Cough syrup: ಭಾರತದ ಸಂಸ್ಥೆ ತಯಾರಿಸಿದ ಮತ್ತೊಂದು ಕೆಮ್ಮಿನ ಸಿರಪ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ ಕರೆ!!

Cough syrup: ಭಾರತದ ಸಂಸ್ಥೆಯೊಂದು (Indian company) ಕೆಮ್ಮಿನ ಸಿರಪ್ (Cough syrup) ಉತ್ಪಾದಿಸಿದ್ದು, ಇದೀಗ ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ. ಕಳೆದ ಏಳು ತಿಂಗಳ ಅವಧಿಯಲ್ಲಿ ಇದು ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮೂರನೇ ಎಚ್ಚರಿಕೆಯಾಗಿದೆ.

 

ಇದೀಗ ಪಂಜಾಬ್ ರಾಜ್ಯದ ಕ್ಯೂಪಿ ಫಾರ್ಮಾಕಮ್ ಲಿಮಿಟೆಡ್ ಉತ್ಪಾದಿಸಿದ ಹಾಗೂ ಹರ್ಯಾಣಾದ ಟ್ರೆಲಿಯಂ ಫಾರ್ಮಾ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಕೆಮ್ಮಿನ ಸಿರಪ್ ಗೆ ಎಚ್ಚರಿಕೆ ನೀಡಲಾಗಿದೆ. ಸದ್ಯ ಈ ಸಿರಪ್ ಮಾರ್ಷಲ್ ದ್ವೀಪಗಳು ಮತ್ತು ಮೈಕ್ರೋನೇಷ್ಯಾದಲ್ಲಿ ಮಾರಾಟವಾಗುತ್ತಿವೆ ಎನ್ನಲಾಗಿದೆ.

“ಅಕ್ಟೋಬರ್ 2023 ಎಕ್ಸ್‌ಪೈರಿ ಇರುವ ಒಂದು ನಿರ್ದಿಷ್ಟ ಬ್ಯಾಚಿನ ಸಿರಪ್‌ನಲ್ಲಿ ಹಾನಿಕಾರಕ ಮಟ್ಟದ ಅಂಶಗಳು ಪತ್ತೆಯಾಗಿವೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಈ ಸಿರಪ್‌ನಲ್ಲಿ ಕೆಮ್ಮು ಮತ್ತು ಕಫಗಟ್ಟುವ ಸಮಸ್ಯೆಗಾಗಿ Guaifenesinನಲ್ಲಿ ಅಸ್ವೀಕಾರಾರ್ಹ ಮಟ್ಟದ ಡೈತಿಲೀನ್ ಗ್ಲೈಕೋಲ್ (diethylene glycol) ಮತ್ತು ಈಥೈಲೀನ್ ಗ್ಲೈಕೋಲ್ (ethylene glycol) ಇದೆ ಎಂದು ಆಸ್ಟ್ರೇಲಿಯಾದ ಥೆರಾಪೆಟಿಕ್ ಗುಡ್ ಅಡ್ಮಿನಿಸ್ಟ್ರೇಶನ್ ಹೇಳಿದೆ ಎಂದು ತಿಳಿದುಬಂದಿದೆ.

Cough syrup
Image source: varthabharathi

ವಿಶ್ವ ಆರೋಗ್ಯ ಸಂಸ್ಥೆಯು ಈ ಹಿಂದೆ ಗಾಂಬಿಯಾ (gambia) ಮತ್ತು ಉಜ್ಜಿಕಿಸ್ತಾನದಲ್ಲಿ ಮಾರಾಟವಾಗುತ್ತಿದ್ದ ಕೆಮ್ಮಿನ ಸಿರಪ್‌ಗಳ ಬಗ್ಗೆಯೂ ಎಚ್ಚರಿಕೆ ನೀಡಿತ್ತು‌. diethylene glycol ಮತ್ತು ethylene glycol ಹಾನಿಕಾರಕಗಳಿಂದ ಗಾಂಬಿಯಾದಲ್ಲಿ 70 ಕ್ಕೂ ಹೆಚ್ಚು ಮಕ್ಕಳು ಹಾಗೂ ಉಜ್ಜಿಕಿಸ್ತಾನದಲ್ಲಿ 18 ಮಕ್ಕಳು ಕಿಡ್ನಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಹಾಗಾಗಿ ಈ ಸಿರಪ್ ಬಳಸದಂತೆ ಹಾಗೂ ಪೂರೈಕೆ ಸರಪಳಿಗಳ ಮೇಲೆ ನಿಗಾ ಇಡುವಂತೆ ಸಂಬಂಧಿತ ಸಂಸ್ಥೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿತ್ತು. ಇದೀಗ ಅದೇ ಹಾನಿಕಾರಕವಿರುವ ಕೆಮ್ಮಿನ ಸಿರಪ್ ಗೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

 

ಇದನ್ನು ಓದಿ: Rising Heatwave: ಏರುತ್ತಿರುವ ತಾಪಮಾನ, ಮಾರ್ಗಸೂಚಿ ಬಿಡುಗಡೆ ಮಾಡೇಬಿಡ್ತು ಆರೋಗ್ಯ ಇಲಾಖೆ!!!

Leave A Reply

Your email address will not be published.