಕುಟುಂಬದ ಸುತ್ತ ಅಧಿಕಾರ ಸುತ್ತುತ್ತಿರಬೇಕು ಎಂದು ಬಯಸುತ್ತಿದ್ದಾರೆ ಎಂದು ಪರೋಕ್ಷವಾಗಿ ಹೆಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಇನ್ನು ತಮ್ಮ ಮಾತಿನಲ್ಲಿ ಯೋಗಿ(Yogi Adithyanath) ಸರ್ಕಾರವನ್ನು ಕೊಂಡಾಡಿದ ಅವರು ಈ ಹಿಂದೆ ಉತ್ತರಪ್ರದೇಶ ಗೂಂಡಾ ರಾಜ್ಯ ಎಂದು ಕುಖ್ಯಾತಿಯಾಗಿತ್ತು. ಜನ ತಾವು ಸಂಪಾದಿಸಿದ ಹಣವನ್ನು ರೌಡಿಗಳಿಗೆ ಹಫ್ತಾ ನೀಡಬೇಕಿತ್ತು. ಯೋಗಿಯವರು ಬಂದ ಮೇಲೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಯೋಗಿ ಸರ್ಕಾರ ಬಂದ ಮೇಲೆ ರೌಡಿಗಳು ಓಡಿ ಹೋಗಿದ್ದಾರೆ. ಉತ್ತರ ಪ್ರದೇಶದಲ್ಲಿ ಜನರು ಈಗ ನಿರ್ಭಯವಾಗಿ ಒಡಾಡುತ್ತಿದ್ದಾರೆ, ಕರ್ನಾಟಕದಲ್ಲಿಯೂ ಅಬಿವೃದ್ಧಿಪರ ಕೆಲಸವಾಗಬೇಕೆಂದರೆ ಬಿಜೆಪಿಗೆ ಮತ ನೀಡಿ. ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಿಸಿ. ಗೆಲುವಿಗೆ ಕಾರಣೀಭೂತರಾಗಿ ಎಂದು ಸಂಸದೆ ಸುಮಲತಾ ಅಂಬರೀಷ್ ಮತದಾರರಿಗೆ ಮನವಿ ಮಾಡಿಕೊಂಡರು.

ಇದನ್ನೂ ಓದಿ: Actresses who got pregnant before marriage : ಮದುವೆಗೂ ಮುನ್ನ ಹೊಟ್ಟೆ ಬರಿಸಿಕೊಂಡ ಬಾಲಿವುಡ್ ಬ್ಯೂಟಿಗಳಿವರು! ಇವರ ಕಥೆಗಳೇ ಇಂಟ್ರೆಸ್ಟಿಂಗ್!

Leave A Reply

Your email address will not be published.