Rajasthan: ಕತ್ತೆಯ ಮೂಲಕ ದುಬಾರಿ ಕಾರನ್ನು ಶೋರೂಂ ಗೆ ತಂದ ಮಾಲೀಕ! ಅಷ್ಟಕ್ಕೂ ಆಗಿದ್ದೇನು?
Rajasthan: ನಾವು ಯಾವುದೇ ವಸ್ತು, ವಾಹನ ಏನೇ ಖರೀದಿ ಮಾಡಿದರು ಕೂಡ ಅದು ಹೆಚ್ಚು ಬಾಳಿಕೆ ಬರಬೇಕು ಎಂದು ಬಯಸುವುದು ಸಹಜ. ಅದೇ ರೀತಿ ವಾಹನದ ವಿಚಾರಕ್ಕೆ ಬಂದರೆ ಗುಣಮಟ್ಟ, ಬಣ್ಣ ವಿಶೇಷತೆ, ಮೈಲೇಜ್ ಹೀಗೆ ಹತ್ತು ಹಲವು ವಿಶೇಷತೆಯನ್ನು ಗಮನದಲ್ಲಿಟ್ಟುಕೊಂಡು ಖರೀದಿ ಮಾಡುವುದು ವಾಡಿಕೆ. ಆದರೆ, ಹೀಗೆ ದುಡ್ಡು ವ್ಯಯಿಸಿ ಖರೀದಿ ಮಾಡಿದ ವಾಹನ ಏನಾದರು ಕೊಂಡುಕೊಂಡ ಕೆಲವೇ ದಿನಗಳಲ್ಲಿ ಕೈಕೊಟ್ಟರೆ ಹೇಗಿರಬೇಡ? ಅವರ ಪರಿಸ್ಥಿತಿ ನೀವೇ ಊಹಿಸಿಕೊಳ್ಳಿ! ನಖಶಿಖಾಂತ ಕೋಪ ಬರುವುದು ಖಚಿತ. ಲಕ್ಷಗಟ್ಟಲೆ ದುಡ್ಡು ಸುರಿದು ಕೊಂಡುಕೊಂಡ ವಾಹನ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ವಾಹನ ಖರೀದಿ ಮಾಡುವುದಾದರೂ ಯಾಕೆ? ಎಂಬ ಪ್ರಶ್ನೆ ಸಹಜವಾಗಿ ಕಾಡದಿರದು. ಇದೇ ರೀತಿಯ ಪರಿಸ್ಥಿತಿ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.
ರಾಜಸ್ಥಾನದ(Rajasthan) ಉದಯಪುರದಲ್ಲಿ ದುಬಾರಿ ಹಣ ವ್ಯಯಿಸಿ ಕಾರು ಖರೀದಿ ಮಾಡಿದ ಗ್ರಾಹಕರ ಕಾರು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ಆಕ್ರೋಶಗೊಂಡ ಮಾಲೀಕ ಕಾರನ್ನು ಕತ್ತೆ ಮೂಲಕ ಶೋ ರೂಂಗೆ ಎಳೆದುಕೊಂಡು ಬಂದು ತಮ್ಮ ಅಸಮಾಧಾನ ಆಕ್ರೋಶ ಹೊರ ಹಾಕಿ ಪ್ರತಿಭಟನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಕಾರು ಮಾಲೀಕ ರಾಜ್‌ಕುಮಾರ್ ಉದಯಪುರದ ಮದ್ರು ಕೈಗಾರಿಕಾ ಪ್ರದೇಶದ ಶೋರೂಂ ಒಂದರಿಂದ ಬರೋಬ್ಬರಿ ₹18 ಲಕ್ಷ ಕೊಟ್ಟು ಹೊಸ ಕಾರು ಖರೀದಿ (18 lakhs Car)ಮಾಡಿದ್ದರಂತೆ. ಕೊಂಡುಕೊಂಡ ಕೆಲವೇ ದಿನಗಳಲ್ಲಿ ಕಾರಿನಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿತ್ತಂತೆ. ಆ ಸಂದರ್ಭ ಸರ್ವೀಸ್ ಸೆಂಟರ್ ಮತ್ತು ಡೀಲರ್ ಗಳ ಬಳಿ ಈ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದರು.ಆದರೂ ಕೂಡ ಶೋ ರೂಂ ಮಂದಿ ಮತ್ತು ಡೀಲರ್ ಕಾರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದರು. ಹೀಗಾಗಿ, ಪದೇ ಪದೇ ಕಾರು ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಕೋಪಗೊಂಡ ಕಾರು ಮಾಲೀಕ ಕತ್ತೆಯ ಮೂಲಕ ಕಾರನ್ನು ಶೋ ರೂಂ ಗೆ ಎಳೆದು ತಂದು ಅಸಮಾಧಾನ ಹೊರ ಹಾಕಿದ್ದಾರೆ. ಬರೊಬ್ಬರಿ 18 ಲಕ್ಷದ ಕಾರನ್ನು ಎರಡು ಕತ್ತೆಗಳ ಕೊರಳಿಗೆ ಕಟ್ಟಿ, ಡೋಲು ಬಾರಿಸುತ್ತಾ ಶೋಂ ರೂಮ್ ಕಡೆಗೆ ಒಯ್ಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ(Social Media) ಸಂಚಲನ ಸೃಷ್ಟಿ ಮಾಡಿದೆ.
Never mess with #indians#Udaipur: 18 lakh car broke down, the owner dragged it with donkeys and sent it back to the showroom,
Angry car owner called the showroom but they didn't help. So, he used donkeys to pull his car. Watch why he did that.#hyundai #donkeypullcar #creta pic.twitter.com/OZMsMoFXyd
— Siraj Noorani (@sirajnoorani) April 26, 2023
ಇದನ್ನೂ ಓದಿ: Preetham Gowda: ದೇವೆಗೌಡರ ಬಗ್ಗೆ ನನಗಿರುವ ಗೌರವ ಅವರ ಮನೆಯವರಿಗಿಲ್ಲ – ಬಿಜೆಪಿ ಶಾಸಕ ಪ್ರೀತಮ್ ಗೌಡ ಹೇಳಿಕೆ!