CM Yogi: ರಾಮ ಮಂದಿರ ನಿರ್ಮಾಣ ಕಾರ್ಯ ಶೀಘ್ರ ಪೂರ್ಣ, ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್ ಕೊಟ್ರು ಬಿಗ್ ಅಪ್ಡೇಟ್
CM Yogi : ಉತ್ತರ ಪ್ರದೇಶದಲ್ಲಿ ಭವ್ಯವಾಗಿ ತಯಾರಾಗುತ್ತಿರುವ ರಾಮಮಂದಿರ ಕಾರ್ಯ ಭರದಿಂದ ಸಾಗಿದೆ. ಇನ್ನೊಂದೇ ವರ್ಷದಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ (CM Yogi) ಆದಿತ್ಯನಾಥ್ ಹೇಳಿದ್ದಾರೆ.
ಮಂಡ್ಯದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳುವ ಸಮಯವನ್ನು ಘೋಷಿಸಿದ್ದಾರೆ. 2024 ರಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣವಾಗುವುದು ಎನ್ನುವ ಬಿಗ್ ಅಪ್ಡೇಟ್ ಅನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಕರ್ನಾಟಕದ ಮತ್ತು ಉತ್ತರ ಪ್ರದೇಶದ ಸಂಬಂಧ ಹಲವು ಶತಮಾನಗಳದ್ದು. ಉತ್ತರ ಕರ್ನಾಟಕ ಮತ್ತು ಉತ್ತರ ಪ್ರದೇಶದ ಸಂಬಂಧ ತ್ರೇತಾಯುಗದಿಂದಲೂ ಇದೆ. ತ್ರೇತಾಯುಗದಲ್ಲಿ ಅಯೋಧ್ಯೆಯ ಶ್ರೀರಾಮಚಂದ್ರನಿಗೆ ಕರ್ನಾಟಕದ ಆಂಜನೇಯ ಸಿಕ್ಕಿದ್ದು, ಜಗತ್ತಿನಲ್ಲೇ ಎಲ್ಲೇ ಹೋದರೂ ರಾಮಮಂದಿರ ಇರುವಲ್ಲಿ, ಆಂಜನೇಯನ ದೇವಸ್ಥಾನವೂ ಇರುತ್ತದೆ. ಹಾಗೆ ಕರ್ನಾಟಕ ಮತ್ತು ಉತ್ತರಪ್ರದೇಶದ್ದು ಅವಿನಾಭಾವ ಸಂಬಂಧ. ಈ ಸಂಬಂಧ ರಾಮ ಹನುಮಂತನಿಗೆ ಇರುವ ಸಂಬಂಧ. ಇದೀಗ ನಿಮ್ಮನ್ನು ನೋಡುವ ಭಾಗ್ಯ ಸಿಕ್ಕಿದ್ದು ಖುಷಿ ಕೊಟ್ಟಿದೆ ” ಎಂದು ಭಾವನಾತ್ಮಕವಾಗಿ ಯೋಗಿ ಆದಿತ್ಯನಾಥ್ ಮಾತಾಡಿದ್ದಾರೆ.
“ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಕಾಂಗ್ರೆಸ್ ಪಕ್ಷ ಕೇವಲ ತುಷ್ಟಿಕರಣದ ರಾಜಕಾರಣ.ಮಾಡುತ್ತಾ ಬಂದಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶವು ಇಂದು ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಯಾವುದೇ ಗಲಭೆ ನಡೆದಿಲ್ಲ. ಅಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ರೌಡಿಗಳನ್ನು ಮಟ್ಟ ಹಾಕಲಾಗಿದೆ. ರೌಡಿಗಳು ಬಾಲ ಬಿಚ್ಚಿದ್ರೆ ಆಸ್ತಿಯನ್ನು ಜಪ್ತಿ ಮಾಡಲಾಗುವುದು ” ಎಂದು ಹೆಮ್ಮೆಯಿಂದ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇದನ್ನೂ ಓದಿ: ನಾನು ರಕ್ತದಲ್ಲಿ ಬರೆದು ಕೊಡುವೆ, ಆತ ವಿನ್ ಆಗಲ್ಲ: ಯಡಿಯೂರಪ್ಪ ಕೋಪದಿಂದ ಹೀಗಂದದ್ದು ಯಾರ ಬಗ್ಗೆ ?